ETV Bharat / bharat

ವಾರದ ಭವಿಷ್ಯ: ಸಂಗಾತಿಗೆ ಉಡುಗೊರೆ ಕೊಡುವುದರಿಂದ ಈ ರಾಶಿಯವರ ಖರ್ಚುವೆಚ್ಚ ಹೆಚ್ಚಳ - ಉತ್ತಮ ವಾರ

ಈ ವಾರದ ನಿಮ್ಮ ರಾಶಿ ಭವಿಷ್ಯ ಹೀಗಿದೆ ನೋಡಿ.

ರಾಶಿ ಭವಿಷ್ಯ
Weekly Horoscope
author img

By

Published : Oct 9, 2022, 6:48 AM IST

ಮೇಷ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ನಿಮ್ಮ ಪ್ರೇಮ ಬದುಕನ್ನು ನೀವು ಆನಂದಿಸಲಿದ್ದೀರಿ. ವಾರದ ಆರಂಭದಲ್ಲಿ, ಖರ್ಚು ವೆಚ್ಚಗಳಲ್ಲಿ ಕ್ಷಿಪ್ರ ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಲಿದ್ದೀರಿ. ಈ ಅನಗತ್ಯ ಖರ್ಚು ಹೇಗೆ ಉಂಟಾಗುತ್ತಿದೆ ಎಂಬುದು ನಿಮ್ಮ ಅರಿವಿಗೆ ಬರದೆ ಇರಬಹುದು. ನೀವು ಧೈರ್ಯ ತೋರಿದರೆ ಪರಿಸ್ಥಿತಿಯು ನಿಮ್ಮ ಪರವಾಗಿ ವಾಲುತ್ತದೆ. ನಿಮ್ಮ ಪ್ರೇಮ ಸಂಗಾತಿಗೆ ಉಡುಗೊರೆ ಕೊಡುವುದರಿಂದಲೂ ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ವಾರದ ಕೊನೆಯ ದಿನಗಳಲ್ಲಿ, ಆದಾಯದಲ್ಲಿ ಹೆಚ್ಚಳ ಉಂಟಾಗುವ ಕಾರಣ ನಿಮ್ಮ ಮನಸ್ಸಿನಲ್ಲಿ ಸಂತಸ ನೆಲೆಸಲಿದೆ. ವ್ಯಾಪಾರಿಗಳು ಈ ವಾರದಲ್ಲಿ ತಮ್ಮ ಗುಟ್ಟನ್ನು ಯಾರೊಂದಿಗೂ ಹಂಚಿ ಕೊಳ್ಳಬಾರದು. ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ. ಜನರು ಇದರ ದುರುಪಯೋಗಪಡಿಸಿ ಕೊಳ್ಳಬಹುದು. ಉದ್ಯೋಗದಲ್ಲಿರುವ ಜನರು ವಿಷಯಕ್ಕೆ ಹೆಚ್ಚಿನ ಗಮನ ನೀಡಬೇಕು. ವಿದ್ಯಾರ್ಥಿಗಳ ಸಮಯ ಚೆನ್ನಾಗಿರಲಿದೆ. ಯಾವುದೇ ಹೆಚ್ಚಿನ ಸಮಸ್ಯೆ ಉಂಟಾಗದು. ಆದರೆ ನೀವು ವೇಳಾಪಟ್ಟಿಯನ್ನು ರೂಪಿಸಿ ಅದರಂತೆ ಮುಂದುವರಿದರೆ ಪ್ರಯೋಜನವಾದೀತು. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೂ ನಿಮ್ಮ ಆಹಾರಕ್ರಮಕ್ಕೆ ಗಮನ ನೀಡಿ. ಏಕೆಂದರೆ ಅಸಂತುಲಿತ ಆಹಾರಕ್ರಮದಿಂದಾಗಿ ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ವೃಷಭ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ಈ ವಾರದಲ್ಲಿ ನೀವು ನಿಮ್ಮ ಪ್ರೇಮ ಸಂಗಾತಿಗೆ ಮೊಬೈಲ್‌ ಅಥವಾ ಒಳ್ಳೆಯ ಬಟ್ಟೆಯನ್ನು ಉಡುಗೊರೆಯಾಗಿ ನೀಡಲಿದ್ದು, ಇದರಿಂದ ಅವರು ಸಂತಸಗೊಳ್ಳಲಿದ್ದಾರೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಯು ಎಲ್ಲಾ ರೀತಿಯಲ್ಲಿ ನಿಮ್ಮನ್ನು ಬೆಂಬಲಿಸಲಿದ್ದಾರೆ. ನೀವು ನಿಮ್ಮ ಕುಟುಂಬದ ಸದಸ್ಯರ ಸಹಕಾರ ಪಡೆಯಲಿದ್ದೀರಿ. ನಿಮ್ಮ ಮಗುವಿನ ಕುರಿತು ನಿಮಗೆ ತುಂಬಾ ತೃಪ್ತಿ ದೊರೆಯಲಿದೆ. ನಿಮ್ಮ ಎದುರಾಳಿಗಳ ಮೇಲೆ ನೀವು ಪ್ರಾಬಲ್ಯ ಮೆರೆಯಲಿದ್ದೀರಿ. ವಾರದ ಆರಂಭದಿಂದಲೇ ನಿಮ್ಮ ಆದಾಯ ಚೆನ್ನಾಗಿರಲಿದೆ. ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು ಅಥವಾ ಕಚೇರಿಯಿಂದ ನಿಮಗೆ ವಾಹನ ದೊರೆಯಬಹುದು. ಇದು ನಿಮ್ಮ ಸಂತಸವನ್ನು ದುಪ್ಪಟ್ಟುಗೊಳಿಸಲಿದೆ. ವಾರದ ನಡುವೆ ಒಂದಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ವಾರದ ಕೊನೆಯ ದಿನಗಳಲ್ಲಿ ನಿಮಗಾಗಿಯೇ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ನಿಮ್ಮ ವ್ಯಕ್ತಿತ್ವವನ್ನು ವೃದ್ಧಿಸಲು ನೀವು ಯತ್ನಿಸಲಿದ್ದೀರಿ. ಇದಕ್ಕಾಗಿ ನೀವು ಜಿಮ್‌ ಗೂ ಸೇರಬಹುದು. ವಿದ್ಯಾರ್ಥಿಗಳು ತಮ್ಮ ಏಕಾಗ್ರತೆಗೆ ಭಂಗ ತರುವ ಎಲ್ಲಾ ಚಟುವಟಿಕೆಗಳಿಂದ ದೂರವಿರಬೇಕು. ಏಕಾಗ್ರತೆಯ ವಿಚಾರದಲ್ಲಿ ಧ್ಯಾನವು ಪ್ರಯೋಜನಕಾರಿ ಎನಿಸಲಿದೆ. ಈ ವಾರದಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳದು. ಆದರೂ ನಿಮ್ಮ ಆಹಾರಕ್ರಮದ ಕುರಿತು ನೀವು ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಾರದ ಆರಂಭಿಕ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮಿಥುನ: ನಿಮ್ಮ ಪಾಲಿಗೆ ಇದು ಅತ್ಯುತ್ತಮ ವಾರ ಎನಿಸಲಿದೆ. ಕುಟುಂಬದಲ್ಲಿ ಏನಾದರೂ ಮಂಗಳದಾಯಕ ಕೆಲಸ ನಡೆಯಬಹುದು. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿರಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ಉತ್ತಮ ಫಲಿತಾಂಶ ಪಡೆಯಬಹುದು. ಈಗ ನಿಮ್ಮ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯವಾಗಲಿದೆ. ನಿಮ್ಮ ಕಾರ್ಯಸ್ಥಳದಲ್ಲಿರುವ ಜನರು ನಿಮಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಿದ್ದಾರೆ. ಇದು ನಿಮ್ಮ ವರ್ಚಸ್ಸನ್ನು ಗಟ್ಟಿಗೊಳಿಸಲಿದೆ. ನಿಮಗೆ ಸಂಬಳದಲ್ಲಿ ಒಂದಷ್ಟು ಏರಿಕೆ ಉಂಟಾಗಬಹುದು. ಸರ್ಕಾರದಿಂದ ಪ್ರಯೋಜನ ಉಂಟಾಗಲಿದೆ. ಈ ವಾರವು ವ್ಯಾಪಾರಿಗಳಿಗೆ ಒಳ್ಳೆಯದು. ಕೆಲಸದಲ್ಲಿ ಶೀಘ್ರ ಪ್ರಗತಿ ಉಂಟಾಗಲಿದೆ. ಯಾವುದಾದರೂ ಹೊಸ ಮಾರುಕಟ್ಟೆ ತಂತ್ರಗಳನ್ನು ನೀವು ಅಳವಡಿಸಿಕೊಳ್ಳಬಹುದು. ಇದು ನಿಮ್ಮ ಪ್ರಯೋಜನಕ್ಕೆ ಬರಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಅವರ ಏಕಾಗ್ರತೆಗೆ ಭಂಗ ಉಂಟಾಗಬಹುದು. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಯಾವುದೇ ದೊಡ್ಡ ಸಮಸ್ಯೆ ಎದುರಾಗದು. ಈ ವಾರವು ಪ್ರಯಾಣಿಸಲು ಉತ್ತಮ.

ಕರ್ಕಾಟಕ: ನಿಮ್ಮ ಪಾಲಿಗೆ ಇದು ಉತ್ತಮ ವಾರವೆನಿಸಲಿದ್ದು, ಈ ವಾರವನ್ನು ನೀವು ಚೆನ್ನಾಗಿ ಕಳೆಯಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಕಾಣಿಸಿಕೊಳ್ಳುವ ಸಣ್ಣಪುಟ್ಟ ಸವಾಲುಗಳ ಹೊರತಾಗಿಯೂ ಪ್ರೀತಿ ನೆಲೆಸಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ತಮ್ಮ ಮನಸ್ಸಿನಲ್ಲಿ ಇರುವ ಭಾವನೆಯನ್ನು ವ್ಯಕ್ತಪಡಿಸಲು ಯಾವುದೇ ಸಮಸ್ಯೆ ಎದುರಾಗದು. ಪರಸ್ಪರ ಅರ್ಥೈಸುವಿಕೆಯು ನಿಮ್ಮ ಸಂಬಂಧಕ್ಕೆ ಮೆರುಗು ನೀಡಲಿದೆ. ಸಮಾಜದಲ್ಲಿ ನಿಮಗೆ ಯಾವುದಾದರೂ ಪ್ರತಿಷ್ಠಿತ ಪ್ರಶಸ್ತಿ ದೊರೆಯಲಿದೆ. ಹೀಗಾಗಿ ನಿಮ್ಮ ಗೌರವವು ಹೆಚ್ಚಲಿದೆ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸಲಿದ್ದೀರಿ. ಮನೆಯಲ್ಲಿ ಏನಾದರೂ ಪೂಜೆ ಪುನಸ್ಕಾರಗಳನ್ನು ನೀವು ನಡೆಸಬಹುದು ಅಥವಾ ತೀರ್ಥಯಾತ್ರೆಗೆ ಹೋಗಬಹುದು. ನೀವು ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದಲ್ಲಿ ಆಸಕ್ತಿ ಬೆಳೆಸಿಕೊಳ್ಳಲಿದ್ದಾರೆ. ಇದು ಉತ್ತಮ ಫಲಿತಾಂಶವನ್ನು ತರಲಿದೆ. ವ್ಯಾಪಾರಿಗಳು ವಾರದ ನಡುವೆ ಸಾಕಷ್ಟು ಲಾಭ ಗಳಿಸಲಿದ್ದಾರೆ. ವಾರದ ಕೊನೆಯ ದಿನಗಳಲ್ಲಿ ಒಂದಷ್ಟು ಖರ್ಚುವೆಚ್ಚಗಳು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ವಿರೋಧಿಗಳ ಮೇಲೆ ನೀವು ಯಶಸ್ಸು ಸಾಧಿಸಲಿದ್ದೀರಿ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲ ದೊರೆಯಲಿದೆ. ನಿಮ್ಮ ಗೆಳೆಯರನ್ನು ಭೇಟಿಯಾಗುವ ಅವಕಾಶ ನಿಮಗೆ ದೊರೆಯಬಹುದು. ವಿದ್ಯಾರ್ಥಿಗಳ ಪಾಲಿಗೆ, ಅಧ್ಯಯನದಲ್ಲಿ ಯಶಸ್ಸು ಗಳಿಸಲು ಇದು ಸಕಾಲ. ಅವರು ಈಗ ಕಠಿಣ ಶ್ರಮ ಪಡುವ ಅಗತ್ಯವಿದೆ. ಈಗ ಮಾಡಿದ ಕಠಿಣ ಶ್ರಮವು ಅವರ ಬದುಕಿಗೆ ಸಹಕಾರಿ ಎನಿಸಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೂ ವಾಹನ ಚಲಾಯಿಸುವಾಗ ಜಾಗರೂಕತೆ ವಹಿಸಿ. ಇಲ್ಲದಿದ್ದರೆ ನಿಮಗೆ ಗಾಯ ಉಂಟಾಗುವ ಸಾಧ್ಯತೆ ಇದೆ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಸಿಂಹ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ಉತ್ತಮ ಫಲಿತಾಂಶ ಪಡೆಯಬಹುದು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ವಾರದ ಆರಂಭದಲ್ಲಿ ಯಾವುದೇ ದೊಡ್ಡ ಕೆಲಸಕ್ಕೆ ಕೈ ಹಾಕಬೇಡಿ. ಇಲ್ಲದಿದ್ದರೆ ಸಮಸ್ಯೆ ಉಂಟಾಗಬಹುದು. ವಾರದ ನಡುವಿನ ದಿನಗಳು ನಿಮ್ಮ ಪಾಲಿಗೆ ಉತ್ತಮವೆನಿಸಲಿವೆ. ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ಪ್ರಯಾಣದಿಂದ ಒಳ್ಳೆಯ ಪ್ರಯೋಜನ ದೊರೆಯಬಹುದು. ವಾರದ ಕೊನೆಯ ದಿನಗಳಲ್ಲಿ ನಿಮ್ಮ ಕೆಲಸವನ್ನು ನೀವು ಸಾಕಷ್ಟು ಉತ್ಸಾಹದಿಂದ ಮಾಡಲಿದ್ದು, ಇದು ನಿಮ್ಮ ಪಾಲಿಗೆ ಉತ್ತಮ ಫಲಿತಾಂಶ ತಂದು ಕೊಡಲಿದೆ. ಆಸ್ತಿಗೆ ಸಂಬಂಧಿಸಿದಂತೆ ಲಾಭ ಉಂಟಾಗಬಹುದು. ಚರ ಅಥವಾ ಸ್ಥಿರ ಆಸ್ತಿ ಖರೀದಿಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಜನರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ. ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಪ್ರಗತಿಯತ್ತ ಕೊಂಡೊಯ್ಯಲಿದ್ದಾರೆ. ಇದಕ್ಕಾಗಿ ನೀವು ಕೆಲವೊಂದು ಹೊಸ ಜನರನ್ನು ಭೇಟಿಯಾಗಿ ಮುಂದಕ್ಕೆ ಸಾಗುವ ಅಗತ್ಯವಿದೆ. ನೀವು ಮಾರ್ಕೆಟಿಂಗ್‌ ಲಾಭವನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ಅವರ ಅಧ್ಯಯನಗಳಲ್ಲಿ ಒಂದಷ್ಟು ನೆರವು ಬೇಕಾದೀತು. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಕನ್ಯಾ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಸಂಬಂಧದಲ್ಲಿ ಸುಖೋಷ್ಣತೆಯನ್ನು ಅನುಭವಿಸಲಿದ್ದು, ತಮ್ಮ ವೈವಾಹಿಕ ಜೀವನವನ್ನು ಆನಂದಿಸಲಿದ್ದಾರೆ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ದೀರ್ಘ ಪ್ರವಾಸಕ್ಕೆ ಹೋಗಬಹುದು. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಗಾತಿಯಿಂದ ಹೆಚ್ಚಿನ ನಿರೀಕ್ಷೆಯನ್ನು ಬಯಸಲಿದ್ದಾರೆ. ನಿಮ್ಮ ಸಂಗಾತಿಯು ಅವರ ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸಬೇಕು ಎಂದು ನೀವು ನಿರೀಕ್ಷಿಸಬಹುದು. ಏಕೆಂದರೆ ಇದನ್ನು ಅವರ ಬಾಯಿಯಿಂದಲೇ ಕೇಳಲು ನೀವು ಇಷ್ಟಪಡಲಿದ್ದೀರಿ. ವ್ಯವಹಾರದಲ್ಲಿ ಲಾಭದ ಹೆಚ್ಚಳವು ನಿಮ್ಮ ಚೈತನ್ಯಕ್ಕೆ ರೆಕ್ಕೆ ನೀಡಬಹುದು. ಇನ್ನೂ ಹೆಚ್ಚಿನದ್ದನ್ನು ಸಾಧಿಸಿ ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಯತ್ನಿಸಲಿದ್ದೀರಿ. ಸರ್ಕಾರದಿಂದಲೂ ನೀವು ನೆರವನ್ನು ಪಡೆಯಲಿದ್ದೀರಿ ಹಾಗೂ ಮಾರುಕಟ್ಟೆಯಲ್ಲಿ ಅನುಭವಿ ಜನರು ಬೆಂಬಲವನ್ನು ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಉತ್ತಮ ಫಲ ಪಡೆಯಲಿದ್ದಾರೆ. ಇದರಿಂದಾಗಿ ನಿಮ್ಮ ಸಂತಸ ಹೆಚ್ಚಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಬುದ್ಧಿಮತ್ತೆಯು ನಿಮ್ಮ ಜ್ಞಾನವನ್ನು ವೃದ್ಧಿಸಲು ಸಹಕರಿಸಲಿದೆ. ಏನಾದರೂ ಹೊಸತನ್ನು ಕಲಿಯಲು ನೀವು ಇಚ್ಛಿಸಲಿದ್ದೀರಿ. ಈ ಕುತೂಹಲವು ನಿಮ್ಮ ಪ್ರಯೋಜನಕ್ಕೆ ಬರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಯಾವುದೇ ದೊಡ್ಡ ಸಮಸ್ಯೆ ಕಾಣಿಸಿಕೊಳ್ಳದು. ಆದರೆ ನಿಮ್ಮ ಆಹಾರದ ಕುರಿತು ಕಾಳಜಿ ವಹಿಸಬೇಕು. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ತುಲಾ: ಇದು ನಿಮ್ಮ ಪಾಲಿಗೆ ಭಾಗಶಃ ಫಲಪ್ರದ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕಿನಲ್ಲಿ ಹೊಸದಾಗಿ ಸಂತಸ ಕಾಣಿಸಿಕೊಳ್ಳಲಿದೆ. ನಿಮ್ಮ ಬದುಕನ್ನು ಹೊಸ ದೃಷ್ಟಿಕೋನದಿಂದ ನೋಡಲಿದ್ದೀರಿ. ಪ್ರತಿ ಸಂದರ್ಭದಲ್ಲಿಯೂ ನಿಮ್ಮ ಜೀವನ ಸಂಗಾತಿಯು ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಲಿದ್ದಾರೆ. ನಿಮಗೆ ತೃಪ್ತಿ ದೊರೆಯಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ನಿಮ್ಮ ಕೌಟುಂಬಿಕ ಜವಾಬ್ದಾರಿಗಳನ್ನು ಪೂರೈಸುವುದರ ಜೊತೆಗೆ ಪ್ರೇಮ ಸಂಬಂಧಕ್ಕೂ ಸಾಕಷ್ಟು ಸಮಯವನ್ನು ನೀಡಲಿದ್ದೀರಿ. ವ್ಯಾಪಾರೋದ್ಯಮಿಗಳಿಗೆ ಇದು ಸಾಮಾನ್ಯ ವಾರ ಎನಿಸಲಿದೆ. ಈಗ ನೀವು ಹೊಸ ಹೂಡಿಕೆಯ ಕುರಿತು ಯೋಚಿಸಬಹುದು. ಈ ವಾರದಲ್ಲಿ ಉದ್ಯೋಗದಲ್ಲಿರುವವರು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಈ ಕುರಿತು ನಿಮಗೆ ಚಿಂತೆ ಕಾಡಬಹುದು. ಹೀಗಾಗಿ ಕೆಲಸದಲ್ಲಿ ನೀವು ಕೆಲವೊಂದು ತಪ್ಪುಗಳನ್ನು ಮಾಡಬಹುದು. ಹೀಗಾಗಿ ನೀವು ಎಚ್ಚರಿಕೆಯಿಂದ ಇರಬೇಕು. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಸಾಮಾನ್ಯ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೂ ನಿಮ್ಮ ದಿನಚರಿಯಲ್ಲಿ ನಿರಂತರತೆಯನ್ನು ಕಾಪಾಡಿ ಹಾಗೂ ದಿನಚರಿಯನ್ನು ರೂಪಿಸಿಕೊಂಡು ಅದರಂತೆಯೇ ಕೆಲಸ ಮಾಡಿ. ವ್ಯಾಯಾಮಕ್ಕೆ ಗಮನ ನೀಡಿದರೆ ಪ್ರಯೋಜನವಾದೀತು. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ವೃಶ್ಚಿಕ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ಮಕ್ಕಳಿಂದ ಸಾಕಷ್ಟು ಸಂತಸ ಪಡೆಯಲಿದ್ದಾರೆ. ಅವರಿಂದ ಶುಭ ಸುದ್ದಿ ದೊರೆಯಬಹುದು. ಅವರು ಒಳ್ಳೆಯ ಕೆಲಸ ಪಡೆಯುವ ಸಾಧ್ಯತೆ ಇದೆ. ಇದು ನಿಮ್ಮ ಸಂತಸಕ್ಕೆ ಕಾರಣವೆನಿಸಬಹುದು ಹಾಗೂ ಮನೆಯಲ್ಲಿ ಸಂಭ್ರಮ ನೆಲೆಸಬಹುದು. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಒಳ್ಳೆಯ ವಾರ. ನಿಮ್ಮ ಪ್ರೇಮದ ಬದುಕನ್ನು ಮುಕ್ತವಾಗಿ ಆನಂದಿಸಲಿದ್ದೀರಿ ಹಾಗೂ ನಿಮ್ಮ ಪ್ರೇಮ ಸಂಗಾತಿಯನ್ನು ನಿಮ್ಮ ಮಿತ್ರರಿಗೆ ಪರಿಚಯಿಸಲಿದ್ದೀರಿ. ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ವ್ಯವಹಾರವು ವ್ಯಾಪಾರಿಗಳಿಗೆ ಹೊಸ ಭರವಸೆ ತರಲಿದೆ. ನಿಮ್ಮ ಕೆಲಸದಿಂದ ಸಿಗುವ ಉತ್ತಮ ಫಲಿತಾಂಶವನ್ನು ನೋಡಿ ನೀವು ಸಾಕಷ್ಟು ಸಂತುಷ್ಟರಾಗಲಿದ್ದೀರಿ. ನಿಮ್ಮ ಆತ್ಮವಿಶ್ವಾಸವು ವೃದ್ಧಿಸಲಿದೆ. ಉದ್ಯೋಗದಲ್ಲಿರುವ ಜನರಿಗೆ ತಮ್ಮ ಕೆಲಸದಲ್ಲಿ ಭಡ್ತಿ ದೊರೆಯಬಹುದು. ತಮ್ಮ ಕೆಲಸದ ಕಾರಣ ಅವರು ಹೆಸರು ಗಳಿಸಲಿದ್ದಾರೆ. ಈ ವಾರವು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ತರಲಿದೆ. ಅವರು ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದು ಇದು ಉತ್ತಮ ಫಲಿತಾಂಶ ತಂದು ಕೊಡಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೂ ಏನಾದರೂ ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಿ ಹಾಗೂ ವೈದ್ಯರನ್ನು ಸಮಾಲೋಚಿಸಿ ಇದಕ್ಕೆ ಚಿಕಿತ್ಸೆ ಮಾಡಿಸಿ. ವಾರದ ನಡುವಿನ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಧನು: ಈ ವಾರದಲ್ಲಿ ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒತ್ತಡದಿಂದ ಕೂಡಿರಲಿದೆ. ಆದರೆ ಪ್ರೇಮದ ಬದುಕನ್ನು ಸಾಗಿಸುವ ಜನರು ತಮ್ಮ ಸಂಬಂಧವನ್ನು ಮುಕ್ತವಾಗಿ ಆನಂದಿಸಲಿದ್ದಾರೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಕುಟುಂಬಕ್ಕೆ ಸಂಪೂರ್ಣ ಗಮನ ನೀಡಲಿದ್ದೀರಿ. ನಿಮ್ಮಲ್ಲಿ ಅನೇಕರು ಹೊಸ ವಸ್ತುಗಳನ್ನು ತರಲಿದ್ದಾರೆ. ನಿಮ್ಮ ಮನೆಯನ್ನು ನೀವು ಅಲಂಕರಿಸಲಿದ್ದೀರಿ ಹಾಗೂ ಆಸ್ತಿಗೆ ಸಂಬಂಧಿಸಿದಂತೆ ಹೊಸ ಡೀಲನ್ನು ಪಡೆಯಲಿದ್ದೀರಿ. ಈ ವಾರವು ಉದ್ಯೋಗಿಗಳ ಪಾಲಿಗೆ ಉತ್ತಮ ಫಲ ನೀಡಲಿದೆ. ನಿಮ್ಮ ಕೆಲಸದಲ್ಲಿ ಉತ್ತಮ ಸಾಧನೆ ತೋರಲು ನಿಮಗೆ ಸಾಧ್ಯವಾಗಲಿದೆ. ಬ್ಯಾಂಕಿನಿಂದ ಅಥವಾ ಯಾವುದೇ ವ್ಯಕ್ತಿಯಿಂದ ಸಾಲ ಪಡೆಯುವಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ವ್ಯಾಪಾರಿಗಳ ಪಾಲಿಗೆ ಈ ವಾರವು ಕಠಿಣ ಶ್ರಮದಿಂದ ಕೂಡಿರಲಿದೆ. ಆದರೆ ಇದರ ದೀರ್ಘಕಾಲೀನ ಪರಿಣಾಮವು ನಿಮ್ಮ ಪರವಾಗಿರಲಿದೆ. ಇದರಿಂದ ನಿಮಗೆ ನಿರಾಳತೆ ದೊರೆಯಲಿದೆ. ವಿದ್ಯಾರ್ಥಿಗಳು ಅಧ್ಯಯನವನ್ನು ಆನಂದಿಸಲಿದ್ದಾರೆ. ಅನೇಕ ವಿಷಯಗಳನ್ನು ಕಲಿಯುವುದನ್ನು ಅವರು ಆನಂದಿಸಲಿದ್ದಾರೆ. ಇದು ಅವರ ಪಾಲಿಗೆ ಉತ್ತಮ ಫಲಿತಾಂಶ ನೀಡಲಿದೆ. ನಿಮ್ಮ ಅಧ್ಯಯನದಲ್ಲಿ ಸಾಧಿಸುವ ಉತ್ಕೃಷ್ಟ ಸಾಧನೆಗಾಗಿ ಅವರು ಹೆಸರು ಗಳಿಸಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಇದು ಸಕಾಲ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಗಂಭೀರ ಸಮಸ್ಯೆ ಎದುರಾಗದು. ಆದರೂ ವಾಹನ ಚಲಾಯಿಸುವಾಗ ಜಾಗರೂಕತೆ ವಹಿಸಿ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.

ಮಕರ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಏಕತಾನತೆ ಕಾಣಿಸಿಕೊಳ್ಳಬಹುದು. ಇದಕ್ಕೆ ಮೆರುಗು ನೀಡಲು ಏನಾದರೂ ಯೋಜನೆಯನ್ನು ನೀವು ರೂಪಿಸಬೇಕು. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಬಂಧದಲ್ಲಿ ಅಕ್ರಮಣಶೀಲತೆಯನ್ನು ತೋರಲಿದ್ದು, ತಮ್ಮ ಸಂಗಾತಿಗಾಗಿ ಸಾಕಷ್ಟು ಕೆಲಸವನ್ನು ಮಾಡಲಿದ್ದಾರೆ. ನೀವು ಅವರನ್ನು ಡಿನ್ನರ್‌ ಡೇಟ್​ಗೂ ಕರೆದುಕೊಂಡು ಹೋಗಬಹುದು. ವಾರದ ಆರಂಭಿಕ ದಿನದಿಂದಲೇ ನೀವು ನಿರೀಕ್ಷಿತ ಫಲಿತಾಂಶವನ್ನು ಪಡೆಯಲಿದ್ದೀರಿ. ನಿಮ್ಮ ಗೆಳೆಯರಿಂದ ನೆರವನ್ನು ಪಡೆಯಲಿದ್ದೀರಿ. ಸಂಬಂಧಿಗಳು ಮತ್ತು ನೆರೆಹೊರೆಯವರಿಂದ ನೆರವು ದೊರೆಯಬಹುದು. ನಿಮ್ಮ ಕುಟುಂಬದ ಅತ್ಯಂತ ಸಣ್ಣ ವ್ಯಕ್ತಿಯು ನಿಮಗೆ ಸಾಕಷ್ಟು ಪ್ರೀತಿಯನ್ನು ತೋರಲಿದ್ದಾರೆ. ನೀವು ಅವರನ್ನು ತುಂಬು ಹೃದಯದಿಂದ ಪ್ರೀತಿಸಿ ಅವರನ್ನು ಬೆಂಬಲಿಸಲಿದ್ದೀರಿ. ಈ ಸಂದರ್ಭದಲ್ಲಿ ನೀವು ಪ್ರಯಾಣಕ್ಕೆ ಹೋಗಬಹುದು ಹಾಗೂ ಇದು ನಿಮಗೆ ಸಂತಸ ನೀಡಲಿದೆ. ಉದ್ಯೋಗದಲ್ಲಿರುವವರು ಈ ಸಮಯದ ಸಂಪೂರ್ಣ ಲಾಭ ಪಡೆಯಲಿದ್ದಾರೆ. ಅವರು ತಮ್ಮ ಕೆಲಸವನ್ನು ಮುಂದುವರಿಸಲಿದ್ದಾರೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯತ್ನವು ನಿಮಗೆ ಯಶಸ್ಸನ್ನು ತರಲಿದೆ. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಇಚ್ಛೆ ತೋರುತ್ತಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕುರಿತು ಚಿಂತಿಸುವ ಅಗತ್ಯವಿಲ್ಲ. ನೀವು ಉನ್ನತ ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಮಾಧ್ಯಮ ಮತ್ತು ಲಲಿತ ಕಲೆಯೊಂದಿಗೆ ಗುರುತಿಸಿಕೊಂಡಿರುವ ಜನರು ವಿಪರೀತ ಲಾಭ ಗಳಿಸಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಇದು ಸಕಾಲ. ಒಳ್ಳೆಯ ಆಹಾರವನ್ನು ಸೇವಿಸುವ ಇಚ್ಛೆ ನಿಮ್ಮಲ್ಲಿ ಉಂಟಾಗಬಹುದು ಹಾಗೂ ಇದಕ್ಕಗಿ ನೀವು ರೆಸ್ಟೋರಂಟ್‌ ಗೆ ಹೋಗಬಹುದು. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಕುಂಭ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕಿನಲ್ಲಿ ಪ್ರೇಮ ನೆಲೆಸಲಿದೆ. ಪ್ರೇಮದ ಸಂಬಂಧದಲ್ಲಿರುವ ಜನರು ತಮ್ಮ ಬದುಕನ್ನು ಸಂತಸದಿಂದ ಆನಂದಿಸಲಿದ್ದಾರೆ. ವಾರದ ಆರಂಭಿಕ ದಿನಗಳಲ್ಲಿ ನೀವು ಪ್ರವಾಸಕ್ಕೆ ಹೋಗಬಹುದು. ಕುಟುಂಬದ ಎಳೆಯ ಸದಸ್ಯರಿಂದ ನೀವು ಸಹಕಾರವನ್ನು ಪಡೆಯಬಹುದು. ಇದರಿಂದಾಗಿ ಕೆಲಸದಲ್ಲಿ ನಿಮಗೆ ವಿಶೇಷ ಪ್ರಯೋಜನ ದೊರೆಯಲಿದೆ. ನೀವು ಅನೇಕ ಕ್ಷೇತ್ರಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಆದರೂ ಕಾನೂನಿನ ತಿಕ್ಕಾಟದಿಂದ ದೂರವಿರಿ. ಇಲ್ಲದಿದ್ದರೆ ಸಮಸ್ಯೆ ಉಂಟಾಗಬಹುದು. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಈ ವಾರವು ವ್ಯಾಪಾರಿಗಳಿಗೆ ಉತ್ತಮ ಫಲಿತಾಂಶ ತರಲಿದೆ. ನಿಮಗೆ ಸಾಕಷ್ಟು ಪ್ರಯೋಜನ ಉಂಟಾಗಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಕಾರ್ಯಕ್ಷಮತೆಯಲ್ಲಿ ಸುಧಾರಣೆ ಕಂಡುಬರಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಗಂಭೀರತೆ ತೋರಲಿದ್ದಾರೆ. ವೇಳಾಪಟ್ಟಿಯನ್ನು ರಚಿಸಿ ತಮ್ಮ ಅಧ್ಯಯನದಲ್ಲಿ ಮುನ್ನಡೆ ಸಾಧಿಸಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಮೀನ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ವೈವಾಹಿಕ ಬದುಕಿನಲ್ಲಿ ಪ್ರಯಣದ ಜೊತೆಗೆ ಪರಸ್ಪರ ಅರ್ಥೈಸುವಿಕೆಯ ಭಾವನೆ ಮತ್ತು ಪರಸ್ಪರ ಅವಲಂಬನೆಯು ಗಟ್ಟಿಗೊಳ್ಳಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಪರೀಕ್ಷೆಯ ವಾರವೆನಿಸಲಿದೆ. ನೀವು ಪರಸ್ಪರ ಎಷ್ಟು ಅರಿತುಕೊಂಡಿದ್ದೀರಿ ಎಂಬುದನ್ನು ತಿಳಿಯಲು ನಿಮಗೆ ಅವಕಾಶ ಸಿಗಬಹುದು. ನಿಮ್ಮ ವ್ಯವಹಾರ ಪಾಲುದಾರರು ಮತ್ತು ಇಡೀ ತಂಡವನ್ನು ಭೇಟಿಯಾಗುವ ಅವಕಾಶ ನಿಮಗೆ ದೊರೆಯಬಹುದು. ಅನೇಕ ಜನರೊಂದಿಗೆ ಸಂಪರ್ಕ ಸಾಧಿಸಲು ಇದರಿಂದ ಸಾಧ್ಯವಾಗಲಿದೆ. ಇದರಿಂದಾಗಿ ನಿಮ್ಮ ವ್ಯವಹಾರದಲ್ಲಿಯೂ ಪ್ರಗತಿ ಉಂಟಾಗಲಿದೆ. ನೀವು ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಕೆಲಸವು ಚೆನ್ನಾಗಿರಲಿದೆ. ಇದರಿಂದಾಗಿ ನಿಮಗೆ ಪ್ರಶಂಸೆ ದೊರೆಯಲಿದೆ. ನಿಮ್ಮ ಉತ್ಕೃಷ್ಟ ಕೆಲಸಕ್ಕೆ ಆಗಾಗ್ಗೆ ಪ್ರಶಂಸೆ ವ್ಯಕ್ತವಾಗಲಿದೆ. ಯಾರಿಗೂ ಕೆಟ್ಟದು ಅಥವಾ ಒಳ್ಳೆಯದನ್ನು ಹೇಳಬೇಡಿ ಅಥವಾ ಬೇರೆಯವರ ಜಗಳದಲ್ಲಿ ಮೂಗು ತೂರಿಸಬೇಡಿ. ವಿದ್ಯಾರ್ಥಿಗಳ ಪಾಲಿಗೆ, ಅಧ್ಯಯನದ ವಿಚಾರದಲ್ಲಿ ಈ ವಾರವು ಅನುಕೂಲಕರವಾಗಿದೆ. ಅವರು ತಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ಇತರ ವಿಷಯಗಳನ್ನು ಕಲಿಯುವ ಮೂಲಕ ನಿಮ್ಮ ಜ್ಞಾನವನ್ನು ವೃದ್ಧಿಸಲು ಯತ್ನಿಸಲಿದ್ದೀರಿ. ಆರೋಗ್ಯದ ವಿಚಾರದಲ್ಲಿಯೂ ಈ ವಾರ ಒಳ್ಳೆಯದು. ಯಾವುದೇ ದೊಡ್ಡ ಸಮಸ್ಯೆ ಎದುರಾಗದು. ಈ ವಾರವು, ಮುಖ್ಯವಾಗಿ ಕೊನೆಯ ಮೂರು ದಿನಗಳು ಪ್ರಯಾಣದ ವಿಚಾರದಲ್ಲಿ ಅನುಕೂಲಕರವಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.