ರಾಜಸ್ಥಾನ : ಜೋಧಪುರ ಜಿಲ್ಲೆಯ ಫಲೋಡಿ ಪಟ್ಟಣದ ಶ್ರೀ ಸುರ್ಪುರದ ಗ್ರಾಮ ಪಂಚಾಯತ್ ಬಳಿಯ ಮರಳಿನ ಸುಂಟರಗಾಳಿ ಎದ್ದು ಸಾಕಷ್ಟು ಹಾನಿಯಾಗಿದೆ.
ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಇರಿಸಲಾಗಿರುವ ಲ್ಯಾಪ್‌ಟಾಪ್ ಕಂಪ್ಯೂಟರ್ ಸೇರಿದಂತೆ ಸಾವಿರಾರು ಯಂತ್ರಗಳಿಗೆ ಹಾನಿಯಾಗಿದೆ. ಫಲೋಡಿ ಮತ್ತು ಬಾಪ್ ಪ್ರದೇಶದಲ್ಲಿ ನೂರಾರು ವಿದ್ಯುತ್ ಕಂಬಗಳು ಕುಸಿದಿವೆ.
ಗ್ರಾಮಸ್ಥರ ಪ್ರಕಾರ ಬಿಕಾನೆರ್‌ನಿಂದ ಬಂದ ಈ ಸುಂಟರಗಾಳಿಯನ್ನು ನೋಡಿ ಎಲ್ಲರೂ ಬೆರಗಾಗಿದ್ದಾರೆ. ಸುಂಟರಗಾಳಿಯಿಂದ ಈ ಪ್ರದೇಶದ ಅನೇಕ ಮರಗಳು ಧರೆಗುರುಳಿವೆ.