ETV Bharat / bharat

ಢಾಬಾ, ರೆಸ್ಟೋರೆಂಟ್​​, ಹೋಟೆಲ್​​ಗಳ ಆಹಾರ ಸ್ವಚ್ಛತೆ ಪರಿಶೀಲನೆಗೆ ಸೂಚಿಸಿದ ಸಿಎಂ ಯೋಗಿ ಆದಿತ್ಯನಾಥ್​: ಏಕೆ ಗೊತ್ತಾ? - CM Yogi Adityanath - CM YOGI ADITYANATH

ತಿರುಪತಿ ಲಡ್ಡುವಿಗೆ ಬಳಸುವ ತುಪ್ಪ ಕಲಬೆರಕೆ ಆರೋಪ ಕೇಳಿ ಬಂದ ಬೆನ್ನಲ್ಲೇ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ರಾಜ್ಯದಲ್ಲಿನ ಹೋಟೆಲ್​​, ರೆಸ್ಟೋರೆಂಟ್​​ ಇತರ ಆಹಾರ ಕೇಂದ್ರಗಳ ಸ್ವಚ್ಛತೆಯ ಬಗ್ಗೆ ಪರಿಶೀಲಿಸಲು ಆದೇಶಿಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್​
ಸಿಎಂ ಯೋಗಿ ಆದಿತ್ಯನಾಥ್​ (ETV Bharat)
author img

By ETV Bharat Karnataka Team

Published : Sep 24, 2024, 3:42 PM IST

ಲಖನೌ (ಉತ್ತರಪ್ರದೇಶ): ಆಹಾರ ಕಲಬೆರಕೆ ಆರೋಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಅವರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಉತ್ತರಪ್ರದೇಶದಲ್ಲಿನ ರೆಸ್ಟೋರೆಂಟ್​ಗಳು, ಹೋಟೆಲ್​​ಗಳು ಮತ್ತು ಸಾರ್ವಜನಿಕ ಆಹಾರ ವಿತರಣಾ ಕೇಂದ್ರಗಳ ಸ್ವಚ್ಛತೆ ಕಾಪಾಡುವುದು ಮತ್ತು ಕಲಬೆರಕೆ ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇತ್ತೀಚೆಗಷ್ಟೇ ಮೂತ್ರ ಮಿಶ್ರಿತ ಜ್ಯೂಸ್, ಢಾಬಾಗಳಲ್ಲಿ ಎಂಜಲು ಮಿಶ್ರಿತ ರೊಟ್ಟಿ ನೀಡಿದ ಘಟನೆಗಳು ನಡೆದಿದ್ದವು. ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಜನ್ಯ ಅಂಶ ಕಲಬೆರಕೆ ಮಾಡಿರುವ ಪ್ರಕರಣ ಸಂಚಲನ ಉಂಟು ಮಾಡಿದೆ. ಇದರ ಬೆನ್ನಲ್ಲೇ ಉತ್ತರಪ್ರದೇಶ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.

ಕಲಬೆರಕೆ ವಿರುದ್ಧ ಕಠಿಣ ಕ್ರಮ: ಮಂಗಳವಾರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್​​, ಮಾನವ ತ್ಯಾಜ್ಯ ಅಥವಾ ಕೊಳಕು ಪದಾರ್ಥಗಳೊಂದಿಗೆ ಆಹಾರ ಕಲಬೆರಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ರಾಜ್ಯದ ಎಲ್ಲಾ ಹೋಟೆಲ್‌ಗಳು, ಢಾಬಾಗಳು, ರೆಸ್ಟೋರೆಂಟ್‌ಗಳು ಇತ್ಯಾದಿ ಆಹಾರ ಕೇಂದ್ರಗಳ ಸಮಗ್ರ ತನಿಖೆ, ಪರಿಶೀಲನೆ ನಡೆಸಲು ಆದೇಶಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜ್ಯೂಸ್, ಬೇಳೆಕಾಳುಗಳು ಮತ್ತು ರೊಟ್ಟಿಯಂತಹ ಆಹಾರ ಪದಾರ್ಥಗಳನ್ನು ತಿನ್ನಲಾಗದ, ಕೊಳಕು ಪದಾರ್ಥಗಳೊಂದಿಗೆ ಕಲಬೆರಕೆ ಮಾಡುವ ಘಟನೆಗಳು ದೇಶದ ವಿವಿಧ ಪ್ರದೇಶಗಳಲ್ಲಿ ಕಂಡು ಬರುತ್ತಿವೆ. ಇಂತಹ ಘಟನೆಗಳು ಘೋರವಾಗಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಆಪಾದನೆ ಕೇಳಿ ಬಂದಿದೆ.

ಆಹಾರ ಸಿಬ್ಬಂದಿಗೆ ಜಾಗೃತಿ ಮೂಡಿಸಿ: ಇಂತಹ ದುರುದ್ದೇಶಪೂರಿತ ಕೃತ್ಯಗಳಿಗೆ ಕಡಿವಾಣ ಅಗತ್ಯವಿದೆ. ಢಾಬಾಗಳು, ರೆಸ್ಟೋರೆಂಟ್‌ಗಳನ್ನು ಪರಿಶೀಲಿಸುವುದು ಅವಶ್ಯಕ. ರಾಜ್ಯಾದ್ಯಂತ ಈ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಅವುಗಳ ಮಾಲೀಕರು, ಸಿಬ್ಬಂದಿಗೆ ಆಹಾರ ಸುರಕ್ಷತೆ ಮತ್ತು ಔಷಧ ಇಲಾಖೆ, ಪೊಲೀಸ್ ಮತ್ತು ಸ್ಥಳೀಯ ಆಡಳಿತದ ಜಂಟಿ ತಂಡಗಳು ಅರಿವು ಮೂಡಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಗಿದೆ.

ಹೋಟೆಲ್​​, ರೆಸ್ಟೋರೆಂಟ್​​ಗಳ ನಿರ್ವಾಹಕರು, ಮಾಲೀಕರು, ವ್ಯವಸ್ಥಾಪಕರ ಹೆಸರು, ವಿಳಾಸವನ್ನು ಆಯಾ ಕೇಂದ್ರಗಳಲ್ಲಿ ಪ್ರದರ್ಶಿಸಬೇಕು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯಲ್ಲೂ ಅಗತ್ಯ ತಿದ್ದುಪಡಿ ತರಲಾಗುವುದು. ಢಾಬಾಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಂತಹ ಕೇಂದ್ರಗಳಲ್ಲಿ ಸಿಸಿಟಿವಿ ವ್ಯವಸ್ಥೆ ಮಾಡಬೇಕು. ಗ್ರಾಹಕರು ಕುಳಿತುಕೊಳ್ಳುವ ಸ್ಥಳಗಳು ಮಾತ್ರವಲ್ಲದೇ ಕೇಂದ್ರದ ಇತರ ಭಾಗಗಳು ಸಿಸಿಟಿವಿ ನಿಗಾದಲ್ಲಿ ಇರಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: 'ಸನಾತನ ಧರ್ಮದ ಮೇಲಿನ ದಾಳಿ ಸಹಿಸಲ್ಲ': ವಿಜಯವಾಡದಲ್ಲಿ ದೇಗುಲದ ಮೆಟ್ಟಿಲು ತೊಳೆದ ಡಿಸಿಎಂ ಪವನ್​ ಕಲ್ಯಾಣ್ - Pawan Kalyan

ETV Bharat Logo

Copyright © 2025 Ushodaya Enterprises Pvt. Ltd., All Rights Reserved.