ETV Bharat / briefs

ಸರ್ಕಾರಿ ಅಧಿಕಾರಿಯಿಂದ ನೌಕರಿ‌ ಕೊಡಿಸುವ ನಂಬಿಕೆ: ಹಣ ಪಡೆದು ಮಹಿಳೆಗೆ ವಂಚನೆ - undefined

ರಾಯಬಾಗ ತಾಲೂಕಿನ ಸಿ.ಡಿ.ಪಿ.ಒ ಅಧಿಕಾರಿ ಡಿ.ಎಚ್.ಪಾಯಕ್ ಎಂಬವರು ಜ್ಯೋತಿ ಗಣೇಶ ರಾಠೋಡ್ ಎಂಬವರಿಗೆ ನೌಕರಿ ಕೊಡಿಸುವುದಾಗಿ ಅವರ ಬಳಿಯಿಂದ 1 ಲಕ್ಷ 25 ಸಾವಿರ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ವಂಚನೆಗೆ ಒಳಗಾದ ದಂಪತಿ
author img

By

Published : Jun 18, 2019, 11:01 PM IST

ಚಿಕ್ಕೋಡಿ : ನೌಕರಿ ಕೊಡಿಸುವ ಆಮಿಷವೊಡ್ಡಿದ ಸರ್ಕಾರಿ ಅಧಿಕಾರಿಯೊಬ್ಬ ಹಣ ಪಡೆದ ಬಳಿಕ ವರ್ಗಾವಣೆ ಮೂಲಕ ಬೇರೆಡೆ ಹೋಗಿ ಹಣವನ್ನೂ, ನೌಕರಿಯನ್ನೂ ಕೊಡಿಸದೆ ಸತಾಯಿಸುತ್ತಿರುವ ಪ್ರಕರಣ ರಾಯಬಾಗ ತಾಲೂಕಿನಲ್ಲಿ ನಡೆದಿದೆ.

ವಂಚನೆಗೆ ಒಳಗಾದ ದಂಪತಿ ಎಲ್ಲರ ಮುಂದೆ ಹಣ ಪಡೆದು ಪರಾರಿಯಾದ ಅಧಿಕಾರಿಯನ್ನು ಹಣ ಕೇಳಿದರು.

ಪ್ರಕರಣದ ಹಿನ್ನೆಲೆ:

ರಾಯಬಾಗ ತಾಲೂಕಿನ ಸಿ.ಡಿ.ಪಿ.ಒ, ಡಿ.ಎಚ್.ಪಾಯಕ್ ಎಂಬವರು ಜ್ಯೋತಿ ಗಣೇಶ ರಾಠೋಡ್ ಎಂಬ ಮಹಿಳೆಗೆ ಅಂಗನವಾಡಿ ಕಾರ್ಯಕರ್ತೆಯ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಕೆಯಿಂದ 2013 ರಲ್ಲಿಯೇ 1 ಲಕ್ಷ 25 ಸಾವಿರ ರೂ ಹಣವನ್ನೂ ಪಡೆದಿದ್ದರಂತೆ. ಆದರೆ ಈಗ ಕೆಲಸವನ್ನೂ ಕೊಡಿಸದೇ, ಹಣವನ್ನೂ ಮರಳಿಸದೇ ಸತಾಯಿಸುತ್ತಿದ್ದಾರೆ ಎಂದು ಜ್ಯೋತಿ ಗಣೇಶ್ ಆರೋಪಿಸಿದ್ದಾರೆ.

ಇದರಿಂದ ಬೇಸತ್ತ ಜ್ಯೋತಿ ಅವರ ತಂದೆ ರಾಮರಾವ್ ರಾಠೋಡ್ ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ಸಿ.ಡಿ.ಪಿ.ಒ ಬಳಿ ಹಣ ಮರಳಿ ಕೊಡಿ ಎಂದು ಕೇಳಲು ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿರುವ ಬಗ್ಗೆ ಡಿ.ಎಚ್.ಪಾಯಕ್ ಅಸಹಾಯಕತೆ ತೋಡಿಕೊಂಡಿದ್ದಾರೆ.

Intro:ನೌಕರಿ‌ ಕೊಡಿಸುವುದಾಗಿ ಹಣ ಪಡೆದು ನೌಕರಿ‌ ಕೊಡಿಸದೆ ಪರಾರಿಯಾದ ಅಧಿಕಾರಿBody:

ಚಿಕ್ಕೋಡಿ :

ನೌಕರಿ ಕೊಡಿಸುವ ಆಮಿಷ ತೋರಿಸಿ ಹಣ ಪಡೆದು ಮರುಳಿ ಕೊಡದೆ ಅಲ್ಲಿಂದ ವರ್ಗಾವಣೆ ಮಾಡಿಕೊಂಡು ಬಂದ ಅಧಿಕಾರಿ ಈಗ ಹಣಕೊಡದೆ, ನೌಕರಿ ಕೊಡಿಸದೆ ಸತಾಯಿಸುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ನಡೆದಿದೆ.

2013 ರಲ್ಲಿ ಕೆಲಸ ಕೊಡಿಸುವುದಾಗಿ ರಾಯಬಾಗ ತಾಲೂಕಿನ ಸಿ ಡಿ ಪಿ ಒ ಅಧಿಕಾರಿಯಾದ ಡಿ.ಹೆಚ್.ಪಾಯಕ್ ಅವರು ಜ್ಯೋತಿ ಗಣೇಶ ರಾಠೋಡ ಅವರಿಗೆ ಕೆಲಸ ಕೊಡಿಸುವುದಾಗಿ ಅವರ ಹತ್ತಿರ 1 ಲಕ್ಷ 25 ಸಾವಿರ ಹಣ ಪಡೆದು ಅಂಗನವಾಡಿ ಕಾರ್ಯಕರ್ತೆ ಕೆಲಸ ಕೊಡಿಸುವುದಾಗಿ ಹೇಳಿದರು. ಆದರೆ ಈಗ ಕೆಲಸವನ್ನೂ ನೀಡದೆ ಹಣವನ್ನೂ ಮರಳಿ ಕೊಡದೆ ಸತಾಯಿಸುತ್ತಿದ್ದಾರೆ.

ಇದರಿಂದ ಬೆಸತ್ತ ಗಣೇಶ ಅವರ ತಂದೆ ರಾಮರಾವ್ ರಾಠೋಠ ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ಸಿ ಡಿ ಪಿ ಒ ಅವರ ಬಳಿ ಹಣ ಮರಳಿ ಕೊಡಿ ಎಂದು ಕೇಳಲು ಬಂದಿದ್ದಾರೆ. ಆದರೆ ಈಗ ನನಗೂ ಅದಕ್ಕೆ ಸಂಬಂಧ ಇಲ್ಲ ಅಂತಾ ಕ್ಯಾರೆ ತೆಗೆಯುತ್ತಿದ್ದಾರೆ ಅಧಿಕಾರಿ ಡಿ.ಹೆಚ್.ಪಾಯಕ ಅವರು.

ಕಳೆದ ಒಂದು ವರ್ಷದ ಹಿಂದೆ ರಾಯಬಾಗಕ್ಕೆ ಬಂದ ಸಿಡಿಪಿಒ, 2013 ರಲ್ಲಿ ಹಣ ಪಡೆದರು ಈಗ ನನಗೂ ಅದಕ್ಕೂ ಸಂಬಂಧ ಇಲ್ಲ ಎಂದು ಹೇಳುತ್ತಿದ್ದಾರೆ.

ಈಗ ರಾಯಬಾಗ ಸಿ ಡಿ ಪಿ ಒ ಅಧಿಕಾರಿಯನ್ನು ಹುಡುಕುತ್ತ ಬೀದರನಿಂದ‌ ಬೆಳಗಾವಿಯ ರಾಯಭಾಗಕ್ಕೆ ರಾಮರಾವ್ ದಂಪತಿಗಳು ಬಂದು ನಮ್ಮ ಹಣ ನಮ್ಮಗೆ ಮರಳಿ‌ಕೊಡಿ ಎಂದು ಕೇಳುತ್ತಿದ್ದಾರೆ.

ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಬೈಟ್ 1 : ರಾಮರಾವ್ ರಾಠೋಠ - ಹಣ ಕೊಟ್ಟ ದಂಪತಿಗಳು

ಬಯುಟ್ 2 : ಡಿ.ಹೆಚ್.ಪಾಯಕ - ರಾಯಬಾಗ ಸಿ ಡಿ ಪಿ ಒ ಅಧಿಕಾರಿ

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.