ಆಗ್ರಾ: ಆಗ್ರಾದಿಂದ ದೆಹಲಿಯವರೆಗಿನ ಯಮುನಾ ಎಕ್ಸ್‌ಪ್ರೆಸ್ ವೇ ವೇಗಕ್ಕೆ ಹೆಸರುವಾಸಿಯಾಗಿತ್ತು, ಇದೀಗ ಕ್ರೌರ್ಯ ಮತ್ತು ಮೃತ ದೇಹಗಳ ಡಂಪಿಂಗ್ ವಲಯವಾಗಿದೆ ಪರಿವರ್ತನೆಗೊಂಡಿದೆ. ಆಗ್ರಾದಿಂದ ನೋಯ್ಡಾಕ್ಕೆ 165 ಕಿ.ಮೀ. ಉದ್ದದ ಯಮುನಾ ಎಕ್ಸ್‌ಪ್ರೆಸ್‌ವೇ ಆಗ್ರಾ ಮತ್ತು ಮಥುರಾ ಜಿಲ್ಲೆಗಳ ಗಡಿಯಲ್ಲಿ ಕೂಲೆ ನಡೆಸಿದ ನಂತರ ಅನೇಕ ಅಪರಿಚಿತ ಶವಗಳನ್ನು ಇಲ್ಲಿ ಎಸೆಯಲಾಗುತ್ತಿದೆ.
ಇತ್ತೀಚೆಗೆ ಮಥುರಾ ಪೊಲೀಸರು ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಸಿಕ್ಕಿದ ಆಯುಷಿ ಯಾದವ್ ಹತ್ಯೆ ಪ್ರಕರಣವನ್ನು ಬಹಿರಂಗಪಡಿಸಿ ತಂದೆ ಮತ್ತು ತಾಯಿಯನ್ನು ಜೈಲಿಗೆ ಕಳುಹಿಸಿದ್ದರು, ಆದರೆ ದೆಹಲಿ, ನೋಯ್ಡಾ, ಗಾಜಿಯಾಬಾದ್, ಆಗ್ರಾ ಮತ್ತು ಮಥುರಾ ಜಿಲ್ಲೆಯ ಗಡಿಯಲ್ಲಿರುವ ಯಮುನಾ ಎಕ್ಸ್‌ಪ್ರೆಸ್‌ವೇ ಮತ್ತು ಅದರ ಸುತ್ತಲೂ 12 ಕ್ಕೂ ಹೆಚ್ಚು ಅಪರಿಚಿತ ಮೃತ ದೇಹಗಳು ಗುರುತಿಸಲಾಗದ ಸ್ಥಿತಿಯಲ್ಲಿ ಕಂಡು ಬಂದಿವೆ.
ಇನ್ನೊಂದು ಸ್ಥಳದಲ್ಲಿ ಕೊಂದ ನಂತರ ಮೃತ ದೇಹವನ್ನು ಗುರುತಿಸಲಾಗದಂತೆ ಸುಟ್ಟು ಅಥವಾ ವಿರೂಪಗೊಳಿಸಿದ್ದರಿಂದ ಗುರುತು ಪತ್ತೆಯಾಗಿಲ್ಲ . ಈ ಎಲ್ಲಾ ಅಪರಿಚಿತ ಮೃತದೇಹಗಳನ್ನು ಸುಟ್ಟುಹಾಕಲಾಯಿತು ನಂತರ ಡಿಎನ್ಎ ಪರೀಕ್ಷೆ ಕೂಡಾ ಮಾಡಲಾಗಿದೆ.
12 ಕಿಮೀ ವ್ಯಾಪ್ತಿ ನಾಲ್ಕು ಯುವತಿಯರ ಶವ ಪತ್ತೆ: ಆಗ್ರಾದಲ್ಲಿ ಸುಮಾರು 50 ಕಿಲೋಮೀಟರ್‌ಗಳಷ್ಟು ಯಮುನಾ ಎಕ್ಸ್‌ಪ್ರೆಸ್‌ವೇ ಹಾದು ಹೋಗುತ್ತದೆ. 2021 ರಲ್ಲಿ ಆಗ್ರಾ, ಯಮುನಾ ಎಕ್ಸ್‌ಪ್ರೆಸ್ ವೇ ನ 10 ರಿಂದ 12 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಾಲ್ಕು ಯುವತಿಯರ ಶವಗಳು ಪತ್ತೆಯಾಗಿದ್ದವು. ನಾಲ್ವರು ಬಾಲಕಿಯರ ಗುರುತು ಇನ್ನೂ ಪತ್ತೆಯಾಗಿಲ್ಲ. ಬಾಲಕಿಯರ ಹತ್ಯೆಯೂ ನಿಗೂಢವಾಗಿಯೇ ಉಳಿದಿದ್ದು, ಆರೋಪಿಗಳೂ ಪೊಲೀಸರ ಕೈಗೂ ಸಿಗುತ್ತಿಲ್ಲ.
ಸೂಟ್‌ಕೇಸ್‌ನಲ್ಲಿ ಬಾಲಕಿ ಶವ ಪತ್ತೆ: ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ ಎಂದು ಮಥುರಾದ ಎಸ್‌ಪಿ ಸಿಟಿ ಎಂಪಿ ಸಿಂಗ್ ತಿಳಿಸಿದ್ದಾರೆ. ಆಕೆಯನ್ನು ಆಯುಷಿ ಯಾದವ್ ಎಂಬ ಹೆಸರಿನಿಂದ ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಆಯುಷಿಯ ತಂದೆ ಮತ್ತು ತಾಯಿಯನ್ನು ಜೈಲಿಗೆ ಕಳುಹಿಸಲಾಗಿತ್ತು. ಈಗ ಜಿಲ್ಲೆಯ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ವಿಶೇಷ ಗಸ್ತು ನಡೆಸಲಾಗುತ್ತಿದೆ. ಇದರಿಂದಾಗಿ ಅಪರಾಧ ಪ್ರವೃತ್ತಿಯ ಜನರ ಮೇಲೆ ನಿಗಾ ಇಡಲಾಗಿದೆ. ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿನ ಪ್ರತಿಯೊಂದು ಹಂತಗಳಲ್ಲಿ ಮೇಲ್ವಿಚಾರಣೆಯನ್ನು ಹೆಚ್ಚಿಸಲಾಗಿದೆ.
ಕಟ್ಟು ನಿಟ್ಟಿನ ನಿಗಾ ವಹಿಸಿದ ಪೊಲೀಸರು: ಯಮುನಾ ಎಕ್ಸ್‌ಪ್ರೆಸ್‌ವೇಯ ಖಂಡೌಲಿ ಮತ್ತು ಎತ್ಮಾದ್‌ಪುರ ಪೊಲೀಸ್ ಠಾಣೆಗಳಿಗೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಸೂಚನೆಗಳನ್ನು ನೀಡಲಾಗಿದೆ. ಇದರಿಂದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತದ ಸಮಯದಲ್ಲಿ ಸಂತ್ರಸ್ತರಿಗೆ ತಕ್ಷಣದ ಸಹಾಯ ಸಿಗುತ್ತದೆ. ಅಪರಾಧ ಮತ್ತು ಅಪರಾಧಿಗಳ ಮೇಲೆ ನಿಗಾ ಇಡುವಂತೆ ಅಧೀನ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ
ಇದನ್ನೂ ಓದಿ:2020ರ ದೆಹಲಿ ಗಲಭೆ: ಕಲ್ಲು ತೂರಾಟ ಪ್ರಕರಣದಿಂದ ಉಮರ್ ಖಾಲಿದ್, ಖಾಲಿದ್ ಸೈಫಿ ಖುಲಾಸೆ