ನೀವು ನಿಮ್ಮ ದೇಹವನ್ನು ಸಾಕಷ್ಟು ತೇವದಿಂದ ಕೂಡಿರುವಂತೆ ನೋಡಿಕೊಳ್ಳದೇ ಹೋದರೆ ಚರ್ಮದ ತುರಿಕೆ, ಶುಷ್ಕತೆಯಂತಹ ಸಮಸ್ಯೆಗಳು ಯಾವಾಗ ಬೇಕಾದರೂ ಎದುರಾಗಬಹುದು. ಕೆಲವು ಜನರು ತಮ್ಮ ತ್ವಚೆಯ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿದರೆ, ಹೆಚ್ಚಿನವರು ದೇಹವನ್ನು ತೇವವಾಗಿಟ್ಟುಕೊಳ್ಳುವುದನ್ನು ನಿರ್ಲಕ್ಷಿಸುತ್ತಾರೆ ಎನ್ನಲಾಗಿದೆ.
ಮಾಯಿಶ್ಚರೈಸರ್‌ಗಳನ್ನು ಯಾವ ಸಮಯದಲ್ಲಿ ಹಚ್ಚಿಕೊಳ್ಳಬೇಕು ಎಂಬುದರ ಬಗ್ಗೆ ಸರಿಯಾದ ತಿಳಿವಳಿಕೆ ಅಗತ್ಯ. ಪ್ರಮುಖ ದೇಹದ ಆರೈಕೆ ಬ್ರಾಂಡ್‌ನ ರಿಟೇಲ್ ಮುಖ್ಯಸ್ಥ ಕಿಮಿ ಜೈನ್ ಅವರು ನಿಮ್ಮ ದೇಹವನ್ನು ತೇವಗೊಳಿಸಲು ಸೂಕ್ತವಾದ ಸಮಯ ಯಾವುದೆಂದು ಹೇಳಿದ್ದಾರೆ.
ಬೆಳಗ್ಗೆ:
ಬೆಳಗ್ಗೆ ದೇಹವನ್ನು ತೇವಗೊಳಿಸುವುದು ನಿಮ್ಮ ಚರ್ಮವನ್ನು ಹಗಲಿನಲ್ಲಿ ಅಸಂಖ್ಯಾತ ಚರ್ಮ ಹಾನಿಕಾರಕ ಅಂಶಗಳಿಂದ ದೂರವಿಡುವಂತೆ ಮಾಡುತ್ತದೆ. ನೀವು ಹೊರಗಿರುವಾಗ ಚರ್ಮವು ನಿರಂತರವಾಗಿ ಕಠಿಣ ರಾಸಾಯನಿಕಗಳು ಮತ್ತು ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುತ್ತದೆ, ಆದ್ದರಿಂದ ಹೊರಗೆ ಹೋಗುವಾಗ ರಕ್ಷಣಾತ್ಮಕ ಮತ್ತು ಹಿತವಾದ ಮಾಯಿಶ್ಚರೈಸರ್ ಅನ್ನು ಬಳಸುವುದು ಅಗತ್ಯವಾಗಿರುತ್ತದೆ.
ಸ್ನಾನ, ಶೇವಿಂಗ್ ನಂತರ:
ನೀವು ಸ್ನಾನ ಮಾಡಿದ ನಂತರ, ನಿಮ್ಮ ಚರ್ಮವು ಗರಿಷ್ಠ ತೇವಾಂಶವನ್ನು ಹೊಂದಿರುತ್ತದೆ ಮತ್ತು ಮಾಯಿಶ್ಚರೈಸರ್ಗಳು ಹೈಡ್ರೇಟೆಡ್ ಚರ್ಮದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಅದಕ್ಕಾಗಿಯೇ ಡರ್ಮಟಾಲಾಜಿಸ್ಟ್ಗಳು ಯಾವಾಗಲೂ ಸ್ನಾನ ಮಾಡಿ ಹೊರಬಂದ ತಕ್ಷಣ ಮಾಯಿಶ್ಚರೈಸರ್ ಅನ್ನು ಹಚ್ಚಲು ಶಿಫಾರಸು ಮಾಡುತ್ತಾರೆ. ಏಕೆಂದರೆ ಮಾಯಿಶ್ಚರೈಸರ್ಗಳು ದೇಹದಲ್ಲಿ ಇನ್ನೂ ಸ್ವಲ್ಪ ನೀರನ್ನು ಹಿಡಿದಿಟ್ಟುಕೊಳ್ಳಲು ಮತ್ತು ದೇಹವನ್ನು ಹೈಡ್ರೇಟ್ ಮಾಡಲು ಸಾಧ್ಯವಾಗುತ್ತದೆ.
ಶೇವಿಂಗ್ ದೇಹದ ಅನಗತ್ಯ ಕೂದಲನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಆದರೆ, ಮೇಲ್ಮೈ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಯಾವುದೇ ಚರ್ಮದ ಕಿರಿಕಿರಿಯನ್ನು ಶಮನಗೊಳಿಸಲು ಮತ್ತು ತೆರೆದ ಚರ್ಮವನ್ನು ಶುಷ್ಕತೆಯಿಂದ ರಕ್ಷಿಸಲು, ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುವ ಯಾವುದೇ ಹೈಡ್ರೇಟಿಂಗ್ ಮಾಯಿಶ್ಚರೈಸರ್ ಅನ್ನು ಬಳಸಿ.
ವಿಮಾನಯಾನದ ಬಳಿಕ:
ಪ್ರಯಾಣವು ನಿಮ್ಮ ಚರ್ಮವನ್ನು ಒಣಗುವಂತೆ ಮಾಡುತ್ತದೆ. ಹಾಗಾಗಿ ಬಾಡಿ ಲೋಷನ್ಗಳನ್ನು ಪ್ರಯಾಣದ ವೇಳೆ ಕೊಂಡೊಯ್ಯಬೇಕು. ನಿಮ್ಮ ವಿಮಾನ ಪ್ರಯಾಣದ ಸಮಯದಲ್ಲಿ ಅದನ್ನು ಹಚ್ಚಬೇಕು. ಇದು ನೀವು ವಿಮಾನವನ್ನು ಇಳಿದ ನಂತರ ಎದುರಾಗುವ ಚರ್ಮ ಒಣಗಿದಂತಾಗುವ ಸಮಸ್ಯೆಯನ್ನು ಎದುರಿಸಲು ಸಹಾಯ ಮಾಡುತ್ತದೆ.
ಮಲಗುವ ಮುನ್ನ:
ಚರ್ಮವು ರಾತ್ರಿ 10 ಗಂಟೆಯಿಂದ 11 ಗಂಟೆ ಸಮಯದಲ್ಲಿ ತನ್ನನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳುತ್ತದೆ ಎಂದು ಸಂಶೋಧನೆ ತೋರಿಸಿದೆ. ಅದಕ್ಕಾಗಿಯೇ ನೀವು ಯಾವಾಗಲೂ ಈ ಸಮಯದಲ್ಲಿ ಅಥವಾ ಅದಕ್ಕೂ ಮೊದಲು ನಿಮ್ಮ ಚರ್ಮವನ್ನು ತೇವಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೇ, ನಿದ್ರೆಯ ಸಮಯದಲ್ಲಿ ಚರ್ಮದ ಟ್ರಾನ್ಸ್ - ಎಪಿಡರ್ಮಲ್ ನೀರಿನ ನಷ್ಟವು ಹೆಚ್ಚಾಗುತ್ತದೆ ಎಂದು ಗಮನಿಸಲಾಗಿದೆ, ಇದು ಚರ್ಮದಿಂದ ಸಾಕಷ್ಟು ತೇವಾಂಶವನ್ನು ತೆಗೆದುಹಾಕುತ್ತದೆ. ಈ ಎಲ್ಲ ಕಾರಣಗಳು ನಿದ್ರೆಗೆ ಹೋಗುವ ಮೊದಲು ನಿಮ್ಮ ದೇಹವನ್ನು ಯಾವಾಗಲೂ ಏಕೆ ತೇವವಾಗಿರುವಂತೆ ನೋಡಿಕೊಳ್ಳಬೇಕು ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಚರ್ಮ ಸಿಪ್ಪೆಸುಲಿಯುವಿಕೆಯ ನಂತರ:
ಯಾವುದೇ ಚರ್ಮದ ರಕ್ಷಣೆಯ ವಿಧಾನದಲ್ಲಿ ಎಕ್ಸ್‌ಫೋಲಿಯೇಶನ್ ಒಂದು ಪ್ರಮುಖ ಹಂತವಾಗಿದೆ. ಆದರೆ, ಚರ್ಮ ಸಿಪ್ಪೆಸುಲಿದಂತಾದ ನಂತರ ಬಾಡಿ ಲೋಷನ್ ಅನ್ನು ಹಚ್ಚಿಕೊಳ್ಳುವುದು ಅಷ್ಟೇ ಅಗತ್ಯವಿದೆ. ಎಫ್ಫೋಲಿಯೇಟ್ ಫಲಿತಾಂಶವು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ, ಇದು ಚರ್ಮದ ಹೊಸ ಪದರಕ್ಕೆ ಜಾಗವನ್ನು ನೀಡುತ್ತದೆ. ಬಾಡಿ ಲೋಷನ್ ಹಚ್ಚುವುದರಿಂದ ಚರ್ಮದ ಮೇಲಿನ ಪದರವನ್ನು ಶಮನಗೊಳಿಸಲು ಮತ್ತು ತೇವಾಂಶ ಪಡೆಯಲು ಸಹಕಾರಿಯಾಗುತ್ತದೆ.
ವರ್ಕೌಟ್ ಮಾಡುವ ಮೊದಲು:
ವರ್ಕೌಟ್ ಟೈಮ್ ಹೆಚ್ಚಾಗಿ ಬೆವರುವಿಕೆ ಮತ್ತು ದಣಿವನ್ನು ಉಂಟು ಮಾಡುತ್ತದೆ. ಹಾಗಾಗಿ ಹೊರಹೋಗುವ ಮೊದಲು ನಿಮ್ಮ ಚರ್ಮವನ್ನು ಅದಕ್ಕೆ ರೆಡಿಯಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಹೊರಗೆ ವ್ಯಾಯಾಮ ಮಾಡುವುದು ಹೆಚ್ಚಾಗಿ ಶುಷ್ಕತೆಗೆ ಕಾರಣವಾಗುತ್ತದೆ. ವರ್ಕೌಟ್ಗೆ ಹೋಗುವ ಮೊದಲು ಹಗುರಾದ ಬಾಡಿ ಲೋಷನ್ ಅನ್ನು ಹಚ್ಚಲು ಶಿಫಾರಸು ಮಾಡಲಾಗಿದೆ.