ETV Bharat / bharat

ಚಳಿಗಾಲದ ಸಾಮಾನ್ಯ ಕಾಯಿಲೆಗಳಿಗೆ ಇಲ್ಲಿವೆ ಉತ್ತಮ ಸಲಹೆಗಳು.. - ಶೀತ

ಚಳಿಗಾಲವು ಶೀತಗಾಳಿಯಿಂದ ಕೂಡಿರುವುದರಿಂದ ನೆಗಡಿ, ಜ್ವರ, ಅಸ್ತಮಾ, ಒಣ ಚರ್ಮದಂತಹ ಕಾಯಿಲೆಗಳು ಸಾಮಾನ್ಯವಾಗಿರುತ್ತದೆ. ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಈ ಕಾಯಿಲೆಗಳಿಂದ ದೂರವಿರಲು ಕೆಲ ಉತ್ತಮ ಸಲಹೆಗಳು ಇಲ್ಲಿವೆ..

ನೆಗಡಿ
ನೆಗಡಿ
author img

By

Published : Nov 12, 2021, 7:40 PM IST

ಆಯುರ್ವೇದದ ಪ್ರಕಾರ ಒಂದು ವರ್ಷವನ್ನು 2 ಕಾಲಗಳಾಗಿ ವಿಂಗಡಿಸಲಾಗಿದೆ. ಅವು ಉತ್ತರಾಯಣ ಮತ್ತು ದಕ್ಷಿಣಾಯಣ. ಪ್ರತಿ ಕಾಲವು 2 ತಿಂಗಳಿಗೊಂದರಂತೆ 3 ಋತುಗಳನ್ನು ಒಳಗೊಂಡಿರುತ್ತದೆ. ಹೀಗಾಗಿ, ಒಂದು ವರ್ಷಕ್ಕೆ 6 ಋತುಗಳು ಇರುತ್ತವೆ.

1.ಉತ್ತರಾಯಣ ಕಾಲ (ಜನವರಿ 14 ರಿಂದ ಜುಲೈ 14)

  • ಶಿಶಿರ ಋತು - ಜನವರಿ ಮಧ್ಯದಿಂದ ಮಾರ್ಚ್ ಮಧ್ಯದವರೆಗೆ
  • ವಸಂತ ಋತು - ಮಾರ್ಚ್ ಮಧ್ಯದಿಂದ ಮೇ ಮಧ್ಯದವರೆಗೆ
  • ಗ್ರಿಷ್ಮಾ ಋತು - ಮೇ ಮಧ್ಯದಿಂದ ಜುಲೈ ಮಧ್ಯದವರೆಗೆ

2.ದಕ್ಷಿಣಾಯಣ ಕಾಲ (ಜುಲೈ 14 ರಿಂದ ಜನವರಿ 14)

  • ವರ್ಷ ಋತು - ಜುಲೈ ಮಧ್ಯದಿಂದ ಸೆಪ್ಟೆಂಬರ್ ಮಧ್ಯದವರೆಗೆ
  • ಶರದ್ ಋತು - ಸೆಪ್ಟೆಂಬರ್ ಮಧ್ಯದಿಂದ ನವೆಂಬರ್ ಮಧ್ಯದವರೆಗೆ
  • ಹೇಮಂತ ಋತು - ನವೆಂಬರ್ ಮಧ್ಯದಿಂದ ಜನವರಿ ಮಧ್ಯದವರೆಗೆ

ಹಾಗೆಯೇ ನಾವು ಋತು ಸಂಧಿಯ ಬಗ್ಗೆ ಮಾತನಾಡಿದರೆ, ಇಲ್ಲಿ 'ಋತು' ಎಂದರೆ ಸೀಸನ್​ ಮತ್ತು 'ಸಂಧಿ' ಎಂದರೆ ಜಂಕ್ಷನ್. ಹೀಗಾಗಿ, ಋತು ಸಂಧಿ ಎಂದರೆ, ಹಿಂದಿನ ಋತುವಿನ ಕೊನೆಯ 7 ದಿನಗಳು ಮತ್ತು ಮುಂದಿನ ಋತುವಿನ ಮೊದಲ 7 ದಿನಗಳನ್ನು ಒಳಗೊಂಡಿರುವ ಅವಧಿಯಾಗಿದೆ. ಈ ಅವಧಿಯಲ್ಲಿ, ನಮ್ಮ ದೇಹವು ಸೋಂಕುಗಳಿಗೆ ಗುರಿಯಾಗುತ್ತದೆ.

ಈ 6 ಋತುಗಳಲ್ಲಿ ಜನವರಿ ಮಧ್ಯದಿಂದ ಮಾರ್ಚ್ ಮಧ್ಯದವರೆಗೆ ಇರುವ ಶಿಶಿರ ಋತು (ಚಳಿಗಾಲ) ಶೀತಗಾಳಿಯಿಂದ ಕೂಡಿರುತ್ತದೆ. ಚಳಿಗಾಲದಲ್ಲಿ ಸಂಭವಿಸುವ ಸಾಮಾನ್ಯ ಕಾಯಿಲೆಗಳು ಹೀಗಿವೆ..

ನೆಗಡಿ

ಸಾಮಾನ್ಯ ಶೀತವು ಶ್ವಾಸೇಂದ್ರಿಯ ಪ್ರದೇಶದ ಮೇಲ್ಭಾಗದಲ್ಲಿ ಮುಖ್ಯವಾಗಿ ವೈರಸ್‌ಗಳಿಂದ ಉಂಟಾಗುವ ಸೋಂಕಾಗಿದೆ. ಇದು ಹೆಚ್ಚಾಗಿ ಮಕ್ಕಳು, ವಯಸ್ಸಾದ ಜನರು ಮತ್ತು ಇತರ ರೋಗನಿರೋಧಕ-ಶಕ್ತಿ ಕಡಿಮೆ ಇರುವ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಗಂಟಲು ಕಿರಿಕಿರಿ, ಕಫದೊಂದಿಗೆ ಅಥವಾ ಕಫ ರಹಿತ ಕೆಮ್ಮು,ಮೂಗು ಉರಿಯುವುದು, ಸೀನು, ಕಣ್ಣುಗಳಲ್ಲಿ ನೀರು, ತಲೆನೋವು ಮತ್ತು ಸೌಮ್ಯ ಜ್ವರ ಇದರ ರೋಗಲಕ್ಷಣಗಳಾಗಿವೆ.

ಹೊಟ್ಟೆ ಜ್ವರ

ನೆಗಡಿ
ನೆಗಡಿ

ಹೊಟ್ಟೆ ಜ್ವರವು ಚಳಿಗಾಲದಲ್ಲಿ ವೇಗವಾಗಿ ಹರಡುತ್ತದೆ ಮತ್ತು ಇದು ನೊರೊವೈರಸ್‌ನಿಂದ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ ಹೊಟ್ಟೆಯೊಳಗೆ ನಿರಂತರ ಉರಿಯಿರುತ್ತದೆ. ಇದು ಆಹಾರ ಮತ್ತು ಪಾನೀಯಗಳ ಮೂಲಕ ಮತ್ತು ಮಲಕ್ಕೆ ಸಂಪರ್ಕ ಹೊಂದಿದ ಮಾಲಿನ್ಯದ ಮೂಲಕ ಸುಲಭವಾಗಿ ಹರಡುತ್ತದೆ. ವಾಕರಿಕೆ, ವಾಂತಿ, ನೀರಿನಂಶದ ಅತಿಸಾರ ಮತ್ತು ಹೊಟ್ಟೆ ಉರಿ ರೋಗಲಕ್ಷಣಗಳಾಗಿವೆ. ಕೆಲವರು ಶೀತ, ತಲೆನೋವು, ಆಯಾಸ ಮತ್ತು ಸ್ನಾಯು ನೋವುಗಳನ್ನು ಸಹ ಅನುಭವಿಸಬಹುದು.

ಒಣ ಚರ್ಮ

ಚಳಿಗಾಲದ ಚರ್ಮ ಎಂದೂ ಕರೆಯಲ್ಪಡುವ ಒಣ ಚರ್ಮವು ಸಾಮಾನ್ಯವಾಗಿ ಚಳಿಗಾಲದ ಅವಧಿಯಲ್ಲಿ ಪರಿಸರದ ತೇವಾಂಶವು ತುಂಬಾ ಕಡಿಮೆಯಾದಾಗ ಬರುತ್ತದೆ. ಶೀತ ಮತ್ತು ಶುಷ್ಕ ಗಾಳಿಯಿಂದಾಗಿ ಚರ್ಮದ ನೀರಿನ ಅಂಶ ಆವಿಯಾಗುತ್ತದೆ. ಈ ಅವಧಿಯಲ್ಲಿ ಚರ್ಮವು ಉರಿಯೂತಕ್ಕೆ ಒಳಗಾಗುತ್ತದೆ.

ಅಸ್ತಮಾ

ಅಸ್ತಮಾ ಎನ್ನುವುದು ಉಸಿರಾಟದ ಮಾರ್ಗವು ಕಿರಿದಾಗುವ ಮತ್ತು ಉರಿಯುವ ಸ್ಥಿತಿಯಾಗಿದೆ. ಇದು ಉಸಿರಾಟದ ತೊಂದರೆ, ಕೆಮ್ಮು ಮತ್ತು ಉಬ್ಬಸಕ್ಕೆ ಕಾರಣವಾಗುತ್ತದೆ. ಕೆಲವು ವ್ಯಕ್ತಿಗಳಿಗೆ, ಈ ರೋಗಲಕ್ಷಣಗಳು ಚಳಿಗಾಲದಲ್ಲಿ ಉಲ್ಬಣಗೊಳ್ಳಬಹುದು. ತಂಪಾದ ಶುಷ್ಕ ಗಾಳಿಯು ವಾಯುಮಾರ್ಗಗಳನ್ನು ಕೆರಳಿಸಬಹುದು. ದೇಹದಲ್ಲಿ ಹೆಚ್ಚು ಲೋಳೆ ಅಂಶ ಉತ್ಪತ್ತಿಯಾಗಿ ರೋಗಲಕ್ಷಣಗಳನ್ನು ಹೆಚ್ಚಿಸುತ್ತದೆ. ಅಲ್ಲದೆ, ತಂಪಾದ ವಾತಾವರಣವು ಶ್ವಾಸನಾಳದ ಸಂಕೋಚನವನ್ನು ಇನ್ನಷ್ಟು ಹದಗೆಡಿಸುತ್ತದೆ.

ಫ್ಲ್ಯೂ

ಫ್ಲ್ಯೂ ಅನ್ನು ಸಾಮಾನ್ಯವಾಗಿ ನೆಗಡಿ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಆದರೆ, ಎರಡೂ ವಿಭಿನ್ನವಾಗಿವೆ. ಇದು ಸಾಮಾನ್ಯ ವೈರಲ್ ಸೋಂಕಾಗಿದ್ದು, ಇದು ಹೆಚ್ಚು ದುರ್ಬಲ ಜನರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಇದು ಶ್ವಾಸಕೋಶ, ಗಂಟಲು ಮತ್ತು ಮೂಗಿನ ಮೇಲೆ ಪರಿಣಾಮ ಬೀರುತ್ತದೆ. ಫ್ಲ್ಯೂ ಸಾಮಾನ್ಯವಾಗಿ ಕಿರಿಯ ಮತ್ತು ವಯಸ್ಸಾದ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಅಧಿಕ ಜ್ವರ, ಶೀತ, ಗಂಟಲು ನೋವು, ವಾಕರಿಕೆ, ಊದಿಕೊಂಡ ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು ಮತ್ತು ತಲೆನೋವು ಇದರ ರೋಗಲಕ್ಷಣಗಳಾಗಿವೆ.

Herbal tea
ಹರ್ಬಲ್​ ಟೀ

ಈ ಕಾಯಿಲೆಗಳಿಗೆ ಉತ್ತಮ ಸಲಹೆಗಳು..

1.ವೈಯಕ್ತಿಕ ನೈರ್ಮಲ್ಯ

ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳುವುದು ಹೊಟ್ಟೆ ಜ್ವರ, ನೆಗಡಿ ಮತ್ತು ಫ್ಲ್ಯೂನಂತಹ ಸಾಂಕ್ರಾಮಿಕ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇರುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ನಿಮ್ಮಿಂದ ಮತ್ತೊಬ್ಬ ವ್ಯಕ್ತಿಗೆ ಸೋಂಕು ಹರಡುವುದನ್ನು ತಡೆಯಲೂ ಇದು ಸಹಾಯ ಮಾಡುತ್ತದೆ. ಜಲನೇತಿಯಂತಹ ಯೋಗ ಕ್ರಿಯೆಗಳನ್ನು ಅಭ್ಯಾಸ ಮಾಡುವುದರಿಂದ ಶ್ವಾಸೇಂದ್ರಿಯ ಪ್ರದೇಶದಿಂದ ಹೆಚ್ಚುವರಿ ಲೋಳೆಪೊರೆಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದು ಯಾವುದೇ ಅಡಚಣೆಯಿಲ್ಲದೆ ಉಸಿರಾಡಲು ಸಹಾಯಕವಾಗಿದೆ. ಅಸ್ತಮಾ ಮತ್ತು ಅಲರ್ಜಿಯನ್ನು ನಿವಾರಿಸುತ್ತದೆ. ತಲೆನೋವಿಗೂ ಇದು ರಾಮಬಾಣವಾಗಿದೆ.

2.ಗಿಡಮೂಲಿಕೆಗಳ ಪರಿಹಾರಗಳು

ತುಳಸಿ - ಇದು ಉತ್ತಮ ನಂಜುನಿರೋಧಕ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಸಾಮಾನ್ಯ ಶೀತ ಮತ್ತು ಜ್ವರದಂತಹ ವೈರಲ್ ಸೋಂಕುಗಳಿಗೆ ಇದನ್ನು ಶಿಫಾರಸು ಮಾಡಲಾಗುವುದು. ಇದು ಕಫವನ್ನು ದ್ರವೀಕರಿಸಲು ಸಹಾಯ ಮಾಡುತ್ತದೆ ಮತ್ತು ಕೆಮ್ಮು ಮತ್ತು ಅಸ್ತಮಾಗೆ ಪರಿಣಾಮಕಾರಿಯಾಗಿದೆ. ಇದನ್ನು ಸೂಪ್ ಮತ್ತು ಸಾಸ್‌ಗಳಿಗೆ ಸೇರಿಸಿ ಸೇವಿಸಬಹುದಾಗಿದೆ.

ಅರಿಶಿನ - ಇದು ಉತ್ತಮ ಆಂಟಿವೈರಲ್ ಅಂಶವನ್ನು ಹೊಂದಿದೆ ಮತ್ತು ಸಾಂಕ್ರಾಮಿಕ ರೋಗಗಳ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

3.ಆಹಾರ ಕ್ರಮಗಳು

ವಿಟಮಿನ್ ಸಿ ಭರಿತ ಆಹಾರಗಳು: ಅಂಗಾಂಶಗಳ ದುರಸ್ತಿಗೆ ವಿಟಮಿನ್ ಸಿ ಭರಿತ ಆಹಾರವನ್ನು ತೆಗೆದುಕೊಳ್ಳುವುದು ಅವಶ್ಯಕ. ಇದು ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಸುಧಾರಿಸಲು ಮತ್ತು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಭರಿತ ಆಹಾರಗಳಲ್ಲಿ ಆಮ್ಲಾ, ಸ್ಟ್ರಾಬೆರಿ, ಬ್ರೊಕೊಲಿ, ಬ್ರಸೆಲ್ ಮೊಗ್ಗುಗಳು, ಮೆಣಸು, ನಿಂಬೆ, ಕಿತ್ತಳೆ ಮುಂತಾದ ಸಿಟ್ರಸ್ ಹಣ್ಣುಗಳು ಸೇರಿವೆ.

ಪ್ರೋಬಯಾಟಿಕ್‌ಗಳು: ಪ್ರೋಬಯಾಟಿಕ್‌ಗಳು ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶವು ಸೋಂಕುಗಳನ್ನು ಪಡೆಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. ಇದು ಮಜ್ಜಿಗೆ, ನೆನೆ ಹಾಕಿದ ಅಕ್ಕಿ ನೀರು, ತರಕಾರಿಗಳ ಉಪ್ಪಿನಕಾಯಿಯಲ್ಲಿ ಇರುತ್ತದೆ.

ಸಾಮಾನ್ಯ ಉಷ್ಣಾಂಶ ಕಾಯ್ದುಕೊಳ್ಳುವುದು: ಸಾಕಷ್ಟು ಪ್ರಮಾಣದ ಬೆಚ್ಚಗಿನ ನೀರನ್ನು ಕುಡಿಯುವುದು ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಬ್ಬರು ಪ್ರತಿದಿನ ಕನಿಷ್ಠ 8-12 ಗ್ಲಾಸ್ ನೀರನ್ನು ಸೇವಿಸಬೇಕು.

ಬಿಸಿ ಸೂಪ್‌ಗಳು : ನಮ್ಮ ಚಳಿಗಾಲದ ಮೆನುವಿನಲ್ಲಿ ಸೇರಿಸಲು ಸೂಪ್ ಉತ್ತಮ ಆಹಾರವಾಗಿದೆ. ರೋಸ್ಮರಿ, ಓರೆಗಾನೊ, ಶುಂಠಿ, ಬೆಳ್ಳುಳ್ಳಿ, ಮೆಣಸು, ಜೀರಿಗೆ ಮುಂತಾದ ಚಳಿಗಾಲಕ್ಕೆ ಉತ್ತಮವಾದ ವಿವಿಧ ಗಿಡಮೂಲಿಕೆಗಳು ಮತ್ತು ಮಸಾಲೆಯಕ್ತ ಟೀ, ಸೂಪ್​ ಬಳಸುವುದು ಉತ್ತಮ.

4.ವ್ಯಾಯಾಮ

ದೇಹದ ಶಾಖವನ್ನು ಹೆಚ್ಚಿಸಲು ಮತ್ತು ಹೃದಯದ ಕಾರ್ಯಗಳನ್ನು ಸುಧಾರಿಸಲು ಸಹಾಯ ಮಾಡುವ ಕಾರ್ಡಿಯೋ ಅಥವಾ ಯೋಗ ಅಭ್ಯಾಸಗಳನ್ನು ಮಾಡುವುದು ಒಳಿತು. ಇದರಿಂದ ದೇಹದ ವಿವಿಧ ಭಾಗಗಳಿಗೆ ರಕ್ತ ಪರಿಚಲನೆ ಕೂಡ ಸರಿಯಾಗಿ ಆಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.