ಥಾಣೆ(ಮಹಾರಾಷ್ಟ್ರ): ಮದುವೆಯಾಗುವುದಾಗಿ ನಂಬಿಸಿ, ಸರ್ಕಾರಿ ಅಧಿಕಾರಿ ಮೇಲೆ ಹೋಟೆಲ್ ಮಾಲೀಕನೋರ್ವ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಥಾಣೆಯ ಟಿಟ್ವಾಲಾ ಪ್ರದೇಶದಲ್ಲಿ ಪ್ರಕರಣ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂಪತ್ ಶಿರಸತ್ ಬಂಧಿತ ಆರೋಪಿ. ಈತ ಟಿಟ್ವಾಲಾ ಪ್ರದೇಶದಲ್ಲಿ ಹೋಟೆಲ್ ನಡೆಸುತ್ತಿದ್ದ. ಕಳೆದ ವರ್ಷ ಸಂತ್ರಸ್ತೆ ಹೋಟೆಲ್ಗೆ ಊಟಕ್ಕೆಂದು ಹೋಗಿದ್ದರು. ಈ ವೇಳೆ ಸಂಪತ್, ಮಹಿಳೆಯ ಪರಿಚಯ ಮಾಡಿಕೊಂಡು ಮೊಬೈಲ್ ನಂಬರ್ ಪಡೆದುಕೊಂಡಿದ್ದಾನೆ. ನಂತರ ಪ್ರತಿದಿನ ಮಹಿಳಾಧಿಕಾರಿ ಮೊಬೈಲ್ನಲ್ಲಿ ಚಾಟ್ ಮಾಡಿದ್ದು, ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ. ಇದಾದ ಬಳಿಕ ಮಹಿಳೆ ಪ್ರತಿದಿನ ಮಧ್ಯಾಹ್ನದ ಊಟಕ್ಕಾಗಿ ಹೋಟಲ್ಗೆ ಹೋಗುತ್ತಿದ್ದರು. ಈ ವೇಳೆ ಅವರ ಪರಿಚಯ ಸ್ನೇಹವಾಗಿ ಬದಲಾಗಿದೆ. ಇದರ ಮಧ್ಯೆ ಇಬ್ಬರ ನಡುವೆ ದೈಹಿಕ ಸಂಬಂದ ಸಹ ಬೆಳೆದಿದೆ.
ಕುತೂಹಲಕಾರಿ ಸಂಗತಿ ಎಂದರೆ, ಆರೋಪಿ ವಿವಾಹಿತನಾಗಿದ್ದು, ಇದರ ಮಧ್ಯೆ ಕೂಡ ಮಹಿಳಾ ಅಧಿಕಾರಿಗೆ ಮದುವೆ ಮಾಡಿಕೊಳ್ಳುವಂತೆ ಪೀಡಿಸಿದ್ದನಂತೆ. ಆದರೆ, ಆಕೆಗೂ ಮದುವೆ ಆಗಿರುವ ವಿಷಯ ಗೊತ್ತಾಗಿ ಸಂಬಂಧ ಕಡಿದುಕೊಂಡಿದ್ದಾನೆ.
ಇದನ್ನೂ ಓದಿ: 'ಸ್ತನ ಕ್ಯಾನ್ಸರ್ನಿಂದ ಮುಕ್ತಿ' ಆಸ್ಪತ್ರೆಯಿಂದಲೇ ಫೋಟೋ ಹಂಚಿಕೊಂಡ ನಟಿ
ಅಶ್ಲೀಲ ಫೋಟೋ ವೈರಲ್ ಬೆದರಿಕೆ: ಮಹಿಳಾಧಿಕಾರಿಗೆ ಮದುವೆಯಾಗಿರುವ ವಿಷಯ ಗೊತ್ತಾಗುತ್ತಿದ್ದಂತೆ ಸಂತ್ರಸ್ತೆಯ ಲೈಂಗಿಕ ಸಂಬಂಧದ ಅಶ್ಲೀಲ ಫೋಟೋ ಮತ್ತು ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾನೆ. ಜೊತೆಗೆ ಬ್ಲಾಕ್ ಮೇಲ್ ಮಾಡಿದ್ದು, ಲಕ್ಷಾಂತರ ರೂಪಾಯಿಗೆ ಒತ್ತಾಯ ಮಾಡಿದ್ದಾನೆ. ಹಣ ನೀಡದ ಕಾರಣ ಆಕೆಯ ಮೇಲ ಹಲ್ಲೆ ನಡೆಸಿದ್ದು, ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡಲಾರಂಭಿಸಿದ್ದಾನೆ.
ಇದರ ಬೆನ್ನಲ್ಲೇ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಇದೀಗ ಆತನ ಬಂಧನ ಮಾಡಲಾಗಿದೆ. ಆರೋಪಿಯನ್ನು ಕಲ್ಯಾಣ್ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.