ಮುಜಾಫರ್‌ನಗರ (ಉತ್ತರ ಪ್ರದೇಶ): ಬಲಪಂಥೀಯ ನಾಯಕ ಅಂಕುರ್ ರಾಣಾ ಅವರಿಗೆ ಬೆದರಿಕೆ ಹಾಕಿದ್ದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 20 ರಂದು ಮುಜಾಫರ್‌ನಗರ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರಿಗೆ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ವಕೀಲ ಸೈಯದ್ ಮುಝಮ್ಮಿಲ್ ಹೈದರ್, ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಚಾರ್ತಾವಲ್ ನಿವಾಸಿ ಅಂಕುರ್ ರಾಣಾ, ಮೇ 13, 2021 ರಂದು ಜುಬೇರ್ ವಿರುದ್ಧ ಚಾರ್ತಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಸುದರ್ಶನ್ ಸುದ್ದಿ ವಾಹಿನಿಯಲ್ಲಿ ತೋರಿಸಿದ್ದ ಬಗ್ಗೆ ಜುಬೈರ್ ಸುಳ್ಳು ಹೇಳಿದ್ದಾರೆ ಎಂದು ರಾಣಾ ಆರೋಪಿಸಿದ್ದಾರೆ ಎಂದು ತಿಳಿಸಿದರು.
ರಾಣಾ ಈ ಸಂಬಂಧ ಜುಬೈರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದಾಗ ಜುಬೈರ್ ನಿಂದಿಸಿ, ಬೆದರಿಕೆ ಹಾಕಿದರು. ಜುಬೈರ್ ವಿರುದ್ಧ ಚಾರ್ತಾವಾಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 192, 504 ಮತ್ತು 506 ರ ಅಡಿ ಪ್ರಕರಣ ದಾಖಲಾಗಿದೆ" ಎಂದು ಸೈಯದ್ ಮುಝಮ್ಮಿಲ್ ಹೇಳಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಇದರ ಆಧಾರದ ಮೇಲೆ ಅ.20 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಜುಬೈರ್‌ಗೆ ಆದೇಶಿಸಲಾಗಿದೆ. ಉತ್ತರ ಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ಆರು ಪ್ರಕರಣಗಳು ಜುಬೈರ್ ವಿರುದ್ಧ ದಾಖಲಾಗಿದೆ. ಸೀತಾಪುರದ ಖೈರಾಬಾದ್, ಲಖಿಂಪುರ ಖೇರಿಯ ಮೊಹಮ್ಮದಿ ಪೊಲೀಸ್ ಠಾಣೆ, ಗಾಜಿಯಾಬಾದ್‌ನ ಲೋನಿ ಬಾರ್ಡರ್ ಪೊಲೀಸ್ ಠಾಣೆ, ಸಿಕಂದರಾರಾವ್ ಮತ್ತು ಕೊತ್ವಾಲಿ ಪೊಲೀಸ್ ಠಾಣೆಗಳಲ್ಲಿ ಹತ್ರಾಸ್ ಮತ್ತು ಮುಜಾಫರ್‌ನಗರ ಜಿಲ್ಲೆಯ ಚಾರ್ತಾವಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಎಲ್ಲ ಪ್ರಕರಣಗಳಲ್ಲಿ, ಜುಬೇರ್ ಸುದ್ದಿ ವಾಹಿನಿಗಳ ನಿರೂಪಕರ ವಿರುದ್ಧ ವ್ಯಂಗ್ಯಾತ್ಮಕ ಹೇಳಿಕೆಗಳನ್ನು ನೀಡಿದ್ದು, ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದರ ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಲ್ಯಾಪ್ಟಾಪ್ ವಶಕ್ಕಾಗಿ ಬಂಧಿತ ಪತ್ರಕರ್ತನೊಂದಿಗೆ ಬೆಂಗಳೂರಿಗೆ ಹಾರಿದ ದೆಹಲಿ ಪೊಲೀಸರು