ETV Bharat / bharat

ಮೂರು ಮಕ್ಕಳೊಂದಿಗೆ ತಾಯಿಯ ಗಂಟಲು ಕತ್ತರಿಸಿ ಕೊಲೆ!

author img

By

Published : Jul 22, 2021, 12:19 PM IST

ರೇಖಾ ರಾಥೋಡ್ ಎಂಬ ಮಹಿಳೆ ಗಂಡನಿಂದ ವಿಚ್ಛೇದನ ಪಡೆದು ತನ್ನ ಮೂರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಮೂರು ಮಕ್ಕಳೊಂದಿಗೆ ತಾಯಿಯ ಗಂಟಲು ಕತ್ತರಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

woman and 3 children murdered in agra
ಆಗ್ರಾ ಕೊಲೆ ಪ್ರಕರಣ

ಆಗ್ರಾ( ಉತ್ತರಪ್ರದೇಶ): ಕೊಟ್ವಾಲಿ ಪೊಲೀಸ್ ಠಾಣಾ ಪ್ರದೇಶದಲ್ಲಿ ಇಂದು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆ ಮತ್ತು ಆಕೆಯ 3 ಮಕ್ಕಳನ್ನು ಗಂಟಲು ಕತ್ತರಿಸಿ ಕೊಲೆ ಮಾಡಲಾಗಿದೆ. ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ರೇಖಾ ರಾಥೋಡ್ ಎಂಬ ಮಹಿಳೆ ಕಳೆದ 5 ವರ್ಷಗಳಿಂದ ಥಾನಾ ಕೊಟ್ವಾಲಿ ಪ್ರದೇಶದ ಕುಚಾ ಸಾಧುರಾಮ್​ನಲ್ಲಿ ತನ್ನ ಮೂರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. 2 ವರ್ಷಗಳ ಹಿಂದೆ ತನ್ನ ಗಂಡನಿಂದ ವಿಚ್ಛೇದನ ಪಡೆದು ಜೀವನ ಸಾಗಿಸುತ್ತಿದ್ದ ರೇಖಾ, ಹೆಚ್ಚಾಗಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ರೇಖಾ ರಾಥೋಡ್ ಮನೆಯ ನೆರೆಹೊರೆಯವರು ಏನೋ ಅಹಿತಕರ ಘಟನೆ ನಡೆದಿದೆ ಎಂದು ಶಂಕಿಸಿ ಅವರ ಮನೆಯೊಳಗೆ ಬಂದು ಗಮನಿಸಿದಾಗ, ಮೂರು ಮಕ್ಕಳೊಂದಿಗೆ ತಾಯಿಯ ಶವ ರಕ್ತಸಿಕ್ತವಾಗಿ ಬಿದ್ದಿರುವುದು ಗೊತ್ತಾಗಿದೆ. ಭಯಾನಕ ದೃಶ್ಯವನ್ನು ನೋಡಿದ ನೆರೆಹೊರೆಯವರು ತಕ್ಷಣವೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಪೊಲೀಸರ ವಿಧಿವಿಜ್ಞಾನ ತಂಡ ಮತ್ತು ಶ್ವಾನ ದಳ ಸ್ಥಳಕ್ಕೆ ತಲುಪಿ ಪ್ರಮುಖ ಸುಳಿವುಗಳನ್ನು ಸಂಗ್ರಹಿಸಿದೆ. ಅವುಗಳನ್ನು ಫೋರೆನ್ಸಿಕ್ ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಮಹಿಳೆಯ ಸಂಬಂಧಿಕರು ಮತ್ತು ನೆರೆ ಹೊರೆಯವರಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖೆ ಚುರುಕುಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.