ETV Bharat / bharat

ಹೇಳದೇ ತವರಿಗೆ ಹೋದ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ - ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ

ತನಗೆ ಹೇಳದೇ ತವರು ಮನೆಗೆ ಬಂದಿದ್ದಕ್ಕೆ ಕೋಪಗೊಂಡ ಪತಿರಾಯ, ಪತ್ನಿಯ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಘಟನೆ ಜಾರ್ಖಂಡ್​ನಲ್ಲಿ ಬೆಳಕಿಗೆ ಬಂದಿದೆ.

wife-burns-with-petrol
ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹೆಚ್ಚಿದ ಪತಿ
author img

By

Published : Oct 20, 2022, 10:28 AM IST

ದುಮ್ಕಾ, ಜಾರ್ಖಂಡ್​: ಹೇಳದೇ ಕೇಳದೇ ತವರಿಗೆ ಹೋಗಿದ್ದಲ್ಲದೇ, ಗಂಡನ ಮನೆಗೆ ಬರಲು ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಕೋಪಗೊಂಡ ಪತಿ ಮಹಾಶಯ ಪತ್ನಿಯ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಸುಟ್ಟ ದಾರುಣ ಘಟನೆ ಜಾರ್ಖಂಡ್​ನಲ್ಲಿ ಬುಧವಾರ ನಡೆದಿದೆ. ಮಹಿಳೆ ಗಂಭೀರ ಗಾಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಪಿಷ್ಠ ಪತಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಕಿತ್ತಾಡಿಕೊಂಡ ದಂಪತಿ ಜಾರ್ಖಂಡ್​ನ ದುಮ್ಕಾದ ನಿವಾಸಿಯಾಗಿದ್ದಾರೆ. ಪತಿ ಯಾವುದೋ ಕಾರಣಕ್ಕಾಗಿ ಬೇರೆ ಊರಿಗೆ ತೆರಳಿದಾಗ ಪತ್ನಿ ಅಜ್ಜಿಯ ಮನೆಗೆ ಹೋಗಿದ್ದಾರೆ. ಬಳಿಕ ರಾತ್ರಿ ವೇಳೆ ಮನೆಗೆ ವಾಪಸ್​ ಆದ ಪತಿರಾಯ, ಪತ್ನಿ ಇಲ್ಲದಿರುವುದು ಕೋಪ ತರಿಸಿದೆ. ಬಳಿಕ ಆಕೆ ಅಜ್ಜಿಯ ಮನೆಗೆ ಹೋಗಿರಬಹುದು ಎಂದು ಭಾವಿಸಿ ಅಲ್ಲಿಗೆ ಬಂದಿದ್ದಾನೆ.

ಪತ್ನಿಯನ್ನು ಅಜ್ಜಿಯ ಮನೆಯಲ್ಲಿ ಕಂಡ ಪತಿಗೆ ವಿಪರೀತ ಕೋಪ ಬಂದಿದೆ. ತನಗೆ ಹೇಳದೇ ಇಲ್ಲಿಗೆ ಯಾಕೆ ಬಂದೆ ಎಂದು ಗದರಿದ್ದಾರೆ. ಬಳಿಕ ಮನೆಗೆ ಬರಲು ಕರೆದಿದ್ದಾರೆ. ಆದರೆ, ಪತ್ನಿ ನಾಳೆ ಬರುವೆ ಎಂದು ಹೇಳಿದ್ದಾರೆ. ಇದರಿಂದ ಕ್ರೋಧಗೊಂಡ ಪತಿ, ಬಾರದಿದ್ದರೆ ಪೆಟ್ರೋಲ್​ ಹಾಕಿ ಸುಡುವೆ ಎಂದು ಬೆದರಿಸಿದ್ದಾನೆ.

ಇಬ್ಬರ ಮಧ್ಯೆ ವಾಗ್ವಾದ ಉಂಟಾಗಿ ಮನೆಯಲ್ಲಿದ್ದ ಪೆಟ್ರೋಲ್​ ತಂದ ಪತಿ, ಪತ್ನಿಯ ಮೇಲೆ ಸುರಿದಿದ್ದಾನೆ. ಬೆಂಕಿ ಕಡ್ಡಿ ಹಚ್ಚಿ ಸುಡುವೆ ಎಂದು ಮುಂದಾದಾಗ ತಡೆಯಲು ಪತ್ನಿ ಯತ್ನಿಸಿದ್ದಾರೆ. ಈ ವೇಳೆ ಅಚಾನಕ್ಕಾಗಿ ಕಡ್ಡಿ ಹೊತ್ತಿಕೊಂಡು ಪತ್ನಿಯ ಸೀರೆಗೆ ಬೆಂಕಿ ಹೊತ್ತಿಕೊಂಡಿದೆ.

ತಕ್ಷಣವೇ ಕುಟುಂಬಸ್ಥರು ಆಕೆಯನ್ನು ಬೆಂಕಿಯಿಂದ ರಕ್ಷಿಸಿದ್ದಾರೆ. ಆದರೆ, ಮಹಿಳೆ ತೀವ್ರ ಸುಟ್ಟ ಗಾಯಕ್ಕೆ ತುತ್ತಾಗಿದ್ದಾರೆ. ಬಳಿಕ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಪತಿಯ ಕೋಪವೇ ಕಾರಣ ಎಂದು ಪತ್ನಿ ನೀಡಿದ ಹೇಳಿಕೆ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಓದಿ: ನಮ್ಮ ನಾಗರಿಕರು ಸಾಧ್ಯವಾದಷ್ಟು ಬೇಗ ಉಕ್ರೇನ್ ತೊರೆಯಬೇಕು: ಭಾರತೀಯ ರಾಯಭಾರ ಕಚೇರಿ ಸಂದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.