ETV Bharat / bharat

ಉತ್ತಮ ನಿದ್ರೆಯಿಂದ ನಿಮ್ಮ ಆರೋಗ್ಯ ಭದ್ರ: ಪ್ರತಿದಿನ 7ರಿಂದ8 ಗಂಟೆ ಮಲಗುವುದು ಅವಶ್ಯಕ

ಮನುಷ್ಯನಿಗೆ ನಿದ್ರೆ ಬಹಳ ಮುಖ್ಯ. ವೈದ್ಯರ ಪ್ರಕಾರ, ಒಬ್ಬ ಮನುಷ್ಯ ಆರೋಗ್ಯವಾಗಿರಲು ಪ್ರತಿ ದಿನ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಲೇಬೇಕು. ಒಂದು ವೇಳೆ ಈ ಪ್ರಮಾಣದ ನಿದ್ರೆಗೆ ಸ್ವಲ್ಪ ಕೊರತೆ ಉಂಟಾದರೂ ಸಹ ಮಾನಸಿಕ ಒತ್ತಡ ಮತ್ತು ಮಾನಸಿಕ ಆತಂಕ ಇದ್ದಕ್ಕಿದ್ದಂತೆ ಎದುರಾಗುತ್ತದೆ.

author img

By

Published : Mar 16, 2021, 5:03 PM IST

ಉತ್ತಮ ನಿದ್ರೆ
ಉತ್ತಮ ನಿದ್ರೆ

ನಿದ್ರೆ ನಮ್ಮ ದೈನಂದಿನ ದಿನಚರಿಯ ಒಂದು ಪ್ರಮುಖ ಭಾಗ. ನಾವು ನಮ್ಮ ಜೀವನದ ಮೂರನೇ ಒಂದು ಭಾಗವನ್ನು ನಿದ್ದೆ ಮಾಡುವುದರಲ್ಲಿಯೇ ಕಳೆಯುತ್ತೇವೆ. ಗುಣಮಟ್ಟದ ನಿದ್ರೆ ಸರಿಯಾದ ಸಮಯಕ್ಕೆ ಆಹಾರ ಮತ್ತು ನೀರನ್ನು ಪಡೆಯುವಷ್ಟೇ ಅವಶ್ಯಕವಾಗಿದೆ ಎಂದು ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ವೈದ್ಯಕೀಯ ವ್ಯವಹಾರಗಳ ಮುಖ್ಯಸ್ಥ ಸಿಬಾಸಿಶ್ ಡೇ ಹೇಳುತ್ತಾರೆ.

ಜಾಗತಿಕವಾಗಿ ಅಧ್ಯಯನಗಳು ಹೇಳುವ ಪ್ರಕಾರ, ಇತರ ಪ್ರಯೋಜನಗಳ ಜೊತೆಗೆ ನಿದ್ರೆ ನಮ್ಮ ಕಲಿಕೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸಹ ಸಹಾಯ ಮಾಡುತ್ತದೆ. ಮತ್ತೊಂದೆಡೆ ನಿದ್ರೆಯ ಕೊರತೆಯು ನರಗಳ ಪ್ರಕ್ರಿಯೆಯನ್ನು ಬದಲಾಯಿಸುತ್ತದೆ ಮತ್ತು ಕಿರಿಕಿರಿ, ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗುವುದು, ಸಮಸ್ಯೆ ಪರಿಹರಿಸುವ ಕೌಶಲ್ಯ ಇಲ್ಲವಾಗುವುದು, ಖಿನ್ನತೆ, ಜ್ಞಾಪಕ ಶಕ್ತಿ ಕಳೆದುಕೊಳ್ಳುವುದು ಮುಂತಾದ ರೋಗಲಕ್ಷಣಗಳನ್ನು ನಾವು ಅನುಭವಿಸಬಹುದು.

ನಾವು ಯಾಕೆ ನಿದ್ರೆಯಿಂದ ವಂಚಿತರಾಗುತ್ತಿದ್ದೇವೆ?

ಉತ್ತಮವಾದ ಜೀವನಶೈಲಿಯನ್ನು ರೂಢಿಕೊಳ್ಳದಿರುವುದು, ದೀರ್ಘ ಅನಿಯಮಿತ ಕೆಲಸದ ಸಮಯ ಮತ್ತು ನಿದ್ರೆಬಾರದಿರುವುದು ಇವೆಲ್ಲಾ ನಾವು ನಿದ್ರೆಯಿಂದ ವಂಚಿತರಾಗಲು ಕಾರಣಗಳಾಗಿವೆ. ಇವೆಲ್ಲಾ ಅಲ್ಲದೇ ಹೆಚ್ಚು ಮೊಬೈಲ್​ ನೋಡುವುದು, ದೈಹಿಕ ಚಟುವಟಿಕೆಗಳ ಕೊರತೆ, ಮಲಗುವ ಮುನ್ನ ಕೆಫೀನ್ ಸೇವನೆ ಮತ್ತು ಸೂರ್ಯನ ಬೆಳಕಿಗೆ ಕಡಿಮೆ ಹೋಗುವುದು ಮುಂತಾದ ಅಭ್ಯಾಸಗಳು ನಮ್ಮ ನಿದ್ರೆಗೆ ಅಡ್ಡಿಯಾಗಿವೆ. ನಿದ್ರಾಹೀನತೆಯೂ ಕಳಪೆ ನಿದ್ರೆಗೆ ಕಾರಣವಾಗಿದೆ.

ನಿದ್ರಾಹೀನತೆಯು ವ್ಯಾಪಕವಾಗಿ ಎಲ್ಲರಲ್ಲಿಯೂ ಇರುವ ಕಾಯಿಲೆಯಾಗಿದೆ. ಆದರೆ ನಿದ್ರಾಹೀನತೆಯ ಉಸಿರಾಟದ ಒಂದು ರೂಪವಾದ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (ಒಎಸ್ಎ) ಸಹ ಸಾಮಾನ್ಯ ನಿದ್ರೆಯ ಕಾಯಿಲೆಯಾಗಿದೆ. ಭಾರತದಲ್ಲಿ ಸುಮಾರು 28 ಮಿಲಿಯನ್ ಜನರು ಸ್ಲೀಪ್ ಅಪ್ನಿಯಾದಿಂದ ಬಳಲುತ್ತಿದ್ದಾರೆ ಎಂದು ಅಂಕಿಅಂಶಗಳು ತೋರಿಸಿವೆ. ಅವರಲ್ಲಿ 80 ಪ್ರತಿಶತದಷ್ಟು ಜನರಿಗೆ ಈ ರೋಗದ ಬಗ್ಗೆ ಗೊತ್ತೇ ಇಲ್ಲ.

ಅಸ್ತವ್ಯಸ್ತಗೊಂಡ ನಿದ್ರೆಯ ಚಕ್ರದ ಪರಿಣಾಮಗಳು ಯಾವುವು?

ನಮ್ಮ ಕಾರ್ಯಗಳು, ಹೃದಯ ಸಂಬಂಧಿ ರೋಗಗಳು, ಬೊಜ್ಜು, ದುರ್ಬಲಗೊಂಡ ರೋಗನಿರೋಧಕ ಶಕ್ತಿ ಮುಂತಾದವುಗಳನ್ನು ಒಳಗೊಂಡಂತೆ ದೀರ್ಘಕಾಲದ ನಿದ್ರಾಹೀನತೆ ಮತ್ತು ನಿದ್ರೆಯ ಅಸ್ವಸ್ಥತೆಗಳ ಸಂಚಿತ ಪರಿಣಾಮಗಳು ಹಾನಿಕಾರಕವಾಗಿವೆ. ಇವು ಆರೋಗ್ಯ ಸಮಸ್ಯೆಗೂ ಸಂಬಂಧಿಸಿವೆ. ಇವು ಒಎಸ್ಎ ಗ್ಲೂಕೋಸ್ ದುರ್ಬಲಗೊಳಿಸುತ್ತವೆ ಮತ್ತು ತೂಕ ಹೆಚ್ಚಾಗುವಂತೆ ಮಾಡುತ್ತವೆ. ಇದು ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್ ಅಪಾಯಕ್ಕೆ ನಮ್ಮನ್ನು ತಳ್ಳುತ್ತದೆ. ಒಎಸ್ಎ ಹೊಂದಿರುವ ವ್ಯಕ್ತಿಗಳು ಪಾರ್ಶ್ವವಾಯು ಮತ್ತು ಅನಿಯಮಿತ ಹೃದಯ ಬಡಿತದ ಅಪಾಯವನ್ನು ಹೊಂದಿರುತ್ತಾರೆ.

ಕೆಲವು ಅಧ್ಯಯನಗಳ ಪ್ರಕಾರ, ಕಡಿಮೆ ನಿದ್ರೆಯೂ ಕ್ಯಾನ್ಸರ್​ಗೆ ಕಾರಣವಾಗಬಹುದೆಂದು ಹೇಳಲಾಗುತ್ತದೆ. ಕಾರ್ಟಿಸೋಲ್ ಮತ್ತು ಮೆಲಟೋನಿನ್ ಎಂಬ ಎರಡು ಹಾರ್ಮೋನುಗಳು ನಿದ್ರಾಹೀನತೆಗೆ ಕಾರಣವಾಗುತ್ತವೆ ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧನೆಯು ದೃಢಪಡಿಸಿದೆ. ಕಾರ್ಟಿಸೋಲ್ ರೋಗನಿರೋಧಕ ವ್ಯವಸ್ಥೆಯ ಚಟುವಟಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಮೆಲಟೋನಿನ್ ಗೆಡ್ಡೆಯ ಬೆಳವಣಿಗೆಯ ವಿರುದ್ಧ ಹೋರಾಡಲು ಮತ್ತು ಡಿಎನ್‌ಎ ದುರಸ್ತಿಗೆ ಉತ್ತೇಜನ ನೀಡಲು ಸಹಾಯ ಮಾಡುತ್ತದೆ. ನಿದ್ರೆಯ ಅಸ್ವಸ್ಥತೆಗಳು ಜಾಗತಿಕವಾಗಿ ರಸ್ತೆ ಸಂಚಾರ ಅಪಘಾತಗಳು ಮತ್ತು ಪ್ರಮುಖ ಕೈಗಾರಿಕಾ ಅಪಘಾತಗಳಿಗೆ ಸಂಬಂಧಿಸಿವೆ.

ಚೆನ್ನಾಗಿ ಹೇಗೆ ಹೇಗೆ ಮಾಡಬಹುದು?

ನಿದ್ರೆಗಾಗಿ ನಾವು 8 ಗಂಟೆಗಳ ಸಮಯವನ್ನು ನಿಗದಿಪಡಿಸಬೇಕು ಮತ್ತು ಪ್ರತಿದಿನ ಒಂದೇ ಸಮಯದಲ್ಲಿ ಮಲಗಲು ಮತ್ತು ಎಚ್ಚರಗೊಳ್ಳಲು ಪ್ರಯತ್ನಿಸಬೇಕು. ಉತ್ತಮ ನಿದ್ರೆ ಪಡೆಯಲು ವ್ಯಾಯಾಮ, ಸೂರ್ಯನ ಬೆಳಕನ್ನು ಪಡೆಯುವುದು ಮುಖ್ಯ. ನಿದ್ರೆಗೆ ಮುಂಚಿನ ಚಟುವಟಿಕೆಗಳಾದ ಬೆಚ್ಚಗಿನ ಸ್ನಾನ ಮತ್ತು ಧ್ಯಾನ ಸಹ ನಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತವೆ.

ನಿದ್ರೆಗೆ ಜಾರುವ ಮುನ್ನ ಸಂಗೀತ ಕೇಳುವ, ಧ್ಯಾನ ಮಾಡುವ ಅಥವಾ ಒಳ್ಳೆಯ ಕಥೆ ಪುಸ್ತಕ ಓದುವ ಅಭ್ಯಾಸ ನಿಮ್ಮದಾದರೆ ಒಳ್ಳೆಯ ನಿದ್ರೆ ನಿಮಗೆ ಖಂಡಿತ ಬರುತ್ತದೆ ಎಂದು ಯೋಗ ತಜ್ಞರು ಹೇಳುತ್ತಾರೆ. ಮಧ್ಯಾಹ್ನದ ಸಮಯದಲ್ಲಿ ಗೊರಕೆ ಹೊಡೆಯುವುದನ್ನು ಬಿಟ್ಟು ಪ್ರತಿದಿನ ನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡಿ ದೇಹ ದಂಡನೆ ಮಾಡುವುದರಿಂದ ಸಹ ರಾತ್ರಿಯ ಸಮಯದಲ್ಲಿ ಒಳ್ಳೆಯ ನಿದ್ರೆ ನಿಮ್ಮದಾಗುತ್ತದೆ.

ಆರೋಗ್ಯವಾಗಿರಲು ಉತ್ತಮ ಮತ್ತು ಉತ್ತಮ ನಿದ್ರೆ ಬಹಳ ಮುಖ್ಯ. ಇಂದು ಅನೇಕ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಹಾರ ಪದ್ಧತಿ ಮತ್ತು ಜೀವನಶೈಲಿಯ ಬದಲಾವಣೆ ಕೂಡ ಈ ಸಮಸ್ಯೆಗೆ ಮುಖ್ಯ ಕಾರಣ. ತಜ್ಞರ ಪ್ರಕಾರ, ಆರೋಗ್ಯವಾಗಿರಲು, ಒಬ್ಬರು ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು. ನಿದ್ರೆಯ ಕೊರತೆಯು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.