ಧನ್‌ಬಾದ್, ಜಾರ್ಖಂಡ್: ಅವಳು ನಿನ್ನ ಪ್ರೇಯಸಿಯಲ್ಲ ಅಂತ ಸ್ನೇಹಿತ ರೇಗಿಸ್ತಾನೆ. ಇವನೋ ಹಠಕ್ಕೆ ಬಿದ್ದವನಂತೆ ಅವಳು ನನ್ನ ಪ್ರೇಯಿಸಿಯೇ ಎಂದು ವಾದಿಸುತ್ತಾನೆ. ಅವಳು ನಿನ್ನನ್ನು, ನೀನು ಅವಳನ್ನು ಪ್ರೀತಿಸುತ್ತಿದ್ದರೆ ಸಾಕ್ಷಿ ಕೊಡು ಎಂದು ಆ ಸ್ನೇಹಿತ ಕೇಳ್ತಾನೆ. ಇವನು ಇಗೋ ಸಾಕ್ಷಿ ತರುವೆ ಎಂದು ಹೇಳಿ ಆಕೆಯನ್ನು ಪುಸಲಾಯಿಸಿ ದೈಹಿಕ ಸಂಬಂಧ ಹೊಂದಿದ್ದಲ್ಲದೇ, ಅದನ್ನು ವಿಡಿಯೋ ಮಾಡಿ ಆ ಸ್ನೇಹಿತನಿಗೆ ಕಳುಹಿಸುತ್ತಾನೆ.
ಇದು ಯಾವುದೋ ಸಿನಿಮಾದ ಎಳೆಯಲ್ಲ. ಜಾರ್ಖಂಡ್ನ ಧನಬಾದ್ನಲ್ಲಿ ನಡೆದ ನಿಜ ಘಟನೆ. ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ತನ್ನ ಪ್ರೇಮಿ ಎಂದು ಸಾಬೀತುಪಡಿಸಲು ಸ್ನೇಹಿತರೊಂದಿಗೆ ಸವಾಲು ಹಾಕಿ, ಆಕೆಯನ್ನು ಅತ್ಯಾಚಾರ ಮಾಡಿದ ಕೇಸಲ್ಲಿ ಜೈಲು ಕಂಬಿ ಎಣಿಸುತ್ತಿದ್ದಾನೆ.
ಪ್ರಕರಣವೇನು?: ಸ್ನೇಹಿತರು ಹರಟೆ ಹೊಡೆಯುತ್ತಿದ್ದಾಗ ಬಾಲಕಿಯ ಜೊತೆ ತಾನು ಪ್ರೇಮ ಸಂಬಂಧ ಹೊಂದಿದ್ದಾಗಿ ಒಬ್ಬ ಹೇಳಿದ್ದಾನೆ. ಇನ್ನೊಬ್ಬ ಅವಳು ನನ್ನ ಪ್ರೇಯಸಿ ಎಂದು ವಾದಿಸಿದ್ದಾನೆ. ಇಬ್ಬರ ಮಧ್ಯೆ ಅವಳಿಗಾಗಿ ಕಿತ್ತಾಟ ನಡೆದಿದೆ. ಈ ವೇಳೆ ಯುವಕ ಅವಳು ನನ್ನ ಪ್ರೇಯಸಿ ಎಂಬುದಕ್ಕೆ ಸಾಕ್ಷಿ ನೀಡುವೆ ಎಂದು ಚಾಲೆಂಜ್ ಹಾಕಿದ್ದಾನೆ.
ಮರುದಿನ ಆ ಯುವಕ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಪೊದೆಗೆ ಕರೆದೊಯ್ದು ಆಕೆಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ತಾನು ಚಾಲೆಂಜ್ ಹಾಕಿದ ಗೆಳೆಯನಿಗೆ ಸಾಕ್ಷಿಯಾಗಿ ನೀಡಲು ತನ್ನ ರಾಸಲೀಲೆಯನ್ನು ವಿಡಿಯೋ ಕೂಡ ಮಾಡಿದ್ದಾನೆ. ಅವಳು ನನ್ನವಳು ಎಂಬುದರ ಸಾಕ್ಷಿಯಾಗಿ ಯುವಕ ಆ ವಿಡಿಯೋವನ್ನು ಚಾಲೆಂಜ್ ಹಾಕಿದ ಸ್ನೇಹಿತನಿಗೆ ಕಳುಹಿಸಿದ್ದಾನೆ.
ಇಲ್ಲೇ ನೋಡಿ ಯಡವಟ್ಟಾಗಿದ್ದು, ಈ ವಿಡಿಯೋವನ್ನು ನೋಡಿದ ಆ ಸ್ನೇಹಿತ ಇದನ್ನು ಅಪ್ರಾಪ್ತೆಯ ಕುಟುಂಬಸ್ಥರಿಗೆ ತೋರಿಸಿದ್ದಾನೆ. ಇದರಿಂದ ಕೆರಳಿದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ ಯುವಕನ ಬಂಧನ: ವಿಷಯ ಗಮನಕ್ಕೆ ಬಂದ ನಂತರ ಸಂಬಂಧಿಕರು ಸ್ಥಳೀಯ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಬಾಲಕಿಯನ್ನು ಅತ್ಯಾಚಾರ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಿಕೊಂಡು, ಯುವಕನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಸ್ನೇಹಿತನ ಮಾತಿಗೆ ಕಟ್ಟುಬಿದ್ದು ಪ್ರೀತಿಸುತ್ತಿದ್ದ ಹುಡುಗಿಯನ್ನು ರೇಪ್ ಮಾಡಿ, ಅದನ್ನು ವಿಡಿಯೋ ಮಾಡಿ ಪ್ರೇಮಿ ಜೈಲುಗಳ ಹಿಂದೆ ಸರಳುಗಳನ್ನು ಎಣಿಸುವಂತಾಗಿದೆ.
ಓದಿ: ತಂದೆ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ