ಗುಣಾ (ಮಧ್ಯಪ್ರದೇಶ): ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಟ್ರ್ಯಾಕ್ಟರ್-ಟ್ರಾಲಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ಕೊಂಡೊಯ್ಯುತ್ತಿದ್ದರು.
ಆದರೆ, ವಾಹನಗಳೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹೋಗುತ್ತಿದ್ದಾಗ, ಜನಸಮೂಹವೊಂದು ಅವರನ್ನು ನಿಲ್ಲಿಸಿ ಗಲಾಟೆ ನಡೆಸಿದೆ.
ದರೋಡೆಕೋರರು ಕೋಲು, ಕೊಡಲಿ, ಕಲ್ಲುಗಳಿಂದ ಸುತ್ತುವರೆದು ವಾಹನಗಳನ್ನು ಅರಣ್ಯ ಇಲಾಖಾಧಿಕಾರಿಗಳಿಂದ ತೆಗೆದುಕೊಂಡು ಹೋಗಿದ್ದಾರೆ
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.