ETV Bharat / bharat

ನೆರೆಹೊರೆಯವರ ಕಿರುಕುಳಕ್ಕೆ ಬೇಸತ್ತ ಮಹಿಳೆ: ಮಗನೊಂದಿಗೆ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ! - mumbai woman suicide news

ನೆರೆಹೊರೆಯವರ ಕಿರುಕುಳದಿಂದ ಬೇಸತ್ತ ಮಹಿಳೆ ಡೆತ್​ ನೋಟ್​ ಬರೆದಿಟ್ಟು, ತನ್ನ 10 ವರ್ಷದ ಮಗನೊಂದಿಗೆ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಈಕೆಯ ಗಂಡ ಕೊರೊನಾಗೆ ಬಲಿಯಾಗಿದ್ದರು. ಆಗಿನಿಂದ ಮಹಿಳೆಗೆ ನೆರೆಹೊರೆಯ ಜನರು ಕಿರುಕುಳ ನೀಡಲಾರಂಭಿಸಿದ್ದರು ಎನ್ನಲಾಗ್ತಿದೆ.

mumbai
ಮುಂಬೈ
author img

By

Published : Jun 23, 2021, 3:31 PM IST

Updated : Jun 23, 2021, 3:54 PM IST

ಮುಂಬೈ: ನೆರೆಹೊರೆಯವರ ಕಿರುಕುಳದಿಂದ ಬೇಸತ್ತ ಮಹಿಳೆ ತನ್ನ 10 ವರ್ಷದ ಮಗನೊಂದಿಗೆ ಅಪಾರ್ಟ್​ಮೆಂಟ್​ನ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಮುಂಬೈನಲ್ಲಿ ನಡೆದಿದೆ. ಇತ್ತೀಚೆಗೆ ಈಕೆಯ ಗಂಡ ಕೊರೊನಾಗೆ ಬಲಿಯಾಗಿದ್ದರು ಎಂದು ತಿಳಿದುಬಂದಿದೆ.

ಮಹಿಳೆ ಬರೆದ ಡೆತ್​ನೋಟ್​ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಡೆತ್​ನೋಟ್​ನಲ್ಲಿ, "ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದ ಅಯೂಬ್ ಖಾನ್, ಶಹನಾಜ್ ಖಾನ್ ಮತ್ತು ಶಾದಾಬ್ ಖಾನ್ ನನ್ನ ಆತ್ಮಹತ್ಯೆಗೆ ಕಾರಣ. ಈವರು ನನಗೆ ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲದೆ ಅನೇಕ ಬಾರಿ ನನ್ನ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ" ಎಂದು ಆತ್ಮಹತ್ಯೆಗೆ ಶರಣಾದ ರೇಷ್ಮಾ ಬರೆದಿದ್ದಾರೆ.

ಇದನ್ನು ಓದಿ: ಫೋನ್ ಟ್ಯಾಪಿಂಗ್ ಆರೋಪ​ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಶಾಸಕ ಅರವಿಂದ್ ಬೆಲ್ಲದ್​ಗೆ ನೋಟಿಸ್

ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಾದಾಬ್ ಖಾನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದೆ.

Last Updated : Jun 23, 2021, 3:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.