ಮುಂಬೈ: ತನ್ನ ತಾಯಿಗೆ ವ್ಯಕ್ತಿಯೊಬ್ಬ ಅವಮಾನ ಮಾಡಿದ್ದಕ್ಕಾಗಿ, ಯುವಕನೊಬ್ಬ 15 ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಸೂರಜ್ ಸಾಹು ಎಂಬಾತ 15 ವರ್ಷದ ಮಾಂಗ್ಲುಪಾಂಡೆಯನ್ನು ಅಪಹರಿಸಿ ಕಲ್ಲಿನಿಂದ ಜಜ್ಜಿ ಹತ್ಯೆಗೈದಿದ್ದಾನೆ.
ಸೂರಜ್ ತಾಯಿಯೊಂದಿಗೆ ಮಾಂಗ್ಲುಪಾಂಡೆ ಚಿಕ್ಕಪ್ಪ ಕೆಟ್ಟದ್ದಾಗಿ ವರ್ತಿಸಿ ಅವಮಾನ ಮಾಡಿದ್ದನಂತೆ. ಇದರಿಂದ ಕುಪಿತಗೊಂಡ ಸೂರಜ್, ಆರೋಪಿಯ ಅಣ್ಣನ ಮಗನನ್ನು ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಎಂಐಡಿಸಿ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಶ್ರೀಲಂಕಾ ಪ್ರಜೆಗಳ ಬಂಧನ ಕೇಸ್: ತನಿಖೆಗಾಗಿ ಮಂಗಳೂರಿಗೆ ಆಗಮಿಸಿದ ತಮಿಳುನಾಡು ಪೊಲೀಸ್ ತಂಡ
ಆರೋಪಿಗಳು ಮಾಂಗ್ಲುವನ್ನು ಬಿಡಬೇಕಾದರೆ, ಅವನ ಚಿಕ್ಕಪ್ಪನ ತಲೆ ಕಡಿದು ವಾಟ್ಸ್ಆ್ಯಪ್ನಲ್ಲಿ ಫೋಟೋ ಕಳಿಸಬೇಕು. ಇಲ್ಲವಾದಲ್ಲಿ, ನಿಮ್ಮ ಮಗನನ್ನು ಕೊಲೆ ಮಾಡುತ್ತೇವೆ ಎಂದು ಬಾಲಕನ ಪೋಷಕರಿಗೆ ಬೆದರಿಕೆ ಹಾಕಿದ್ದರಂತೆ. ಬೆದರಿಕೆ ಹಾಕಿದ ಕೆಲವೇ ನಿಮಿಷಗಳಲ್ಲಿ ಕಿಡಿಗೇಡಿಗಳು ಮಾಂಗ್ಲುವನ್ನು ಹತ್ಯೆ ಮಾಡಿದ್ದರು.