ಬಟಿಂಡಾ(ಪಂಜಾಬ್): ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ರಸ್ತೆ ತಡೆ ಸೇರಿದಂತೆ ವಿಭಿನ್ನವಾದ ರೀತಿಯಲ್ಲಿ ಪ್ರತಿಭಟನೆ ಮಾಡುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ವಿನೂತನವಾದ ಪ್ರತಿಭಟನೆ ಮಾಡಿದ್ದಾನೆ.
ಪಂಜಾಬ್ನ ಬಟಿಂಡಾದಲ್ಲಿ ಈ ಘಟನೆ ನಡೆದಿದ್ದು, ನಗರಪಾಲಿಕೆಯ ಮಾಜಿ ಸದಸ್ಯ ಬೈನಾಕ್ಯುಲರ್(ದೂರದರ್ಶನ) ಬಳಸಿ, ಅಚ್ಛೇ ದಿನ ಹುಡುಕಲು 51 ಅಡಿ ಎತ್ತರದ ಕ್ರೇನ್ ಮೇಲೆ ಕುಳಿತಿದ್ದಾನೆ.
ಇದನ್ನೂ ಓದಿರಿ: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸಲು ನಾಲ್ವರ ಹೆಸರು ಶಿಫಾರಸು ಮಾಡಿದ ಸುಪ್ರೀಂ
ನಗರ ಪಾಲಿಕೆಯ ಕೌನ್ಸಿಲರ್ ಆಗಿರುವ ವಿಜಯ್ ಕುಮಾರ್ ಶರ್ಮಾ ಕೂಡ 'ಇಂಡಿಯಾ ಫಾರ್ ಸೇಲ್' ಎಂಬ ಬ್ಯಾನರ್ ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಅಚ್ಛೇ ದಿನ್ ಭರವಸೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.