ETV Bharat / bharat

ಇನ್ಮುಂದೆ ವಾಟ್ಸ್​ಆ್ಯಪ್​ನಲ್ಲೇ ಶಾಪಿಂಗ್ ಮಾಡಬಹುದು! - ವಾಟ್ಸ್​ ಆ್ಯಪ್​ ಶಾಪಿಂಗ್ ಬಟನ್

ಬಳಕೆದಾರರು ಇನ್ಮುಂದೆ ವಾಟ್ಸ್​​ಆ್ಯಪ್​ನಲ್ಲೇ ಶಾಪಿಂಗ್ ಮಾಡಬಹುದಾಗಿದೆ. ವಾಟ್ಸ್​​ಆ್ಯಪ್ ಸಂಸ್ಥೆ ಈ ಹೊಸ ಫೀಚರ್ ​ಅನ್ನು ಘೋಷಿಸಿದ್ದು, ಶೀಘ್ರದಲ್ಲೇ ಈ ಹೊಸ ಆಯ್ಕೆ ಲಭ್ಯವಾಗಲಿದೆ.

WhatsApp rolls out new shopping button
ವಾಟ್ಸ್​ ಆ್ಯಪ್​ನಲ್ಲೇ ಶಾಪಿಂಗ್ ಮಾಡಬಹುದು
author img

By

Published : Nov 11, 2020, 9:28 AM IST

ನವದೆಹಲಿ: ಗ್ರಾಹಕರಿಗೆ ಶಾಪಿಂಗ್ ಅನುಭವ ಸುಲಭಗೊಳಿಸುವ ಪ್ರಯತ್ನದಲ್ಲಿ, ವಾಟ್ಸ್ಆ್ಯಪ್ ಹೊಸ ಶಾಪಿಂಗ್ ಬಟನ್ ಅನ್ನು ಪರಿಚಯಿಸುತ್ತಿದೆ.

ವಾಟ್ಸ್ ಆ್ಯಪ್ ಸಂಸ್ಥೆ ತನ್ನ ಫೀಚರ್​ಗಳನ್ನು ಅಭಿವೃದ್ಧಿಪಡಿಸುತ್ತಾ ಬಂದಿದ್ದು, ಇತ್ತೀಚೆಗಷ್ಟೇ ಹಣ ವರ್ಗಾವಣೆ ಮಾಡಲು ಅನುಕೂಲವಾಗುವ ಫೀಚರ್ ಬಿಡುಗಡೆ ಮಾಡಿತ್ತು. ಇನ್ಮುಂದೆ ಬಳಕೆದಾರರು ವಾಟ್ಸ್ ಆ್ಯಪ್​ನಲ್ಲೇ ಶಾಪಿಂಗ್ ಕೂಡ ಮಾಡಬಹುದಾಗಿದೆ.

ಶೀಘ್ರದಲ್ಲೇ ಈ ಹೊಸ ಆಯ್ಕೆ ವಾಟ್ಸ್ ಆ್ಯಪ್​ನಲ್ಲಿ ಲಭ್ಯವಾಗಲಿದೆ. ವಾಟ್ಸ್ ಆ್ಯಪ್​ನಲ್ಲಿ ತಮಗೆ ಬೇಕಾದ ವಸ್ತುಗಳನ್ನು ನೋಡಿ ಖರೀದಿಸಬಹುದಾದ ಹೊಸ ಕ್ಯಾಟಲಾಗ್​ ಬಿಡುಗಡೆಗೊಳಿಸಲಿದೆ. ಅಲ್ಲದೆ ತಮ್ಮ ಇಷ್ಟದ ಆಯ್ಕೆಯ ವಸ್ತುಗಳನ್ನ ಶೇರ್ ಮಾಡುವ ಹಾಗೂ ವ್ಯಾಪಾರಸ್ಥರ ಜೊತೆ ಚಾಟ್ ಮಾಡುವ ಅವಕಾಶ ಕೂಡ ಇದರಲ್ಲಿದೆ. ಹೊಸ ಸೇರ್ಪಡೆ ಭವಿಷ್ಯದ ಅಭಿವೃದ್ಧಿಯ ಸಂಕೇತವಾಗಿದೆ. ಇತ್ತೀಚೆಗೆ, ಫೇಸ್‌ಬುಕ್ ಶೀಘ್ರದಲ್ಲೇ ಶಾಪಿಂಗ್ ಅನ್ನು ವಾಟ್ಸ್​ ಆ್ಯಪ್‌ಗೆ ತರುವುದಾಗಿ ಘೋಷಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.