ETV Bharat / bharat

ಕೊರೊನಾ ಲಸಿಕೆ ವಿತರಣೆಯಲ್ಲಿ ರಾಜಕೀಯ ಸಲ್ಲದು: ಸೀತಾರಾಮ್ ಯೆಚೂರಿ

author img

By

Published : Jan 6, 2021, 12:50 PM IST

ಕೊರೊನಾ ಲಸಿಕೆ ವಿತರಣೆ ಸಂಬಂಧ, ಅದರ ವೈಜ್ಞಾನಿಕ ಪುರಾವೆಗಳನ್ನು ಹಂಚಿಕೊಳ್ಳಬೇಕೆಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ

ನವದೆಹಲಿ: ಕೊರೊನಾ ಲಸಿಕೆ ವಿತರಣೆ ಸಂಬಂಧ ರಾಜಕೀಯ ಇರಬಾರದು. ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಲು ಲಸಿಕೆಯ ವೈಜ್ಞಾನಿಕ ಪುರಾವೆಗಳನ್ನು ಹಂಚಿಕೊಳ್ಳಬೇಕೆಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

"ಕೊರೊನಾ ಲಸಿಕೆಯ ಬಗ್ಗೆ ಯಾವುದೇ ರಾಜಕೀಯ ಇರಬಾರದು. ಲಸಿಕೆಗಳ ಮೇಲಿನ ರಾಜಕೀಯವು ಅಪ್ರಸ್ತುತ ಮತ್ತು ಬೇಜವಾಬ್ದಾರಿಯಾಗಿದೆ. ಅದರ ಮೇಲಿನ ರಾಜಕೀಯವು ಮಾನವೀಯತೆಗೆ ವಿರುದ್ಧವಾಗಿದೆ. ಲಸಿಕೆ ಉಚಿತವಾಗಿರಬೇಕು. ಇನ್ನು ಲಸಿಕೆಗಳ ವೈಜ್ಞಾನಿಕ ಪುರಾವೆಗಳನ್ನು ಪಾರದರ್ಶಕವಾಗಿ ಸರ್ಕಾರ ಹಂಚಿಕೊಳ್ಳಬೇಕು" ಎಂದು ಅವರು ಹೇಳಿದರು.

ಇದನ್ನು ಓದಿ: ರಾಧಿಕಾ ಖಾತೆಗೆ ಹಣ ವರ್ಗಾವಣೆ ಪ್ರಕರಣ : ಇಂದು ಮಧ್ಯಾಹ್ನ ಸುದ್ದಿಗೋಷ್ಠಿ

.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.