ETV Bharat / bharat

ಮಗುವಿನೊಂದಿಗೆ ರೈಲು ಹಳಿಗೆ ಬಿದ್ದ ಮಹಿಳೆ.. ದೇವದೂತನಾದ ಲೋಕೊ ಪೈಲೆಟ್​ - ಮಗುವಿನೊಂದಿಗೆ ರೈಲಿಗೆ ಹಾರಿ ಆತ್ಮಹತ್ಯೆ

ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ರೈಲಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Woman along with child jump in front of train, sustain severe injuries
ಮಗುವಿನೊಂದಿಗೆ ರೈಲಿಗೆ ಹಾರಿದ ಮಹಿಳೆ ಅದೃಷ್ಟವಶಾತ್​ ಪಾರು
author img

By

Published : Oct 23, 2022, 7:53 PM IST

ಮಿರ್ಜಾಪುರ (ಉತ್ತರಪ್ರದೇಶ) : ಮಹಿಳೆಯೊಬ್ಬರು ತಮ್ಮ ಮಗುವಿನೊಂದಿಗೆ ರೈಲಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಿರ್ಜಾಪುರದ ವಿಂಧ್ಯಾಚಲ ರೈಲು ನಿಲ್ದಾಣದಲ್ಲಿ ಶನಿವಾರ ತಡರಾತ್ರಿ 1:30ರ ಸುಮಾರಿಗೆ ನಡೆದಿದೆ.

ಈ ಸಂದರ್ಭ ತಕ್ಷಣ ಲೋಕೋ ಪೈಲೆಟ್​ ರೈಲಿನ ಬ್ರೇಕ್ ಹಾಕಿದ್ದು, ರೈಲಿನ ನಾಲ್ಕು ಬೋಗಿಗಳು ಅವರ ಮೇಲೆ ಹಾದುಹೋಗಿವೆ. ಆಗ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ರೈಲಿನಡಿ ಸಿಲುಕಿದ್ದ ತಾಯಿ ಮತ್ತು ಮಗುವನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ವಿಂಧ್ಯಾಚಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಆರ್‌ಪಿ ಅಧಿಕಾರಿ ರಾಜೇಂದ್ರ ಪ್ರಸಾದ್ ಯಾದವ್, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಸೀಮಾ ಸಿಂಗ್ ಪಟೇಲ್ ಎಂದು ಗುರುತಿಸಲಾಗಿದೆ. ಇವರು ಅಜಂಗಢ ಪೊಲೀಸ್ ಠಾಣಾ ವ್ಯಾಪ್ತಿಯ ಗಂಭೀರ್‌ಪುರದ ಬಿದಿಪುರ್ ಗ್ರಾಮದ ನಿವಾಸಿಯಾಗಿದ್ದಾರೆ.

ಮಗುವಿನೊಂದಿಗೆ ರೈಲಿಗೆ ಹಾರಿದ ಮಹಿಳೆ ಅದೃಷ್ಟವಶಾತ್​ ಪಾರು

ಗುರುವಾರ ತಡರಾತ್ರಿ ತಮ್ಮ ಮಗುವಿನೊಂದಿಗೆ ಮನೆಯಿಂದ ಹೊರಬಂದಿರುವುದಾಗಿ ಮಹಿಳೆಯ ಕುಟುಂಬಸ್ಥರು ಹೇಳಿದ್ದಾರೆ. ಅಲ್ಲದೆ ಈ ಮಹಿಳೆ ಮತ್ತು ಮಗುವಿನ ಬಗ್ಗೆ ಕುಟುಂಬದವರು ಗಂಭೀರ್‌ಪುರ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಆರೋಗ್ಯ ಕೇಂದ್ರದಲ್ಲಿ ನರ್ಸ್ ಕೈಕಾಲು ಕಟ್ಟಿಹಾಕಿ ದುರುಳರಿಂದ ಸಾಮೂಹಿಕ ಅತ್ಯಾಚಾರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.