ಹೈದರಾಬಾದ್: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂಬ ಆರೋಪ ಭಾರಿ ಸಂಚಲನ ಸೃಷ್ಟಿಸಿದೆ. ಆಕ್ರೋಶ, ಆರೋಪ - ಪ್ರತ್ಯಾರೋಪಗಳು ಮುಂದುವರಿದಿವೆ. ಈ ಮಧ್ಯೆ ಜನಪ್ರಿಯ ನಟ ಕಾರ್ತಿ ಹೇಳಿಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.
ಹೌದು, ನಟ ಕಾರ್ತಿ ಇತ್ತೀಚೆಗೆ ತಿರುಪತಿ ಲಡ್ಡು ವಿಚಾರವನ್ನು 'ಸೂಕ್ಷ್ಮ' ವಿಷಯ ಎಂದು ಉಲ್ಲೇಖಿಸಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಈ ಘಟನೆ ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. ತಿರುಪತಿ ಲಡ್ಡು ಪ್ರಸಾದದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವ ಆರೋಪ ಹಿನ್ನೆಲೆ, ಪ್ರಾಯಶ್ಚಿತ್ತವಾಗಿ 11 ದಿನಗಳ ಕಾಲ ''ಪ್ರಾಯಶ್ಚಿತ್ತ ದೀಕ್ಷೆ''ಯನ್ನು ಆರಂಭಿಸಿರುವ ಉಪ ಮುಖ್ಯಮಂತ್ರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಲಡ್ಡು ವಿಷಯವನ್ನು ಹಾಸ್ಯವಾಗಿ ನಗುನಗುತ್ತಾ ಪ್ರಸ್ತಾಪಿಸಿದ ಹಿನ್ನೆಲೆ ಆಕ್ರೋಶಕ್ಕೆ ಗುರಿಯಾಗಿದೆ.
Sensitive topic - " @Karthi_Offl"
— Ashwatthama (@Ashwatthama2898) September 24, 2024
@PawanKalyan Garu reply to Sensitive topic #sanathana #Pawankalyan#TirupatiLaddu #Karthi pic.twitter.com/zEhtBlJHcn
ವಿಜಯವಾಡದ ದೇವಸ್ಥಾನವೊಂದರಲ್ಲಿ ಪತ್ರಿಕಾ ಸಂವಾದದ ವೇಳೆ ನಟ ಕಾರ್ತಿ ಅವರ ಕಾಮೆಂಟ್‌ಗಳ ಬಗ್ಗೆ ನಟ ಹಾಗೂ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರಲ್ಲಿ ಪ್ರಶ್ನಿಸಲಾಯಿತು. ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, "ನಿನ್ನೆ, ಸಿನಿಮಾ ಈವೆಂಟ್ ಒಂದರಲ್ಲಿ ಅವರು ತಿರುಮಲ ಲಡ್ಡುವನ್ನು ಲೇವಡಿ ಮಾಡಿ ಮಾತನಾಡಿದ್ದಾರೆ. ಅವರಿಗೆ ನನ್ನ ಮನವಿಯೇನೆಂದರೆ, ತಿರುಮಲ ಲಡ್ಡು ಬಗ್ಗೆ ಮಾತನಾಡುವ ಮೊದಲು 100 ಬಾರಿ ಯೋಚಿಸಿ. ಇದು ತಮಾಷೆಯ ವಿಷಯವಲ್ಲ. ನಟರಾದ ನಿಮ್ಮನ್ನು ಗೌರವಿಸುತ್ತೇನೆ. ಆದರೆ ನೀವು ಸನಾತನ ಧರ್ಮದ ವಿರುದ್ಧ ಕಾಮೆಂಟ್ ಮಾಡುವುದನ್ನು ನಿಲ್ಲಿಸಬೇಕು'' ಎಂದು ಸಲಹೆ ನೀಡಿದರು.
Dear @PawanKalyan sir, with deep respects to you, I apologize for any unintended misunderstanding caused. As a humble devotee of Lord Venkateswara, I always hold our traditions dear. Best regards.
— Karthi (@Karthi_Offl) September 24, 2024
ಸೆಪ್ಟೆಂಬರ್ 23ರಂದು ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾರ್ತಿ ಲಡ್ಡು ಬಗ್ಗೆ ಮಾತನಾಡಿದ್ದರು. ಅಲ್ಲಿ ಮೀಮ್‌ಗಳನ್ನು ಪ್ರಸ್ತುತಪಡಿಸಲಾಗಿತ್ತು. ಅದರಲ್ಲಿ ಒಂದು ತಿರುಪತಿ ಲಡ್ಡುವನ್ನು ಉಲ್ಲೇಖಿಸಿತ್ತು. ಈ ಮೀಮ್‌ಗೆ ಪ್ರತಿಕ್ರಿಯಿಸಿದ ಕಾರ್ತಿ, "ಇಪ್ಪುಡು ಲಡ್ಡು ಗುರಿಂಚಿ ಮಾಟ್ಲಾಡಕೊದ್ದಡು (ನಾವೀಗ ಲಡ್ಡು ಬಗ್ಗೆ ಮಾತನಾಡಬಾರದು), ಇದು ಸೂಕ್ಷ್ಮ ವಿಷಯ, ಮನಕೊಡ್ಡಾಡಿ (ನಮಗೆ ಬೇಡ)" ಎಂದಿದ್ದರು.
From the sets of #HariHaraVeeraMallu. pic.twitter.com/ef1Ef2qPAu
— PawanKalyan Fan (@PawanKalyanFan) September 23, 2024
ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಪವನ್ ಕಲ್ಯಾಣ್ ಅವರ ಪ್ರತಿಕ್ರಿಯೆಗಳ ಬೆನ್ನಲ್ಲೇ ನಟ ಕಾರ್ತಿ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಕಾರ್ತಿ ಅವರು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಕ್ಷಮೆಯಾಚಿಸಿದ್ದಾರೆ. "ಆತ್ಮೀಯ ಪವನ್ ಕಲ್ಯಾಣ್ ಸರ್, ಗೌರವಗಳೊಂದಿಗೆ, ನಾನು ಕ್ಷಮೆಯಾಚಿಸುತ್ತೇನೆ. ಭಗವಾನ್ ವೆಂಕಟೇಶ್ವರನ ವಿನಮ್ರ ಭಕ್ತನಾಗಿ, ನಾನು ಯಾವಾಗಲೂ ನಮ್ಮ ಸಂಪ್ರದಾಯಗಳನ್ನು ಗೌರವಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮಲೈಕಾ ಅರೋರಾ ಮಲತಂದೆಯ ಪ್ರಾರ್ಥನಾ ಸಭೆ: ಅರ್ಜುನ್ ಕಪೂರ್, ಕರೀನಾ ಸೇರಿ ಸೆಲೆಬ್ರಿಟಿಗಳು ಭಾಗಿ - Malaika Arora
ತಿರುಪತಿ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಸಿರುವ ಆರೋಪ ಹಿನ್ನೆಲೆ ಪವನ್ ಕಲ್ಯಾಣ್ 11 ದಿನಗಳ ಪ್ರಾಯಶ್ಚಿತ್ತ ಉಪವಾಸ ವ್ರತ ಕೈಗೊಂಡಿದ್ದಾರೆ. ಇಂದು ವಿಜಯವಾಡದ ಕನಕ ದುರ್ಗಾ ದೇಗುಲಕ್ಕೆ ಭೇಟಿ ನೀಡಿ, ಮೆಟ್ಟಿಲು ತೊಳೆದು ಶುದ್ದೀಕರಣ ಕಾರ್ಯದಲ್ಲಿ ಪಾಲ್ಗೊಂಡರು. ಸೋಷಿಯಲ್ ಮೀಡಿಯಾ, ಅದರಲ್ಲೂ ಎಕ್ಸ್ನಲ್ಲಿ ಹರಿದಾಡುತ್ತಿರುವ ಫೋಟೋ ವಿಡಿಯೋಗಳಲ್ಲಿ ಪವನ್ ಕಲ್ಯಾಣ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ನಟ, ಶಾಸಕ ಮುಕೇಶ್ ಬಂಧನ - MLA Mukesh Arrested
ಇನ್ನು, ಸಿನಿಮಾ ವಿಚಾರ ಗಮನಿಸೋದಾದರೆ, ಹರಿಹರ ವೀರ ಮಲ್ಲು ಚಿತ್ರದ ಮೂಲಕ ಪವನ್ ಕಲ್ಯಾಣ್ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಚಿತ್ರದ ನಿರ್ಮಾಪಕರು ಇತ್ತೀಚೆಗೆ ನಟನ ಪೋಸ್ಟರ್ ಅನಾವರಣಗೊಳಿಸಿದ್ದರು. ಈ ಪೋಸ್ಟರ್, ಚಿತ್ರದಲ್ಲಿ ಪವನ್ ಕಲ್ಯಾಣ್ ಅವರು ನಿರ್ವಹಿಸುತ್ತಿರುವ ಪಾತ್ರದ ಶಕ್ತಿಯನ್ನು ಎತ್ತಿ ಹಿಡಿದಿದೆ. ಹರಿ ಹರ ವೀರ ಮಲ್ಲು 2025ರ ಮಾರ್ಚ್ 28ರಂದು ಬಿಡುಗಡೆಯಾಗಲಿದೆ. ಇದು ಈ ವರ್ಷದ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ.