ETV Bharat / bharat

ಬೇರೆ ಜಾತಿ ಯುವಕನೊಂದಿಗೆ ಪ್ರೀತಿ: ಮಹಿಳೆ ಜೀವಂತ ಸುಟ್ಟ ಕುಟುಂಬ! - ಉತ್ತರ ಪ್ರದೇಶದ ಗೋರಖ್​ಪುರ

ಅನ್ಯ ಜಾತಿ ಯುವಕನೊಂದಿಗೆ ಯವತಿ ಪ್ರೀತಿಯ ಬಲೆಗೆ ಬಿದ್ದಿದ್ದರಿಂದ ಅದನ್ನ ಸಹಿಸಲಾಗದ ಕುಟುಂಬಸ್ಥರು ಆಕೆಯ ಕೊಲೆಗೆ ಸುಪಾರಿ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

UP Crime
UP Crime
author img

By

Published : Feb 15, 2021, 5:12 PM IST

ಗೋರಖ್​ಪುರ (ಉತ್ತರ ಪ್ರದೇಶ): ಬೇರೆ ಜಾತಿ ಯುವಕನೊಂದಿಗೆ ಪ್ರೀತಿ ಬಲೆಗೆ ಬಿದ್ದ ಯುವತಿಯೊಬ್ಬಳನ್ನು ಆಕೆಯ ಕುಟುಂಬಸ್ಥರು ಜೀವಂತವಾಗಿ ಸುಟ್ಟಿರುವ ಘಟನೆ ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ನಡೆದಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮಹಿಳೆಯ ತಂದೆ, ಸಹೋದರ, ಸೋದರ ಮಾವ ಹಾಗೂ ಮತ್ತೊಬ್ಬ ವ್ಯಕ್ತಿಯ ಬಂಧನ ಮಾಡಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವರುಣ್ ತಿವಾರಿ ಎಂಬ ಸುಪಾರಿ ಕೊಲೆಗಾರನಿಗೆ 1.5 ಲಕ್ಷ ರೂ. ನೀಡಿ ಯುವತಿ ಕೊಲೆ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಫೆ.4ರಂದು ಧಂಘಾಟ ಪೊಲೀಸ್ ಠಾಣಾ ವ್ಯಾಪ್ತಿಯ ಜಿಗಿನಾ ಪ್ರದೇಶದಲ್ಲಿ ಮಹಿಳೆಯ ಅರ್ಧಬರ್ಧ ಸುಟ್ಟ ಮೃತದೇಹ ಪತ್ತೆಯಾಗಿತ್ತು. ಮೃತದೇಹ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಸ್ಥಳೀಯರು ನೀಡಿದ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಓದಿ: ಮಥುರಾ ಜೈಲಿನಿಂದ 21 ಬಾಂಗ್ಲಾದೇಶಿಯರ ಬಿಡುಗಡೆ

ಘಟನೆ ಬಗ್ಗೆ ಯುವತಿ ತಂದೆ ಕೂಡ ತಪ್ಪೊಪ್ಪಿಕೊಂಡಿದ್ದು, ಬೇರೆ ಜಾತಿ ವ್ಯಕ್ತಿ ಜೊತೆಗೆ ಮಗಳು ಪ್ರೀತಿಯ ಬಲೆಯಲ್ಲಿ ಬಿದ್ದ ಕಾರಣ ಈ ಕೃತ್ಯವೆಸಗಲಾಗಿದೆ ಎಂದಿದ್ದಾರೆ. ಜತೆಗೆ ಅನೇಕ ಸಲ ಆತನೊಂದಿಗೆ ಸಂಪರ್ಕ ಕೈಬಿಡುವಂತೆ ತಿಳಿ ಹೇಳಿದ್ರೂ ಯುವತಿ ಒಪ್ಪಿರಲಿಲ್ಲ. ಫೆ. 3ರಂದು ಆಕೆಯ ಕಿಡ್ನಾಪ್​ ಮಾಡಿದ್ದ ಕೊಲೆಗಾರ ಆಕೆಯ ಕೊಲೆ ಮಾಡಿ ಊರ ಹೊರಗೆ ಸುಟ್ಟು ಹಾಕಿದ್ದನು. ಇದೀಗ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.