ಕಾರವಾರ: ಬಡತನದಿಂದಾಗಿ ಕಾಲೇಜಿನ ರಜಾ ದಿನಗಳಲ್ಲಿ ಕೆಲಸಕ್ಕೆ ತೆರಳಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೃಷಿಕನ ಮಗನೋರ್ವ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಏಳು ಚಿನ್ನದ ಪದಕ ಪಡೆದಿದ್ದಾರೆ.
ಯಲ್ಲಾಪುರ - ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ಮಯೂರ್ ಖಿಲಾರಿ ಇಂತಹದೊಂದು ಸಾಧನೆ ಮೂಲಕ ಇದೀಗ ತಂದೆ - ತಾಯಿ ಹಾಗೂ ಗ್ರಾಮಸ್ಥರು ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ.
ರಾಮಚಂದ್ರ ಹಾಗೂ ಭೀಮವ್ವಾ ದಂಪತಿಯ ದ್ವಿತೀಯ ಪುತ್ರರಾಗಿದ್ದಾರೆ. ಬಡತನದಲ್ಲಿ ಬೆಳೆದು ಬಂದ ಮಯೂರ್, ಶಾಲೆ ಹಾಗೂ ಕಾಲೇಜಿನ ರಜಾ ದಿನಗಳಲ್ಲಿ ಕೆಲಸಕ್ಕೆ ತೆರಳಿ ಪಾಲಕರಿಗೆ ಆಸರೆಯಾಗುತ್ತಿದ್ದರು. ಇದರ ಜೊತೆಗೆ ವಿದ್ಯಾಭ್ಯಾಸ ಮುಂದುವರಿಸಿದ್ದರು. ಇದೀಗ ಅವರ ಶ್ರಮಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಏಳು ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಮಂಗಳವಾರ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇಳೆ ಬಂಗಾರದ ಪದಕಗಳನ್ನು ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗಿದೆ. ಇನ್ನು ಈ ಸಾಧನೆಗೆ ಗಜಾನನೋತ್ಸವ ಸಮಿತಿ ಹೊಸಳ್ಳಿ, ಯುವಕರ ಯುಗಾದಿ ಉತ್ಸವ ಸಮಿತಿ ಮತ್ತು ಎಸ್ಡಿಎಂಸಿ, ಶಾಲಾ ಶಿಕ್ಷಕ ವೃಂದ ಹಾಗೂ ಊರನಾಗರಿಕರಿಂದ ಘಟಿಕೋತ್ಸವದ ಬಳಿಕ ಬುಧವಾರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಈ ಸಾಧನೆಗೆ ಸಹೋದರ ಯಲ್ಲಪ್ಪ ಖಿಲಾರಿ, ಗಜಾನನೋತ್ಸವ ಸಮಿತಿ ಹೊಸಳ್ಳಿ ಅಧ್ಯಕ್ಷ ಆನಂದ ಶೆಟ್ಟಿ, ಪ್ರಮುಖರಾದ ಪ್ರಕಾಶ ಮಿಂಡೊಳ್ಳಿ, ದೀಲಿಪ್ ಕಾಂಬಳೆ, ಮಲ್ಲೇಶ ಖಿಲಾರಿ, ಪ್ರೇಮಕುಮಾರ ದೇಸಾಯಿ, ಅಪ್ಪಯ್ಯ ಬಚನಟ್ಟಿ, ನಾನಾಜಿ ದೇಸಾಯಿ, ಚಂದ್ರಕಾಂತ್ ಪಾಟೀಲ್, ವಿಜಯ ಕಾಂಬಳೆ, ಮುಬಾರಕ್ ಶೇಖ್, ಪ್ರಕಾಶ ಕಾಂಬಳೆ, ನಾಗರಾಜ ಚಿಕ್ಕಬಸವಣ್ಣನವರ, ಗಂಗಾಧರ ವಾಲಿಕಾರ್, ಸಂಜು ದಂಡಾಪುರ, ಮಾರುತಿ ಜಾಧವ, ಮಂಜುನಾಥ ಕಾಂಬಳೆ, ರಾಜು ಕಾಂಬಳೆ, ಸಂತೋಷ ಬನ್ನೇಣ್ಣವರ, ಅಜಯ ಕಾಂಬಳೆ, ರುಸ್ತಂ ಶೇಖ, ನಾಗರಾಜ ಕದಂ ಪರಶುರಾಮ ಕಪಾಲಿ, ಯಲ್ಲಪ್ಪ ಖಿಲಾರಿ, ರಾಜು ಶೆಟ್ಟಿ, ಬಸವರಾಜ ಕೊರವರ, ಮಾರುತಿ ಖಾನಪ್ಪನವರ, ಲಕ್ಷಣ ಚಿನ್ನಪ್ಪಗೋಳ, ಹಸನ ಬಿಜಾಪುರ, ಶಾರುಖ್ ಬಿಜಾಪುರ, ಅಭಿಷೇಕ ಕದಂ, ವಿನೋದ ಚವ್ಹಾನ ಹಾಗೂ ಇನ್ನಿತರರು ಹರ್ಷ ವ್ಯಕ್ತಪಡಿಸಿದ್ದಾರೆ.