ಹೈದರಾಬಾದ್: ದೇಶದಲ್ಲಿ ಕೊರೊನಾ ವೈರಸ್ ಹಾವಳಿ ನಡುವೆ ಬ್ಲಾಕ್ ಫಂಗಸ್ ಕಾಟ ಶುರುವಾಗಿದ್ದು, ಬಹುತೇಕ ಎಲ್ಲೆಡೆ ಈ ಸೋಂಕು ಕಾಣಿಸಿಕೊಳ್ಳಲು ಶುರುವಾಗಿದ್ದರಿಂದ ಇದೊಂದು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಲಾಗ್ತಿದೆ. ಇದರ ಬೆನ್ನಲ್ಲೇ ಇದೀಗ ವೈಟ್ ಫಂಗಸ್ ಕಾಣಿಸಿಕೊಂಡಿದ್ದು, ಎಲ್ಲದಕ್ಕಿಂತಲೂ ಅತಿ ಹೆಚ್ಚು ಡೇಂಜರ್ ಎಂದು ಹೇಳಲಾಗುತ್ತಿದೆ.
ಬ್ಲಾಕ್ ಫಂಗಸ್ಕ್ಕಿಂತಲೂ ಅತಿ ಹೆಚ್ಚು ಅಪಾಯಕಾರಿ ಈ ವೈಟ್ ಫಂಗಸ್ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಬಿಹಾರದ ಪಾಟ್ನಾದಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಶ್ವಾಸಕೋಸಕ್ಕೆ ನೇರವಾಗಿ ದಾಳಿ ಮಾಡುವುದರಿಂದ ಹೆಚ್ಚಿನ ಅಪಾಯವಿರುತ್ತದೆ ಎಂದು ತಿಳಿದು ಬಂದಿದೆ. ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಹೆಚ್ಚಾಗಿ ಈ ಸೋಂಕು ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಕೋವಿಡ್ ಸೋಂಕಿಗೆ ಒಂದೇ ಕುಟುಂಬದ ಆರು ಮಂದಿ ಬಲಿ.. ಮನೆ ದೀಪ ಬೆಳಗಲೂ ಇಲ್ಲ ಜನ!
ವೈಟ್ ಫಂಗಸ್ ಲಕ್ಷಣಗಳು
- ಬ್ಲಾಕ್ಫಂಗಸ್ನಲ್ಲಿ ಕಾಣಿಸಿಕೊಳ್ಳುವ ಬಹುತೇಕ ಲಕ್ಷಣಗಳು ಇಲ್ಲಿ ಗೋಚರಿಸುತ್ತವೆ
- ಪ್ರಮುಖವಾಗಿ ತಲೆ ನೋವು, ಮುಖ ಊತ ಅಥವಾ ಬಾವು
- ಮಾನಸಿಕವಾಗಿ ಕಿರಿಕಿರಿಯಾಗುವುದು
- ಮೇಲಿಂದ ಮೇಲೆ ಮೂಗು ಕಟ್ಟುವಿಕೆ
ಪ್ರಮುಖವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹಾಗೂ ಮದುಮೇಹಿಗಳಲ್ಲಿ ಈ ಸೋಂಕು ಹೆಚ್ಚಾಗಿ ಕಂಡು ಬರಲಿದ್ದು, ಶ್ವಾಸಕೋಶದ ಜೊತೆಗೆ ದೇಹದ ಇತರ ಭಾಗಗಳಾದ ಕಿಡ್ನಿ, ಉಗುರು, ಜನನಾಂಗಗಳು ಹಾಗೂ ಚರ್ಮಕ್ಕೂ ಹಾನಿ ಮಾಡುತ್ತದೆ.
ಕೋವಿಡ್ ಸೋಂಕಿನಿಂದ ಗುಣಮುಖರಾಗುವ ಕೆಲ ಜನರಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಒಂದು ವೇಳೆ ಇದಕ್ಕೆ ಚಿಕಿತ್ಸೆ ನೀಡದಿದ್ದರೆ ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿರುತ್ತವೆ ಎನ್ನಲಾಗಿದೆ. ವೈಟ್ ಫಂಗಸ್ಗೆ ಆ್ಯಂಟಿ ಫಂಗಲ್ ಇಂಜೆಕ್ಷನ್ ನೀಡಲಾಗ್ತಿದ್ದು, ಇದರ ಪ್ರತಿ ಡೋಸ್ನ ಬೆಲೆ 3,500 ರೂ ಆಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ PMCH ಮೈಕ್ರೋಬಯಾಲಜಿ ಮುಖ್ಯಸ್ಥ ಡಾ. ಎಸ್ ಎನ್ ಸಿಂಗ್, ಬಿಹಾರದಲ್ಲಿ ನಾಲ್ವರು ಸೋಂಕಿತರ ಮಾದರಿ ಈಗಾಗಲೇ ತೆಗೆದುಕೊಳ್ಳಲಾಗಿದ್ದು, ಇದರಿಂದ ಅವರ ಶ್ವಾಸಕೋಸಕ್ಕೆ ಹೆಚ್ಚಿನ ತೊಂದರೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.