ETV Bharat / bharat

ಜೆ ಪಿ ನಡ್ಡಾ ಬೆಂಗಾವಲು ವಾಹನದ ಮೇಲೆ ದಾಳಿ ಪ್ರಕರಣ : 7 ಆರೋಪಿಗಳನ್ನ ಬಂಧಿಸಿದ ಬಂಗಾಳ ಪೊಲೀಸರು

ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಕೈಲಾಶ್ ವಿಜಯವರ್ಗಿಯಾ ಕೋಲ್ಕತ್ತಾದಿಂದ ಡೈಮಂಡ್ ಹಾರ್ಬರ್ ಪ್ರದೇಶಕ್ಕೆ ತೆರಳುತ್ತಿದ್ದಾಗ ದಕ್ಷಿಣ-24 ಪರಗಣ ಜಿಲ್ಲೆಯಲ್ಲಿ ಬಂಗಾಳದ ಬೆಂಗಾವಲು ವಾಹನದ ಮೇಲೆ ಕಲ್ಲೆಸೆದು ದಾಳಿ ಮಾಡಲಾಗಿತ್ತು..

Vijayvargiya convoy attack
ಕಾರಿನ ಮೇಲೆ ದಾಳಿ
author img

By

Published : Dec 12, 2020, 8:10 AM IST

ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಬೆಂಗಾವಲು ಮೇಲೆ ಗುರುವಾರ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ.

ಘಟನೆ ಸಂಬಂಧ ಸುಮೋಟೊ ಕೇಸ್​ ದಾಖಲಿಸಿಕೊಂಡಿದ್ದ ಬಂಗಾಳ ಪೊಲೀಸರು ಅಪರಿಚಿತ ಏಳು ಜನರ ವಿರುದ್ಧ ಜೆಪಿನಡ್ಡಾ ಬೆಂಗಾವಲು ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಡಿ ಎರಡು ಪ್ರಕರಣ ದಾಖಲಿಸಿದ್ದಾರೆ.

ಶಿರಾಕೋಲ್ ಮತ್ತು ಡೆಬಿಪುರದಲ್ಲಿ ಜನರನ್ನು ಕೆರಳಿಸಿದ ಆರೋಪ ಹೊತ್ತಿರುವ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ವಿರುದ್ಧ 3ನೇ ಎಫ್‌ಐಆರ್ ದಾಖಲಿಸಲಾಗಿದೆ. ದಾಳಿ ನಡೆಸಿದ ವೇಳೆ ರಾಕೇಶ್ ಸಿಂಗ್ ಬೆಂಗಾವಲಿನ ಮುಂದಾಳತ್ವ ವಹಿಸಿದ್ರು.

ಇನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಜೆ ಪಿ ನಡ್ಡಾ ಅವರ ಬೆಂಗಾವಲು ಮೇಲೆ ನಡೆದ ಹಿಂಸಾತ್ಮಕ ದಾಳಿಯ ಕುರಿತು ಕೇಂದ್ರಕ್ಕೆ ವರದಿ ಕಳುಹಿಸಿದ್ದೇನೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಹೇಳಿದ್ದಾರೆ.

ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಕೈಲಾಶ್ ವಿಜಯವರ್ಗಿಯಾ ಕೋಲ್ಕತ್ತಾದಿಂದ ಡೈಮಂಡ್ ಹಾರ್ಬರ್ ಪ್ರದೇಶಕ್ಕೆ ತೆರಳುತ್ತಿದ್ದಾಗ ದಕ್ಷಿಣ-24 ಪರಗಣ ಜಿಲ್ಲೆಯಲ್ಲಿ ಬಂಗಾಳದ ಬೆಂಗಾವಲು ವಾಹನದ ಮೇಲೆ ಕಲ್ಲೆಸೆದು ದಾಳಿ ಮಾಡಲಾಗಿತ್ತು. ಬಿಜೆಪಿ ನಾಯಕರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿತ್ತು.

ಇದನ್ನೂ ಓದಿ:ಪ.ಬಂಗಾಳದಲ್ಲಿ ಜೆ.ಪಿ ನಡ್ಡಾ ಬೆಂಗಾವಲು ವಾಹನದ ಮೇಲೆ ಕಲ್ಲೆಸೆತ

ಈ ದಾಳಿಯು ಟಿಎಂಸಿ ಮತ್ತು ಬಿಜೆಪಿ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವಿಟರ್‌ನಲ್ಲಿ, "ಬಂಗಾಳವು ತೃಣಮೂಲ ಆಡಳಿತದಲ್ಲಿ ದಬ್ಬಾಳಿಕೆ, ಅರಾಜಕತೆ ಮತ್ತು ಕತ್ತಲೆಯ ಯುಗಕ್ಕೆ ಇಳಿದಿದೆ. ರಾಜಕೀಯ ಹಿಂಸಾಚಾರವನ್ನು ಸಾಂಸ್ಥೀಕರಣಗೊಳಿಸಿದ ಮತ್ತು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಆಳ್ವಿಕೆಯಲ್ಲಿ ತೀವ್ರತೆಗೆ ತಂದ ರೀತಿ ದುಃಖಕರವಾಗಿದೆ ಮತ್ತು ಚಿಂತೆಗೀಡುಮಾಡಿದೆ ಎಂದು ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.