ಎರ್ನಾಕುಲಂ (ಕೇರಳ) : ನೈಟ್ ಡ್ಯೂಟಿ ( ರಾತ್ರಿ ಪಾಳಿ) ಯ ನೆಪ ಹೇಳಿ ಮಹಿಳೆಯರಿಗೆ ಉದ್ಯೋಗ ನಿರಾಕರಿಸಬಾರದು ಎಂದು ಕೇರಳ ಹೈಕೋರ್ಟ್ ಆದೇಶಿಸಿದೆ.
ಅರ್ಹತೆಯಿರುವ ಮಹಿಳೆಗೆ ಆಕೆ ಮಹಿಳೆ ಎಂಬ ಕಾರಣಕ್ಕೆ ಉದ್ಯೋಗಕ್ಕಾಗಿ ಪರಿಗಣಿಸುವ ಹಕ್ಕನ್ನು ನಿರಾಕರಿಸಲಾಗುವುದಿಲ್ಲ ಮತ್ತು ರಾತ್ರಿಯ ಸಮಯದಲ್ಲಿ ಕೆಲಸ ಮಾಡುವುದು ಆಕೆಗೆ ಅಗತ್ಯವಿರುತ್ತದೆ ಎಂದು ಕೋರ್ಟ್ ಹೇಳಿದೆ.
ಅಗತ್ಯವಿದ್ದರೆ ಸರ್ಕಾರ ಮಹಿಳೆಯರಿಗೆ ಭದ್ರತೆ ಒದಗಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅಗ್ನಿಶಾಮಕ ಮತ್ತು ಸುರಕ್ಷತಾ ಇಲಾಖೆಯಲ್ಲಿ ಕೆಲಸ ನಿರಾಕರಿಸಿದ್ದಕ್ಕಾಗಿ ಕೊಲ್ಲಂ ಮೂಲದ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.