ನವದೆಹಲಿ: ಮೇ.19ರಂದು ದೇಶದಲ್ಲಿ ಕೊನೆಯ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಭಾರತೀಯ ಜನತಾ ಪಾರ್ಟಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಆರಂಭದಲ್ಲಿ ಮಾತನಾಡಿದ ಅಮಿತ್ ಶಾ, ಈ ಮಹಾಚುನಾವಣೆಯಲ್ಲಿ ದೇಶದ ಜನರು ನಮ್ಮೊಂದಿಗಿದ್ದು, ದೇಶದಲ್ಲಿ ಮೋದಿ ಸರ್ಕಾರ ರಚನೆಗೆ ದೇಶದ ಜನರು ಉತ್ಸಾಹ ತೋರಿದ್ದಾರೆಂದು ತಿಳಿಸಿದರು.ಮೋದಿ ನೇತೃತ್ವದಲ್ಲಿ ದೇಶ ಸುರಕ್ಷಿತವಾಗಿದೆ. ಕೇಂದ್ರ ಸರ್ಕಾರ ಎಲ್ಲ ವರ್ಗದ ಜನರಿಗೆ ತಲುಪುವಂತಹ ಯೋಜನೆ ಜಾರಿಗೆ ತಂದಿದ್ದಾರೆ.15 ದಿನಕ್ಕೊಮ್ಮೆ ಮೋದಿ ಸರ್ಕಾರ ಹೊಸ ಯೋಜನೆ ಘೋಷಣೆ ಮಾಡಲಾಗಿದ್ದು,ಭ್ರಷ್ಟ್ರಾಚಾರದ ವಿರುದ್ಧ ಹೋರಾಡಲು ಈ ಚುನಾವಣೆ ಮಹತ್ವವಾಗಿದೆ ಎಂದು ತಿಳಿಸಿದರು.
ನಾವು ಮತ್ತೆ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡುತ್ತೇವೆ.ಈವರೆಗಿನ ಚುನಾವಣೆಗಳಲ್ಲಿ ಅತಿದೊಡ್ಡ ಗೆಲುವು ಲಭ್ಯವಾಗಿದೆ.ಅಧಿಕಾರದ ಅವಧಿ ಅಂತ್ಯಗೊಳ್ಳುತ್ತಿದ್ದು, ಮತ್ತೊಮ್ಮೆ ಹೊಸ ಸರ್ಕಾರ ರಚನೆ ಮಾಡುತ್ತೇವೆಂದು ತಿಳಿಸಿದರು.ಚುನಾವಣೆಗಾಗಿ ತಳಮಟ್ಟದಿಂದಲೇ ಚುನಾವಣಾ ಪ್ರಚಾರ ಆರಂಭ ಮಾಡಿದ್ದು, ಯಶಸ್ಸು ನೀಡಿದೆ ಎಂದು ತಿಳಿಸಿದರು.
ಇದೀಗ ದೇಶದ 16 ರಾಜ್ಯಗಳಲ್ಲಿ ನಾವು ಅಧಿಕಾರ ನಡೆಸುತ್ತಿದ್ದೇವೆ. ಈ ಮಹಾ ಚುನಾವಣೆ ಸಂದರ್ಭದಲ್ಲಿ ಜನತೆ ನಮ್ಮ ಜೊತೆ ಇದ್ದಾರೆ.ದಲಿತರು, ಮಹಿಳೆಯರ, ಆದಿವಾಸಿಗಳ ಅಭಿವೃದ್ದಿಗೆ ಯೋಜನೆಗಳನ್ನು ನಾವು ಜಾರಿಗೆ ತಂದಿದ್ದೇವೆ.ನಾವು ಮತ್ತೆ ಮೋದಿ ಸರ್ಕಾರದಲ್ಲಿ ಅಧಿಕಾರ ನಡೆಸುತ್ತೇವೆ. ನಮ್ಮ ಈ ಬಾರಿಯ ಅಧಿಕಾರವಾಧಿ ಅಂತ್ಯಗೊಳ್ಳುತ್ತಿದೆ. ಮುಂದೆ ಇದಕ್ಕಿಂತಲೂ ಹೆಚ್ಚಿನ ಬಹುಮತದೊಂದಿಗೆ ಆಡಳಿತ ನಡೆಸುತ್ತೇವೆ.ಸ್ವಾತಂತ್ರ್ಯಾ ನಂತರ ನಡೆದ ಚುನಾವಣೆಗಳಲ್ಲಿ ಇದು ಅತ್ಯಂತ ಸುದೀರ್ಘ ಚುನಾವಣೆಯಾಗಿದೆ ಎಂದು ತಿಳಿಸಿದರು.