ETV Bharat / bharat

ಆಹಾರ ನೀಡಲು ಹೋದ ಮಗನ ಮೇಲೆ ಆನೆ ದಾಳಿ.. ಎದೆಗುಂದದೆ ಕಂದನನ್ನು ರಕ್ಷಿಸಿದ ತಂದೆ! ವಿಡಿಯೋ - ಆನೆ ಜೊತೆ ಹೋರಾಡಿ ಮಗನನ್ನು ರಕ್ಷಿಸಿದ ವ್ಯಕ್ತಿ

ಆಹಾರ ನೀಡುತ್ತಿರುವಾಗ ಆನೆ ತನ್ನ ಸೊಂಡಿಲಿನಿಂದ ಮಗುವನ್ನು ಸುತ್ತಲು ಯತ್ನಿಸಿದೆ. ಇದನ್ನು ನೋಡಿದ ತಂದೆ ಧೈರ್ಯದಿಂದಲೇ ಆನೆ ಎದುರಿಗೆ ಹೋಗಿ ತನ್ನ ಮಗನನ್ನು ಸೊಂಡಿಲಿನಿಂದ ಬಿಡಿಸಿ ಕಾಪಾಡಿದ್ದಾರೆ..

father saving his small son from elephant in Kerala, man fight with elephant for son, Kerala news, ಕೇರಳದಲ್ಲಿ ಆನೆ ದಾಳಿಯಿಂದ ಮಗನನ್ನು ರಕ್ಷಿಸಿದ ತಂದೆ, ಆನೆ ಜೊತೆ ಹೋರಾಡಿ ಮಗನನ್ನು ರಕ್ಷಿಸಿದ ವ್ಯಕ್ತಿ, ಕೇರಳ ಸುದ್ದಿ,
ಆಹಾರ ನೀಡಲು ಹೋದ ಮಗನ ಮೇಲೆ ಆನೆ ದಾಳಿ
author img

By

Published : Apr 8, 2022, 1:54 PM IST

Updated : Apr 8, 2022, 2:13 PM IST

ಕೋಝಿಕ್ಕೋಡ್ : ಆನೆಯ ದಾಳಿಯಿಂದ ತಂದೆಯೊಬ್ಬ ತನ್ನ 4 ವರ್ಷದ ಮಗನನ್ನು ರಕ್ಷಿಸಿದ ಘಟನೆ ಇಲ್ಲಿನ ಗಡಿ ಪ್ರದೇಶ ಪಝಂಪರಂಬು ಎಂಬಲ್ಲಿ ನಡೆದಿದೆ. ಆನೆಯಿಂದ ತನ್ನ ಮಗನನ್ನು ರಕ್ಷಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಹಾರ ನೀಡಲು ಹೋದ ಮಗನ ಮೇಲೆ ಆನೆ ದಾಳಿ

ತ್ರಿಕ್ಕಲಿಯೂರು ದೇವಸ್ಥಾನದ ಬಳಿ ಕೊಳಕ್ಕಡನ್ ಮಿನಿ ಎಂಬ ಹೆಣ್ಣು ಆನೆಯನ್ನು ಕಟ್ಟಲಾಗಿದೆ. ಆನೆಗೆ ಸ್ವಲ್ಪ ಆಹಾರ ನೀಡಲು ತಂದೆ ನಿರ್ಧರಿಸಿದ್ದಾರೆ. ತಂದೆ ಜೊತೆ ಮಗನೂ ತೆರಳಿದ್ದಾನೆ. ಆಹಾರ ನೀಡುತ್ತಿರುವಾಗ ಆನೆ ತನ್ನ ಸೊಂಡಿಲಿನಿಂದ ಮಗುವನ್ನು ಸುತ್ತಲು ಯತ್ನಿಸಿದೆ. ಇದನ್ನು ನೋಡಿದ ತಂದೆ ಧೈರ್ಯದಿಂದಲೇ ಆನೆ ಎದುರಿಗೆ ಹೋಗಿ ತನ್ನ ಮಗನನ್ನು ಸೊಂಡಿಲಿನಿಂದ ಬಿಡಿಸಿ ಕಾಪಾಡಿದ್ದಾರೆ.

ಓದಿ: ಸ್ಥಳೀಯರೊಂದಿಗೆ ಫುಟ್ಬಾಲ್ ಆಡುತ್ತಿರುವ ಆನೆ ಮರಿ: ವಿಡಿಯೋ ನೋಡಿ

ಅಲ್ಲಿ ನೆರೆದಿದ್ದ ಸಂಬಂಧಿಕರು ಈ ಸಂಪೂರ್ಣ ಘಟನೆಯನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಈ ಘಟನೆ ನಡೆದು ಎರಡು ತಿಂಗಳ ಬಳಿಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

Last Updated : Apr 8, 2022, 2:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.