ಅಮೃತಸರ: ಅನಾರೋಗ್ಯ ಪತಿಯನ್ನು ನೋಡಿಕೊಳ್ಳಲಾಗದೇ ಪತ್ನಿಯೊಬ್ಬಳು ವಿಮಾ ಹಣಕ್ಕಾಗಿ ಗಂಡನನ್ನೇ ಕೊಲೆ ಮಾಡಿದ ಘಟನೆ ಪಂಜಾಬ್ನ ಅಮೃತಸರದಲ್ಲಿ ನಡೆದಿದೆ.
ಘಟನೆ ಏನು?: ಅಮೃತಸರದ ಬುಲಾರಾ ಗ್ರಾಮದ ನಿವಾಸಿಯಾದ ಮಂಜಿತ್ ಸಿಂಗ್ ಎಂಬುವವರು 20 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಮನೆಯ ನಿರ್ವಹಣೆ ಕಷ್ಟವಾಗಿತ್ತು. ಈ ಕಾರಣಕ್ಕಾಗಿ ನೊಂದಿದ್ದ ಪತ್ನಿ ನರೀಂದರ್ ಕೌರ್ ಪತಿ ಮಂಜಿತ್ ಸಿಂಗ್ಗೆ ವಿಮೆ ಮಾಡಿಸಿದ್ದಾರೆ. ಇದಕ್ಕೆ ತಮ್ಮನ್ನು ನಾಮಿನಿಯಾಗಿ ಸೇರಿಸಿಕೊಂಡಿದ್ದರು.
ಗಂಡ ಸತ್ತರೆ ತನೆಗೆ ವಿಮಾ ಹಣ ಬರುತ್ತದೆ ಎಂದು ಅರಿತ ನರೀಂದರ್ ಕೌರ್ ಮೇ 5 ರಂದು ಗಂಡನನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿದ್ದರು. ಇದು ಯಾರಿಗೂ ಗೊತ್ತಾಗಬಾರದು ಎಂದು ಗೌಪ್ಯವಾಗಿ ಇರಿಸಿ, ತಾನು ಔಷಧ ತರಲು ಮೆಡಿಕಲ್ಗೆ ಹೋಗಿದ್ದರು.
ಮರಳಿ ಬಂದ ಬಳಿಕ ತನ್ನ ಮನೆಯ ಮೇಲೆ ಯಾರೋ ಅಪರಿಚಿತರು ದಾಳಿ ಮಾಡಿ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ನಂಬಿಸಿದ್ದರು. ಈ ಬಗ್ಗೆ ನರೀಂದರ್ ಕೌರ್ ಅವರೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದರು.
ತನಿಖೆಯ ವೇಳೆ ಪತ್ನಿ ನರೀಂದರ್ ಕೌರ್ ಮೇಲೆಯೇ ಅನುಮಾನಗೊಂಡ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ. ಅನಾರೋಗ್ಯದ ಕಾರಣ ಪತಿಯನ್ನು ವಿಮಾ ಹಣಕ್ಕಾಗಿ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಇದೀಗ ಪತ್ನಿ ನರೀಂದರ್ ಕೌರ್ರನ್ನು ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದಾರೆ.
ಓದಿ: ಉಗ್ರರ ಗುಂಡಿನ ದಾಳಿಗೆ ಪೊಲೀಸ್ ಹುತಾತ್ಮ.. 7 ವರ್ಷದ ಮಗಳಿಗೆ ಗಾಯ