ಸ್ಯಾನ್ ಫ್ರಾನ್ಸಿಸ್ಕೊ: ಶಾರ್ಟ್ಸ್ ಮಾನೆಟೈಸೇಶನ್ ಮೊಡ್ಯೂಲ್ ಮುಂತಾದ ನೀತಿಗಳನ್ನು ಸೇರಿಸಿ ತನ್ನ ಯೂಟ್ಯೂಬ್ ಪಾರ್ಟನರ್ ಪ್ರೊಗ್ರಾಮ್ ನಿಯಮಾವಳಿಗಳನ್ನು ಪುನರ್ ರಚನೆ ಮಾಡಿರುವುದಾಗಿ ಜಾಗತಿಕ ತಂತ್ರಜ್ಞಾನ ಕಂಪನಿ ಗೂಗಲ್ ಹೇಳಿದೆ. ಇದರಿಂದ ಬರುವ ಫೆಬ್ರವರಿ 1 ರಿಂದ ಯೂಟ್ಯೂಬ್ ಪ್ಲಾಟಫಾರ್ಮ್ನಲ್ಲಿರುವ ಶಾರ್ಟ್ಸ್ ವಿಡಿಯೋ ತಯಾರಕರೊಂದಿಗೆ ಜಾಹೀರಾತು ಆದಾಯವನ್ನು ಕಂಪನಿ ಹಂಚಿಕೊಳ್ಳಲು ಸಾಧ್ಯವಾಗಲಿದೆ. ಹೊಸ ಮಾಡ್ಯೂಲ್‌ಗಳು ಕ್ರಿಯೇಟರ್ಗಳಿಗೆ ತಮ್ಮ ಕಂಟೆಂಟ್ ಮೂಲಕ ಗಳಿಸುವ ವಿಧಾನಗಳಲ್ಲಿ ಹೆಚ್ಚು ಅವಕಾಶಗಳನ್ನ ಒದಗಿಸುತ್ತವೆ ಎಂದು ಗೂಗಲ್ ತನ್ನ ಸಪೋರ್ಟ್ ಪುಟದಲ್ಲಿ ತಿಳಿಸಿದೆ.
ಪ್ಲಾಟ್‌ಫಾರ್ಮ್ ಮೇಲೆ ಮಾನೆಟೈಸ್ ಮಾಡಿಕೊಳ್ಳುವ ಎಲ್ಲ ಕ್ರಿಯೇಟರ್ಗಳು ಮೂಲ ಕಾಂಟ್ರಾಕ್ಟ್ ನಿಯಮಗಳಾಗಿರುವ ಬೇಸ್ ಟರ್ಮ್ಗಳಿಗೆ ಸಹಿ ಮಾಡಿದ ನಂತರ, ಕಾಂಟ್ರಾಕ್ಟ್ ಮೊಡ್ಯೂಲ್ಗಳಲ್ಲಿ ತಮ್ಮ ಗಳಿಕೆ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹೊಸ ಮೊಡ್ಯೂಲ್ಗಳು ವಾಚ್ ಪೇಜ್ ಮಾನೆಟೈಸೇಶನ್ ಮೊಡ್ಯೂಲ್, ಶಾರ್ಟ್ಸ್ ಮಾನೆಟೈಸೇಶನ್ ಮೊಡ್ಯೂಲ್ ಮತ್ತು ಕಾಮರ್ಸ್ ಪ್ರಾಡಕ್ಟ್ ಅಡೆಂಡಮ್ ಮೊಡ್ಯೂಲ್ಗಳನ್ನು ಒಳಗೊಂಡಿವೆ.
ವಾಚ್ ಪೇಜ್ನಲ್ಲಿನ ಲಾಂಗ್ ಫಾರ್ಮ್ ಅಥವಾ ಲೈವ್ ಸ್ಟ್ರೀಮಿಂಗ್ ಮೇಲೆ ಯೂಟ್ಯೂಬ್ ಪ್ರೀಮಿಯಂ ಆದಾಯ ಗಳಿಸಬೇಕಾದರೆ, ಬಳಕೆದಾರರು ವಾಚ್ ಪೇಜ್ ಮಾನೆಟೈಸೇಷನ್ ಮೊಡ್ಯೂಲ್ ಅನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಶಾರ್ಟ್ಸ್ ಮಾನೆಟೈಸೇಶನ್ ಮಾಡ್ಯೂಲ್ ನಿಮ್ಮ ಚಾನೆಲ್ ಶಾರ್ಟ್ಸ್ ಫೀಡ್ ನಡುವೆ ನೋಡಲಾದ ವಿಡಿಯೋಗಳಿಂದ ಬರುವ ಜಾಹೀರಾತು ಹಂಚಿಕೊಳ್ಳಲು ಅನುವು ಮಾಡುತ್ತದೆ ಎಂದು ಕಂಪನಿ ಹೇಳಿದೆ.
ಫ್ಯಾನ್ ಫಂಡಿಂಗ್ ಫೀಚರ್ ಒಳಗೊಂಡಿರುವ ಕಾಮರ್ಸ್ ಪ್ರಾಡಕ್ಟ್ ಅಡೆಂಡಮ್ ಅನ್ನು ಈಗಾಗಲೇ ಬಳಕೆದಾರರು ಒಪ್ಪಿಕೊಂಡಿದ್ದರೆ, ಅದನ್ನು ಮತ್ತೆ ಒಪ್ಪಿಕೊಳ್ಳುವ ಅಗತ್ಯವಿಲ್ಲ. ಎಲ್ಲ ಬಳಕೆದಾರರು ಹೊಸ ವೈಪಿಪಿ ನಿಯಮಾವಳಿಗಳನ್ನು ಪರಿಶೀಲಿಸಿ ತಿಳಿದುಕೊಂಡು ಒಪ್ಪಿಕೊಳ್ಳಬೇಕಾಗುತ್ತದೆ. ವೈಪಿಪಿ ಸೇರಲು ಅಥವಾ ಅದರಲ್ಲಿರಲು ಬೇಸ್ ಟರ್ಮ್ಗಳನ್ನು ಒಪ್ಪಿಕೊಳ್ಳುವುದು ಅಗತ್ಯವಾಗಿದೆ. ಯೂಟ್ಯೂಬ್ ಪಾಲುದಾರ ಕಾರ್ಯಕ್ರಮದಲ್ಲಿ ಉಳಿಯಲು ಮತ್ತು ಯೂಟ್ಯೂಬ್ ನಲ್ಲಿ ಹಣಗಳಿಕೆಯನ್ನು ಮುಂದುವರಿಸಲು, ಎಲ್ಲ ಹಣಗಳಿಸುವ ಪಾಲುದಾರರು ಜುಲೈ 10, 2023 ರವರೆಗೆ ಹೊಸ ನಿಯಮಗಳನ್ನು ಪರಿಶೀಲಿಸಲು ಮತ್ತು ಸ್ವೀಕರಿಸಲು ಕಾಲಾವಕಾಶ ಹೊಂದಿರುತ್ತಾರೆ ಎಂದು ಗೂಗಲ್ ಹೇಳಿದೆ.
ಕ್ರಾಪಿನ್ ಅಗ್ರಿಟೆಕ್ ಸಂಸ್ಥೆಯಲ್ಲಿ ಗೂಗಲ್ ಹೂಡಿಕೆ: ಅಗ್ರಿಟೆಕ್ ಸಂಸ್ಥೆ ಕ್ರಾಪಿನ್ ಹೊಸ ಹೂಡಿಕೆದಾರರಾದ ಗೂಗಲ್ ಮತ್ತು ಜೆಎಸ್‌ಆರ್ ಕಾರ್ಪೊರೇಷನ್ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರಾದ ಎಬಿಸಿ ಇಂಪ್ಯಾಕ್ಟ್ ಮತ್ತು ಚಿರಾಟೆ ವೆಂಚರ್ಸ್‌ನಿಂದ 113 ಕೋಟಿಯಷ್ಟು ಮೊತ್ತದ ಹೂಡಿಕೆ ಪಡೆದುಕೊಂಡಿದೆ. ಜಾಗತಿಕ ಕೃಷಿ ವಲಯದಲ್ಲಿ ಡಿಜಿಟಲೀಕರಣ ಮತ್ತು ಮುನ್ಸೂಚಕ ಬುದ್ಧಿಮತ್ತೆಗಾಗಿ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಇಂಟೆಲಿಜೆಂಟ್ ಕೃಷಿ ಕ್ಲೌಡ್ ಪ್ಲಾಟ್‌ಫಾರ್ಮ್ ಕ್ರಾಪಿನ್ ಕ್ಲೌಡ್ ಅನ್ನು ವಿಸ್ತರಿಸಲು ಈ ನಿಧಿಗಳನ್ನು ಬಳಕೆ ಮಾಡಲಿದೆ.
ಈ ಫಂಡಿಂಗ್ ಸುತ್ತಿನ ಬೆಂಬಲದೊಂದಿಗೆ ಕ್ರಾಪಿನ್ ತನ್ನ ಉತ್ಪನ್ನಗಳಲ್ಲಿ ಮತ್ತಷ್ಟು ಹೂಡಿಕೆ ಮಾಡಲು ಸಾಧ್ಯವಾಗುತ್ತದೆ ಮತ್ತು ಕ್ರಾಪಿನ್ AI ಲ್ಯಾಬ್‌ಗಳ ಮೂಲಕ ಮುಂದಿನ ಪೀಳಿಗೆಯ ಪ್ರಿಡಿಕ್ಟಿವ್ ಇಂಟೆಲಿಜೆನ್ಸ್ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಕ್ರಾಪಿನ್ ಕ್ಲೌಡ್‌ನ ಸಾಮರ್ಥ್ಯಗಳನ್ನು ವಿಸ್ತರಿಸುತ್ತದೆ.
ಇದನ್ನೂ ಓದಿ: ಗೂಗಲ್ನಿಂದ ಕ್ಷಮೆಯಾಚನೆ: ಎಚ್ಚರಿಕೆ ನೀಡಿ ಕಾನೂನು ಕ್ರಮ ಕೈಬಿಟ್ಟ ಸರ್ಕಾರ