ಅಮರಾವತಿ (ಆಂಧ್ರಪ್ರದೇಶ): ಸಿಐಡಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ವೈಎಸ್‌ಆರ್‌ಸಿಪಿ ಸಂಸದ ರಘು ರಾಮಕೃಷ್ಣ ರಾಜು ಅವರ ಕಾನೂನು ತಂಡ ನೋಟಿಸ್ ಕಳುಹಿಸಿದೆ. ರಘು ರಾಮಕೃಷ್ಣ ರಾಜು ಸಿಐಡಿ ಬಂಧನಕ್ಕೊಳಗಾದಾಗ ವಶಪಡಿಸಿಕೊಂಡ ದಾಖಲೆಗಳನ್ನು ಮ್ಯಾಜಿಸ್ಟ್ರೇಟ್ಗೆ ಹಿಂದಿರುಗಿಸಬೇಕೆಂದು ಕೋರಿದೆ.
ನರಸಾಪುರ ಲೋಕಸಭಾ ಸಂಸದ ರಘು ರಾಮಕೃಷ್ಣ ರಾಜು ನಿವಾಸದ ಮೇಲೆ ಸಿಐಡಿ ದಾಳಿ ನಡೆಸಿದಾಗ ಅವರ ಫೋನ್ ತೆಗೆದುಕೊಂಡಿದ್ದಾರೆ. ಜತೆಗೆ ಅವರ ನಿವಾಸದ ದಾಖಲೆಗಳನ್ನೂ ವಶಪಡಿಸಿಕೊಂಡಿದ್ದಾರೆ. ಮೊಬೈಲ್ನಲ್ಲಿ ಅತ್ಯಮೂಲ್ಯ ಮಾಹಿತಿಗಳಿದ್ದು, ಅನ್ಲಾಕ್ ಕೋಡ್ ನೀಡುವಂತೆ ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ.
ನನ್ನ ಕರ್ತವ್ಯ ನಿರ್ವಹಿಸಲು ಮೊಬೈಲ್ ನನಗೆ ಅಗತ್ಯವಾಗಿದೆ. ವಾಪಸ್ ಕೊಡದಿದ್ದರೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವುದಾಗಿ ಅಧಿಕಾರಿಗಳಿಗೆ ಸಂಸದ ರಘು ರಾಮಕೃಷ್ಣ ರಾಜು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ನರಸಾಪುರ ಲೋಕಸಭಾ ಕ್ಷೇತ್ರದ ವೈಎಸ್‌ಆರ್‌ಸಿಪಿ ಸಂಸತ್ ಸದಸ್ಯ ರಘು ರಾಮಕೃಷ್ಣ ರಾಜು ಅವರನ್ನು ಮೇ 14ರಂದು ದೇಶದ್ರೋಹ ಆರೋಪದಡಿ ಆಂಧ್ರಪ್ರದೇಶದ ಸಿಐಡಿ ಬಂಧಿಸಿತ್ತು. 124 ಎ, 153 ಎ ಮತ್ತು 505 ಸೆಕ್ಷನ್‌ಗಳ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ:ಆಂಧ್ರ ಡಿಜಿಪಿ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ : ಹಲವು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳೂ ಫಾಲೋ
ಅಲ್ಲದೇ, ಇವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲೂ ತೊಡಗಿದ್ದರು ಎನ್ನಲಾಗಿದೆ. ಮೇ 14ರಂದು ಸಿಐಡಿಯು ಬಂಡಾಯ ವೈಎಸ್‌ಆರ್‌ಸಿಪಿ ಸಂಸದನನ್ನು ಹೈದರಾಬಾದ್ ನಿವಾಸದಿಂದ ಬಂಧಿಸಿ ವಿಚಾರಣೆಗಾಗಿ ಗುಂಟೂರಿಗೆ ವರ್ಗಾಯಿಸಿದ್ದರು. ಇವರಿಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು.