ನಾಂದೇಡ್ (ಮಹಾರಾಷ್ಟ್ರ) : ನಾಂದೇಡ್ ಜಿಲ್ಲೆಯಲ್ಲಿ ಐದು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಇದರಿಂದಾಗಿ ನದಿ, ತೊರೆಗಳು ತುಂಬಿ ಹರಿಯುತ್ತಿವೆ. ನಗರದ ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿದ್ದು, ಸಂಚಾರವೂ ಬಂದ್ ಆಗಿದೆ. ಇದರ ನಡುವೆ ವಿಭಿನ್ನ ಘಟನೆಯೊಂದು ಜರುಗಿದೆ.
ಪ್ರತಿ ವರ್ಷವೂ ಮಳೆ ಬರುತ್ತದೆ, ಪ್ರವಾಹವನ್ನು ಎದುರಿಸುವುದು ಸಹ ಸಾಮಾನ್ಯ. ಆದರೆ, ನಿಗದಿತ ಸಮಯಕ್ಕೆ ವರ ಮದುವೆಗೆ ತಲುಪದಿದ್ದರೆ, ವಧುವಿಗೆ ಕೆಟ್ಟ ಭಾವನೆ ಉಂಟಾಗುತ್ತದೆ. ಅದಕ್ಕಾಗಿಯೇ ಈ ರೀತಿ ಮಾಡಲಾಗಿದೆ. ಥರ್ಮಾಕೋಲ್ನ್ನೇ ಬಳಕೆ ಮಾಡಿಕೊಂಡು ಅದರ ಮೇಲೆ ಕೂತು ವಧುವಿನ ಮನೆ ತಲುಪಿ ಧಾರ್ಮಿಕ ಕಾರ್ಯಗಳಲ್ಲಿ ವರ ಭಾಗಿಯಾಗಿದ್ದಾನೆ. ಅಷ್ಟೇ ಅಲ್ಲ ನಂಟರಿಷ್ಟರೂ ಸಹ ಇದೇ ರೀತಿ ಗ್ರಾಮಕ್ಕೆ ತಲುಪಿದ್ದಾರೆ.
ವರ 7 ಕಿಲೋಮೀಟರ್ ಥರ್ಮಾಕೋಲಿನ ಮೇಲೆಯೇ ಕೂತು ಪ್ರಯಾಣಿಸಿ ಜೀವನದ ಸಂಗಾತಿಗಾಗಿ ಜೀವವನ್ನೇ ಪಣಕ್ಕಿಟ್ಟು ಸಾಗಿದ ಪರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಡಗಾಂವ್‌ನ ಕರೋರಿ ಪ್ರದೇಶದ ನಿವಾಸಿ ಶಹಾಜಿ ರಾಕ್ಡೆ ಅವರು ಯವತ್ಮಾಲ್ ಜಿಲ್ಲೆಯ ಉಮರ್ಖೇಡ್ ತಾಲೂಕಿನ ಚಿಂಚೋಳಿಯ ನಿವಾಸಿ ಗಾಯತ್ರಿ ಗೊಂಡಡೆ ಅವರನ್ನ ವರಿಸಿದ್ದಾರೆ.
ಆದರೆ, ಪ್ರವಾಹದಿಂದಾಗಿ ಹಡಗಾಂವದಿಂದ ಉಮರಖೇಡ್‌ಗೆ ಹೋಗುವ ರಸ್ತೆ ಬಂದ್ ಆಗಿತ್ತು. ಜುಲೈ 14 ರಂದು ಹಳದಿ ಕಾರ್ಯಕ್ರಮವಿದ್ದು, ಇಂದು ಮದುವೆ ನಿಶ್ಚಯವಾಗಿತ್ತು. ಅದರಂತೆ ವರನ ಮದುವೆಯ ಮೆರವಣಿಗೆ ಸರಿಯಾದ ಸಮಯಕ್ಕೆ ವಧುವಿನ ಮನೆ ತಲುಪಿದೆ. ಕರೋರಿನಿಂದ ಚಿಂಚೋಳಿವರೆಗೆ ಏಳು ಕಿಲೋಮೀಟರ್ ಪ್ರಯಾಣವನ್ನು ಪ್ರವಾಹಭರಿತ ನೀರಿನ ಮೂಲಕ ಮಾಡಲಾಗಿದೆ.
ಇದನ್ನೂ ಓದಿ: ‘ನಾನು ವಿಶ್ವಾಸದ್ರೋಹಿ ಅಲ್ಲ’ ಕೈ ಮೇಲೆ ಸೊಸೈಡ್ ನೋಟ್ ಬರೆದುಕೊಂಡು ಮಹಿಳೆ ಆತ್ಮಹತ್ಯೆ!