ETV Bharat / bharat

Video: ಮೃಗಾಲಯದಲ್ಲಿ ಸಿಂಹದ ಆವರಣ ಪ್ರವೇಶಿಸಿದ ಯುವಕನ ರಕ್ಷಣೆ - ಸಿಂಹದ ಆವರಣದಲ್ಲಿದ್ದ ಯುವಕ ರಕ್ಷಣೆ

ಹೈದರಾಬಾದ್​​ನಲ್ಲಿರುವ ನೆಹರು ಜೂಲಾಜಿಕಲ್ ಪಾರ್ಕ್​ನಲ್ಲಿ ಸಿಂಹದ ಆವರಣದೊಳಗೆ ಪ್ರವೇಶಿಸಿದ್ದ ಯುವಕನನ್ನು ಮೃಗಾಲಯದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

WATCH: Man enters lions' enclosure in Hyderabad rescued
ಮೃಗಾಲಯದಲ್ಲಿ ಸಿಂಹದ ಆವರಣ ಪ್ರವೇಶಿಸಿದ ಯುವಕನ ರಕ್ಷಣೆ
author img

By

Published : Nov 24, 2021, 11:03 AM IST

ಹೈದರಾಬಾದ್, ತೆಲಂಗಾಣ: ಯುವಕನೊಬ್ಬ ಆಫ್ರಿಕನ್ ಸಿಂಹವಿದ್ದ ಆವರಣ ಪ್ರವೇಶಿಸಿ, ಆತಂಕ ಸೃಷ್ಟಿಸಿದ್ದ ಘಟನೆ ಹೈದರಾಬಾದ್​​ನಲ್ಲಿರುವ ನೆಹರು ಜೂಲಾಜಿಕಲ್ ಪಾರ್ಕ್​ನಲ್ಲಿ ನಡೆದಿದ್ದು, ಕ್ಷಣಕಾಲ ಸಿಬ್ಬಂದಿ ಹಾಗೂ ಪ್ರವಾಸಿಗರು ಕಂಗಾಲಾಗಿದ್ದಾರೆ.

31 ವರ್ಷದ ಸಾಯಿಕುಮಾರ್ ಸಿಂಹದ ಆವರಣದಲ್ಲಿದ್ದ ಬಂಡೆಗಳ ಮೇಲೆ ತೆರಳಿದ್ದಾನೆ. ಸಿಂಹವೂ ಕೂಡಾ ಸಾಯಿಕುಮಾರ್​ ಅವರನ್ನು ದಿಟ್ಟಿಸಿ ನೋಡಿದೆ. ವಿಷಯ ತಿಳಿದು ಕಾರ್ಯಪ್ರವೃತ್ತರಾದ ಮೃಗಾಲಯ ಸಿಬ್ಬಂದಿ ಸಾಯಿಕುಮಾರ್​ನನ್ನು ರಕ್ಷಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ನೆಹರು ಮೃಗಾಲಯದಲ್ಲಿ ಯುವಕನ ರಕ್ಷಣೆ

ಪೊಲೀಸರು ತನಿಖೆ ಕೈಗೊಂಡಿದ್ದು, ಪ್ರಾಥಮಿಕ ತನಿಖೆ ಪ್ರಕಾರ ಸಾಯಿಕುಮಾರ್ ಮಾನಸಿಕ ಅಸ್ವಸ್ಥನೆಂದು ತಿಳಿದು ಬಂದಿದೆ. ಇನ್ನು ನೆಹರು ಮೃಗಾಲಯಕ್ಕೆ ಭೇಟಿ ನೀಡಿದ್ದವರು, ಯುವಕ ಪುಂಡಾಟವನ್ನು ಸೆರೆ ಹಿಡಿದಿದ್ದರು.

ಇದನ್ನೂ ಓದಿ: ಗಂಗಾವತಿ; ರಕ್ಷಣಾ ತಂಡಗಳ ನೆರವಿಲ್ಲದೇ ಈಜಿ ನದಿ ದಾಟಿದ 123 ಜಾನುವಾರುಗಳು.. video

ETV Bharat Logo

Copyright © 2025 Ushodaya Enterprises Pvt. Ltd., All Rights Reserved.