ಮೇಷ: ಈ ವಾರ ನಿಮ್ಮ ಜ್ಞಾನಾಭಿವೃದ್ಧಿಯಾಗಲಿದೆ. ಪುಸ್ತಕಗಳು ನಿಮ್ಮ ಗಮನ ಸೆಳೆಯಲಿವೆ. ವೈವಾಹಿಕ ಜೀವನದಲ್ಲಿ ನೀವು ಒತ್ತಡ ಎದುರಿಸಲಿದ್ದು, ಶಾಂತಿ ಕದಡಲಿದೆ. ಪ್ರೇಮಿಗಳು ಈ ವಾರದಲ್ಲಿ ತಮ್ಮ ಪ್ರೇಮ ಸಂಗಾತಿಯ ಕುರಿತು ಇನ್ನಷ್ಟು ಅರಿತುಕೊಳ್ಳಲಿದ್ದಾರೆ. ಪ್ರೇಮ ಸಂಗಾತಿಯು ತಮ್ಮ ಸುತ್ತಮುತ್ತ ಇರುವವರಿಗೆ ನೆರವು ನೀಡುವುದರಲ್ಲಿ ಎತ್ತಿದ ಕೈ ಎಂಬುದು ನಿಮಗೆ ತಿಳಿಯಲಿದೆ. ಆರೋಗ್ಯ ಚೆನ್ನಾಗಿರಲಿದೆ. ವಾರದ ಉತ್ತರಾರ್ಧದಲ್ಲಿ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ನೀವು ಏನಾದರೂ ಹೊಸತನ್ನು ಮಾಡಲು ಯತ್ನಿಸಲಿದ್ದು ಬದುಕಿನಲ್ಲಿ ಮುಂದುವರಿಯಲು ಯತ್ನಿಸಲಿದ್ದೀರಿ. ನಿಮ್ಮ ಕೆಲಸದಲ್ಲಿ ಅಡ್ಡಿ-ಆತಂಕಗಳು ನಿವಾರಣೆಯಾಗಲಿದ್ದು ಕಠಿಣ ಶ್ರಮವು ಮುನ್ನೆಲೆಗೆ ಬರಲಿದೆ. ಗಳಿಕೆಯಲ್ಲಿ ಹೆಚ್ಚಳ ಉಂಟಾಗಲಿದ್ದು, ಬ್ಯಾಂಕಿನಲ್ಲಿರುವ ಹಣದಲ್ಲಿ ಏರಿಕೆ ಕಾಣಿಸಿಕೊಳ್ಳಲಿದೆ. ಯಾವುದೇ ಕಾನೂನು ಸಂಬಂಧಿ ವ್ಯಾಜ್ಯಗಳಲ್ಲಿ ತೊಡಗಿಸಿಕೊಳ್ಳಬೇಡಿ.
ವೃಷಭ: ಈ ವಾರವು ನಿಮ್ಮ ಪಾಲಿಗೆ ಅತ್ಯುತ್ತಮ ಹಾಗೂ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಕುಟುಂಬ ಮತ್ತು ಕೆಲಸದ ನಡುವೆ ಸಮತೋಲನ ಕಾಪಾಡಲು ನೀವು ಯತ್ನಿಸಲಿದ್ದು, ಪ್ರತಿಯೊಂದು ವಿಚಾರವೂ ಚೆನ್ನಾಗಿಯೇ ಮುಂದುವರಿಯಲಿದೆ. ನಿಮ್ಮ ಕೆಲಸವು ನಿಮಗೆ ಸಾಕಷ್ಟು ಆಸಕ್ತಿಕರ ಎನಿಸಲಿದೆ ಹಾಗೂ ನಿಮ್ಮ ಕೆಲಸವು ನಿಮಗೆ ಸಂತೃಪ್ತಿ ನೀಡಲಿದೆ. ನಿಮ್ಮ ಕುಟುಂಬದ ಸದಸ್ಯರ ಬೆಂಬಲವು ನೀವು ಮುಂದೆ ಸಾಗಲು ಉತ್ತೇಜನ ನೀಡಲಿದೆ. ಪ್ರೇಮ ಪಕ್ಷಿಗಳಿಗೆ ಇದು ಉತ್ತಮ ಕಾಲವೆನಿಸಲಿದೆ. ನಿಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ನಿಮ್ಮ ಆರೋಗ್ಯಕ್ಕೆ ಗರಿಷ್ಠ ಗಮನ ನೀಡಿ. ಸಂಪೂರ್ಣ ಆಹಾರವನ್ನು ಮಾತ್ರವೇ ನೀವು ಸ್ವೀಕರಿಸಬೇಕು. ನೀವು ಹಠಾತ್ ಆಗಿ ಹಣ ಪಡೆಯಲಿದ್ದು ಇದು ನಿಮ್ಮಲ್ಲಿ ಸಂತಸ ತರಲಿದೆ. ವ್ಯವಹಾರದಲ್ಲಿ ಅಳವಡಿಸಿಕೊಳ್ಳುವ ಯಾವುದೇ ಕಾರ್ಯತಂತ್ರವು ಪರಿಣಾಮಕಾರಿ ಎನಿಸಲಿದೆ. ವಿದ್ಯಾರ್ಥಿಗಳು ಕಠಿಣ ಶ್ರಮದ ಮೂಲಕ ಉತ್ತಮ ಫಲಿತಾಂಶ ಪಡೆಯಲಿದ್ದಾರೆ.
ಮಿಥುನ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ವೈಯಕ್ತಿಕ ಬದುಕಿನಲ್ಲಿ ಹೆಚ್ಚಿನ ಸಂತಸ ಇರಲಿದ್ದು ನಿಮ್ಮ ಜನರೊಂದಿಗೆ ನೀವು ಸಂತಸದಿಂದ ಬದುಕು ಸಾಗಿಸಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ನೆರವು ನಿಮಗೆ ಸಾಕಷ್ಟು ಸಹಾಯ ಮಾಡಲಿದೆ. ನಿಮ್ಮ ವೈಯಕ್ತಿಕ ಬದುಕು ಸಾಕಷ್ಟು ಪ್ರಯಾಣದಿಂದ ಕೂಡಿರಲಿದೆ. ಪ್ರೇಮಿಗಳು ಎದುರಿಸುತ್ತಿದ್ದ ಸವಾಲು ದೂರವಾಗಲಿದೆ. ಅವರು ಪ್ರೇಮದ ಬದುಕನ್ನು ಮತ್ತೊಮ್ಮೆ ಆನಂದಿಸಲಿದ್ದಾರೆ. ನೀವು ಸಣ್ಣದಾದ ಪ್ರವಾಸಕ್ಕೆ ಯೋಜನೆ ರೂಪಿಸಿ ಒಂದು ರೊಮ್ಯಾಂಟಿಕ್ ತಾಣವನ್ನು ನಿಮ್ಮ ಪ್ರೇಮ ಸಂಗಾತಿಯನ್ನು ಕರೆದುಕೊಂಡು ಹೋಗಬಹುದು. ವ್ಯಾಪಾರೋದ್ಯಮಿಗಳಿಗೆ ಇದು ಉತ್ತಮ ಕಾಲ. ನಿಮ್ಮ ವ್ಯಾಪಾರ ಪಾಲುದಾರರ ಜೊತೆಗಿನ ಸಂಬಂಧವು ಇನ್ನಷ್ಟು ಗಟ್ಟಿಯಾಗಲಿದ್ದು, ನೀವಿಬ್ಬರೂ ಏನಾದರೂ ಹೊಸ ಕೆಲಸವನ್ನು ಮಾಡಲು ಮುಂದುವರಿಯಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಒಳ್ಳೆಯ ಫಲಿತಾಂಶ ಬರಲಿದೆ. ಆದರೆ ನಿಮ್ಮ ಎದುರಾಳಿಗಳು ಸಕ್ರಿಯರಾಗಲಿದ್ದು ನಿಮ್ಮ ದಾರಿಯಲ್ಲಿ ಹೊಸ ಸವಾಲುಗಳು ಉಂಟಾಗಲಿವೆ. ನಿಮ್ಮ ಖರ್ಚುವೆಚ್ಚಗಳಲ್ಲಿ ಹಠಾತ್ ಆಗಿ ಹೆಚ್ಚಳ ಉಂಟಾಗಲಿದ್ದು ಇದು ನಿಮ್ಮ ಆದಾಯದ ಮೇಲೆ ಪರಿಣಾಮ ಬೀರಲಿದೆ.
ಕರ್ಕಾಟಕ: ವಾರದ ಆರಂಭದಲ್ಲಿ, ನಿಮ್ಮ ಸಾಮಾಜಿಕ ಬದ್ಧತೆಗಳು ಮತ್ತು ಜವಾಬ್ದಾರಿಗಳನ್ನು ಪೂರ್ಣಗೊಳಿಸುವುದಕ್ಕಾಗಿ ನಿಮ್ಮನ್ನು ನೀವು ಉತ್ತೇಜಿಸಲಿದ್ದೀರಿ. ಈ ಸಂದರ್ಭದಲ್ಲಿ ನೀವು ಹೊಸ ಸಂಬಂಧವೊಂದನ್ನು ಪ್ರಾರಂಭಿಸಲಿದ್ದು ಅದನ್ನು ಗಟ್ಟಿಗೊಳಿಸಲಿದ್ದೀರಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವಾಗ ಉತ್ಪ್ರೇಕ್ಷೆ ತೋರಿಸಬೇಡಿ. ನಿಮ್ಮ ವಿಪರೀತ ಉತ್ಸಾಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ವಾರದ ಮಧ್ಯ ಭಾಗದಲ್ಲಿ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ನಿಮ್ಮ ಚರ್ಮದ ಕುರಿತು ವಿಶೇಷ ಕಾಳಜಿ ವಹಿಸಿ. ಚರ್ಮದ ದದ್ದು ಮತ್ತು ಚುಚ್ಚುವಿಕೆ ಮುಂತಾದ ಸೋಂಕುಗಳ ಕುರಿತು ನೀವು ಸಾಕಷ್ಟು ಎಚ್ಚರಿಕೆ ವಹಿಸಬೇಕು. ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ನೀವು ಯತ್ನಿಸಲಿದ್ದೀರಿ. ಉತ್ತಮ ಸಂವಹನವನ್ನು ಬಳಸಿ ನೀವು ಹೊಸ ಒಪ್ಪಂದಗಳನ್ನು ಪಡೆಯಬಹುದು. ವಾರದ ಕೊನೆಗೆ ನೀವು ಗ್ರಹಗಳ ಉತ್ತಮ ಬೆಂಬಲ ಪಡೆಯುವುದರಿಂದ ನಿಮ್ಮ ವೃತ್ತಿಗೆ ಸಂಬಂಧಿಸಿದ ಮತ್ತು ವೈಯಕ್ತಿಕ ಬದುಕಿನ ಸಮಸ್ಯೆಗಳು ಪರಿಹಾರಗೊಳ್ಳಲಿವೆ. ನಿಮಗೆ ಅನಿರೀಕ್ಷಿತ ಖರ್ಚುವೆಚ್ಚಗಳು ಉಂಟಾಗಬಹುದು.
ಸಿಂಹ: ಈ ವಾರ ನಿಮಗೆ ಒಟ್ಟಾರೆ ಉತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಬದುಕಿನ ಸತ್ಯವನ್ನು ಅನ್ವೇಷಿಸಲು ನೀವು ಇಚ್ಛೆ ತೋರಲಿದ್ದೀರಿ. ನೀವು ಸಾಕಷ್ಟು ಕೆಲಸಗಳನ್ನು ಮಾಡಿದ್ದು ಕೆಲವು ಕೆಲಸಗಳು ನಿಮಗೆ ಅನೇಕ ವಿಚಾರಗಳನ್ನು ಕಲಿಸಿಕೊಟ್ಟಿವೆ ಎಂಬುದು ಈ ವರ್ಷದಲ್ಲಿ ನಿಮ್ಮ ಅರಿವಿಗೆ ಬರಲಿದೆ. ಹೊಸ ಕಲಿಕೆಗಳನ್ನು ಅಳವಡಿಸುವ ಮೂಲಕ ಈ ವಾರವನ್ನು ಇನ್ನಷ್ಟು ಉತ್ತಮಗೊಳಿಸಲು ನೀವು ಯತ್ನಿಸಲಿದ್ದೀರಿ. ಕುಟುಂಬದಲ್ಲಿ ಸಾಮರಸ್ಯ ಇರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಪ್ರೇಮಿಗಳಿಗೆ ಇದು ಸಕಾಲ. ವಿವಾಹಿತ ಜೋಡಿಗಳ ವಿಷಯದಲ್ಲಿ ಹೇಳುವುದಾದರೆ, ಅವರ ಜೀವನವು ಪ್ರೀತಿ ಮತ್ತು ಸುಖೋಷ್ಣತೆಯಿಂದ ಕೂಡಿರಲಿದೆ. ನಿಮ್ಮ ಸಂಬಂಧದಲ್ಲಿ ಇನ್ನಷ್ಟು ಪರಸ್ಪರ ಅರ್ಥೈಸುವಿಕೆ ಕಾಣಿಸಿಕೊಳ್ಳಲಿದೆ. ನೀವು ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆಯಲಿದ್ದೀರಿ. ಉದ್ಯೋಗದಲ್ಲಿರುವ ಕಠಿಣ ಶ್ರಮ ತೋರುವ ಅಗತ್ಯವಿದೆ. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅನುಕೂಲಕರ.
ಕನ್ಯಾ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಖರ್ಚುವೆಚ್ಚಗಳಲ್ಲಿ ವಿಪರೀತ ಹೆಚ್ಚಳ ಉಂಟಾಗಲಿದೆ ಹಾಗೂ ಈ ಕುರಿತು ನಿಮಗೆ ಚಿಂತೆ ಕಾಡಲಿದೆ. ನಿಮ್ಮ ಗಳಿಕೆಯು ಸಾಮಾನ್ಯ ಮಟ್ಟದಲ್ಲಿರಲಿದೆ. ಹೀಗಾಗಿ ಇದನ್ನು ವೃದ್ಧಿಸಲು ನೀವು ಪ್ರಯತ್ನಿಸಲಿದ್ದೀರಿ. ನಿಮ್ಮ ವ್ಯವಹಾರಕ್ಕೆ ವೇಗ ದೊರೆಯಲಿದೆ. ಹೊಸ ವ್ಯವಹಾರ ಸಂಬಂಧಗಳು ಏರ್ಪಡಬಹುದು. ಉದ್ಯೋಗದಲ್ಲಿರುವವರು ತಮ್ಮ ಸಹೋದ್ಯೋಗಿಗಳ ಕುರಿತು ಕಾಳಜಿ ವಹಿಸಬೇಕು. ನಿಮ್ಮ ಎದುರಾಳಿಗಳ ಕುರಿತು ಎಚ್ಚರಿಕೆಯಿಂದ ಹೆಜ್ಜೆ ಇಡಿ ಹಾಗೂ ನ್ಯಾಯಾಲಯದ ಪ್ರಕರಣಗಳಿಂದ ದೂರವಿರಿ. ಕಾನೂನಿನ ವಿಚಾರದಲ್ಲಿ ಇದು ಸಕಾಲವಲ್ಲ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವಿವಾಹಿತ ವ್ಯಕ್ತಿಗಳು ಬದುಕನ್ನು ಆನಂದಿಸಲಿದ್ದಾರೆ. ಪ್ರೇಮ ಪಕ್ಷಿಗಳು ತಮ್ಮ ಬದುಕನ್ನು ಆನಂದಿಸಲಿದ್ದಾರೆ. ವಿದ್ಯಾರ್ಥಿಗಳು ಕಲಿಕೆಯನ್ನು ಆನಂದಿಸಲಿದ್ದಾರೆ ಹಾಗೂ ಅವರು ಇನ್ನಷ್ಟು ಏಕಾಗ್ರತೆಯಿಂದ ಕಲಿಯಲಿದ್ದಾರೆ.
ತುಲಾ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನೀವು ನಿಮ್ಮ ಮೇಲೆಯೇ ನಂಬಿಕೆ ಇಟ್ಟುಕೊಳ್ಳಲಿದ್ದೀರಿ. ಈ ಮನೋಭಾವವು ನಿಮಗೆ ಸಾಕಷ್ಟು ಯಶಸ್ಸನ್ನು ತಂದು ಕೊಡಲಿದೆ. ವ್ಯವಹಾರದಲ್ಲಿ ನೀವು ಇನ್ನಷ್ಟು ಆಕ್ರಮಣಶೀಲತೆಯಿಂದ ಮುಂದುವರಿಯಲಿದ್ದೀರಿ. ನಿಮ್ಮಲ್ಲಿ ಹೊಳೆಯುವ ಹೊಸ ವಿಚಾರಗಳು ಮಾರುಕಟ್ಟೆಯಲ್ಲಿ ಚೆನ್ನಾಗಿ ಕಾರ್ಯ ನಿರ್ವಹಿಸಲಿವೆ ಹಾಗೂ ನಿಮ್ಮ ವ್ಯವಹಾರವು ಯಶಸ್ವಿಯಾಗುವಂತೆ ಮಾಡಲಿವೆ. ಉದ್ಯೋಗದಲ್ಲಿರುವವರನ್ನು ಕಚೇರಿಗೆ ಸಂಬಂಧಿಸಿದ ಪ್ರವಾಸದಲ್ಲಿ ಕಳುಹಿಸಬಹುದು. ಇದು ಅತ್ಯಂತ ಪ್ರಮುಖ ಪ್ರಯಾಣವೆನಿಸಲಿದೆ. ನಿಮ್ಮ ಕೆಲಸದ ಮೇಲೆ ಸಂಪೂರ್ಣ ಗಮನ ನೀಡಿ. ವಿವಾಹಿತ ಜೋಡಿಗಳಿಗೆ ಹೆಚ್ಚೇನೂ ಸವಾಲುಗಳು ಉಂಟಾಗುವುದಿಲ್ಲ ಹಾಗೂ ನಿಮ್ಮ ಜೀವನ ಸಂಗಾತಿಯು ನಿಮ್ಮ ಪ್ರೀತಿಯನ್ನು ಅರಿತುಕೊಳ್ಳಲಿದ್ದು, ಇದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲಿದೆ. ಪ್ರೇಮಿಗಳು ತಮ್ಮ ಸಂಬಂಧದಲ್ಲಿ ಉತ್ತಮ ಸಮಯವನ್ನು ಆನಂದಿಸಲಿದ್ದಾರೆ ಹಾಗೂ ನಿಮ್ಮ ಪ್ರೇಮಿಯ ಜೊತೆ ಆನಂದಕರ ಕ್ಷಣಗಳನ್ನು ಕಳೆಯುವುದನ್ನು ನೀವು ಆನಂದಿಸಲಿದ್ದೀರಿ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ.
ವೃಶ್ಚಿಕ: ನಿಮ್ಮ ಪಾಲಿಗೆ ಇದು ಉತ್ತಮ ವಾರ ಎನಿಸಲಿದೆ. ಉದ್ಯೋಗದಲ್ಲಿರುವವರು ಉತ್ತಮ ಸಮಯವನ್ನು ಆನಂದಿಸಲಿದ್ದಾರೆ. ನಿಮಗೆ ಕಠಿಣ ಶ್ರಮವೇ ನಿಮ್ಮ ಪರವಾಗಿ ಜೋರಾಗಿ ಮಾತನಾಡಲಿದೆ. ನೀವು ಇದರ ಫಲವನ್ನು ಪಡೆಯಲಿದ್ದೀರಿ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ಆರೋಗ್ಯವನ್ನು ಕಾಪಾಡಲು ಸಂತುಲಿತ ಆಹಾರವನ್ನು ಸೇವಿಸಿ ಮತ್ತು ವ್ಯಾಯಾಮ, ಯೋಗ ಮತ್ತು ಪ್ರಾಣಾಯಾಮವನ್ನು ಮಾಡಿ. ವ್ಯಾಪಾರೋದ್ಯಮಿಗಳು ಉತ್ತಮ ಫಲಿತಾಂಶ ಗಳಿಸಲಿದ್ದಾರೆ. ನಿಮ್ಮ ವ್ಯವಹಾರ ಸಂಗಾತಿಯ ಜೊತೆಗೆ ನೀವು ಹೊಸ ವ್ಯವಹಾರವನ್ನು ಕುದುರಿಸಲಿದ್ದೀರಿ. ನೀವು ಕೌಟುಂಬಿಕ ಬದುಕನ್ನು ಚೆನ್ನಾಗಿ ಆನಂದಿಸಲಿದ್ದೀರಿ. ನಿಮ್ಮ ವೃತ್ತಿಯಲ್ಲಿ ಮುಂದುವರಿಯಲು ನಿಮ್ಮ ಕುಟುಂಬದ ಸದಸ್ಯರ ಬೆಂಬಲವು ನಿಮಗೆ ಸಹಾಯ ಮಾಡಲಿದೆ. ಪ್ರೇಮಿಗಳಿಗೆ ಇದು ಸಾಧಾರಣ ಕಾಲ. ಈ ವಾರದಲ್ಲಿ ಸ್ವಾದಿಷ್ಟ ಆಹಾರವನ್ನು ಸೇವಿಸುವುದನ್ನು ನೀವು ಆನಂದಿಸಲಿದ್ದೀರಿ. ವಾರದ ಮಧ್ಯದಲ್ಲಿ ಪ್ರಯಾಣಿಸಿದರೆ ನಿಮಗೆ ಒಳ್ಳೆಯದು. ಆದರೆ ವಾರದ ಕೊನೆಯ ಎರಡು ದಿನಗಳಲ್ಲಿ ಪ್ರಯಾಣಿಸಿದರೆ ಹಾನಿಕಾರಕ.
ಧನು: ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ಖರ್ಚುವೆಚ್ಚಗಳು ಇರಲಿವೆ. ಆದರೆ ಆದಾಯದಲ್ಲಿ ಉಂಟಾಗುವ ಹೆಚ್ಚಳವು ನಿಮಗೆ ಸಂತಸ ನೀಡಲಿದೆ. ಅದೃಷ್ಟವು ನಿಮ್ಮ ಪಾಲಿಗೆ ಇದೆ. ಹೀಗಾಗಿ ಬಾಕಿ ಉಳಿದಿರುವ ನಿಮ್ಮ ಕೆಲಸಕ್ಕೆ ಚಾಲನೆ ದೊರೆಯಲಿದೆ. ಉದ್ಯೋಗದಲ್ಲಿರುವವರು ಕೆಲಸಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಯಾಣಿಸಬೇಕಾದೀತು. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೆ ನೀವು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಆರೋಗ್ಯವನ್ನು ಕಾಪಾಡುವ ದಿಸೆಯಿಂದ ಆಹಾರವನ್ನು ನೀವು ಸರಿಯಾದ ಸಮಯಕ್ಕೆ ಸೇವಿಸಬೇಕು. ವೈವಾಹಿಕ ಜೀವನವು ಸಂತೋಷದಿಂದ ಕೂಡಿರಲಿದೆ. ನಿಮ್ಮ ಜೀವನ ಸಂಗಾತಿಯು ನಿಮ್ಮನ್ನು ಬೆಂಬಲಿಸಲಿದ್ದಾರೆ. ಪ್ರೇಮಿಗಳಿಗೆ ಇದು ಸಕಾಲ. ನಿಮ್ಮ ಸಂತಸಕ್ಕಾಗಿ ನಿಮ್ಮ ಪ್ರೇಮಿಯು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.
ಮಕರ: ಈ ವಾರವು ನಿಮ್ಮ ಪಾಲಿಗೆ ಒಳ್ಳೆಯದು. ಆದರೆ ವಾರದ ಆರಂಭದಲ್ಲಿ ನೀವು ಒಂದಷ್ಟು ಹಣವನ್ನು ಕಳೆದುಕೊಳ್ಳಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ನಿಮ್ಮ ಹಣವನ್ನು ಎಲ್ಲೂ ಹೂಡಿಕೆ ಮಾಡಬೇಡಿ. ಏಕೆಂದರೆ ಇದು ಅನುಕೂಲಕರ ಸಮಯವಲ್ಲ. ವಿವಾಹಿತ ವ್ಯಕ್ತಿಗಳು ಬದುಕನ್ನು ಸಂತಸದಿಂದ ಕಳೆಯಲಿದ್ದಾರೆ. ಅಲ್ಲದೆ ನಿಮ್ಮ ಅತ್ತೆ ಮಾವಂದಿರ ಜೊತೆಗೆ ನಿಮ್ಮ ಸಂಬಂಧದಲ್ಲಿ ಸುಧಾರಣೆಯಾಗಲಿದೆ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗಬಹುದು. ಪ್ರೇಮಿಗಳು ತಮ್ಮ ಸಂಗಾತಿಯ ಇಚ್ಛೆಯನ್ನು ಗೌರವಿಸಬೇಕು. ನೀವು ಸಂತಸದಿಂದ ಕಾಲ ಕಳೆಯಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ತಮ್ಮ ಕೆಲಸಕಾರ್ಯಗಳ ಕುರಿತು ಕಾಳಜಿ ವಹಿಸಬೇಕು. ಆಗ ಮಾತ್ರವೇ ನೀವು ಯಶಸ್ಸನ್ನು ಪಡೆಯಬಹುದು. ವ್ಯಾಪಾರೋದ್ಯಮಿಗಳ ಆದಾಯದಲ್ಲಿ ವೃದ್ಧಿ ಉಂಟಾಗಲಿದೆ. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ.
ಕುಂಭ: ಈ ವಾರ ನಿಮಗೆ ಒಟ್ಟಾರೆ ಉತ್ತಮ ಫಲ ದೊರೆಯಲಿದೆ. ಅಲ್ಲದೆ ನಿಮ್ಮ ವ್ಯವಹಾರವನ್ನು ನೀವು ಗಂಭೀರವಾಗಿ ಪರಿಗಣಿಸುವಿರಿ. ಉದ್ಯೋಗದಲ್ಲಿರುವವರೂ ಪ್ರಗತಿಯನ್ನು ಕಾಣಲಿದ್ದಾರೆ. ನಿಮ್ಮ ಬುದ್ಧಿಮತ್ತೆ ಮತ್ತು ಜ್ಞಾನವನ್ನು ಆಧರಿಸಿ ನಿಮ್ಮ ಕೆಲಸದ ಮೇಲೆ ನೀವು ಹಿಡಿತ ಸಾಧಿಸಲಿದ್ದೀರಿ. ಆದರೆ ಯಾರ ಜೊತೆಗೂ ಅನಗತ್ಯವಾಗಿ ವಾದ ಮಾಡಬೇಡಿ. ನಿಮ್ಮ ಮಾನಸಿಕ ಆರೋಗ್ಯವು ಚೆನ್ನಾಗಿರಲಿದೆ. ದೈಹಿಕ ಸಮಸ್ಯೆಗಳೇನೂ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ನೀವು ಚೆನ್ನಾಗಿ ಕಾಲ ಕಳೆಯಲಿದ್ದೀರಿ. ನಿಮ್ಮ ಬದುಕಿನಲ್ಲಿ ಹೊಸತನವನ್ನು ಆನಂದಿಸಲಿದ್ದೀರಿ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಆದರೆ ನಿಮ್ಮ ಎದುರಾಳಿಗಳ ಕುರಿತು ಒಂದಷ್ಟು ಎಚ್ಚರಿಕೆ ವಹಿಸಿ. ಪ್ರೇಮದ ಬದುಕು ಸಂತಸದಿಂದ ಕೂಡಿರಲಿದೆ. ವಿವಾಹಿತ ಜೋಡಿಗಳು ಸಹ ಶಾಂತಿಯಿಂದ ಸಮಯ ಕಳೆಯಲಿದ್ದಾರೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.
ಮೀನ: ಈ ವಾರದಲ್ಲಿ ನೀವು ಒಳ್ಳೆಯ ಫಲವನ್ನು ಪಡೆಯಲಿದ್ದೀರಿ. ನೀವು ನಿಮ್ಮ ಮಕ್ಕಳನ್ನು ಸಾಕಷ್ಟು ಪ್ರೀತಿಸಲಿದ್ದೀರಿ. ನಿಮ್ಮ ಭವಿಷ್ಯದ ಕಡೆಗೆ ನೀವು ಹೆಚ್ಚಿನ ಗಮನ ನೀಡಲಿದ್ದೀರಿ. ಹೀಗಾಗಿ ನೀವು ನಿಮ್ಮ ವೈವಾಹಿಕ ಬದುಕಿನಲ್ಲಿ ಒತ್ತಡ ಎದುರಿಸಲಿದ್ದೀರಿ. ಆದ್ದರಿಂದ ಮನೆಯಲ್ಲಿ ಯಾರೊಂದಿಗೂ ವಾದ ಮಾಡಬೇಡಿ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ನಿಮ್ಮ ಪ್ರೇಮದ ಬದುಕಿನಲ್ಲಿ ಸಂತಸ ತರಲು ಎಲ್ಲಾ ಪ್ರಯತ್ನ ಮಾಡಲಿದ್ದೀರಿ. ನಿಮ್ಮ ಪ್ರೇಮಿಯ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅವರು ಖಂಡಿತವಾಗಿಯೂ ನಿಮಗೆ ಹೇಳಿದ್ದಾರೆ. ಉದ್ಯೋಗದಲ್ಲಿರುವವರಿಗೆ ತಮ್ಮ ಕೆಲಸಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಕಾಯಕವೇ ಕೈಲಾಸ ಎನ್ನುವಂತೆ ನೀವು ನಡೆದುಕೊಳ್ಳಲಿದ್ದು ಇದರಿಂದಾಗಿ ನಿಮಗೆ ವಿಶೇಷ ಅಸ್ಮಿತೆ ಉಂಟಾಗಲಿದೆ. ವ್ಯಾಪಾರೋದ್ಯಮಿಗಳು ಉತ್ತಮ ಹಣ ಗಳಿಸಲಿದ್ದಾರೆ. ನಿಮ್ಮ ವ್ಯವಹಾರದ ಪ್ರಯಾಣಗಳಿಂದಾಗಿ ನೀವು ಸಾಕಷ್ಟು ಲಾಭ ಗಳಿಸಲಿದ್ದೀರಿ. ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ನೀವು ಸಾಕಷ್ಟು ಪ್ರಯತ್ನಿಸಲಿದ್ದೀರಿ. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ.