ETV Bharat / bharat

ಪೂರೈಕೆಯಾದ್ರೂ ಬಳಕೆಯಾಗದ ವೆಂಟಿಲೇಟರ್​: ಯಾವ ರಾಜ್ಯದಲ್ಲಿ ಎಷ್ಟು ಉಪಯೋಗ? ಇಲ್ಲಿದೆ ಮಾಹಿತಿ - ವೆಂಟಿಲೇಟರ್‌ ಕೊರತೆ

ಪಿಎಂ ಕೇರ್ಸ್ ಫಂಡ್‌ ಮೂಲಕ ಕೇಂದ್ರದಿಂದ ರಾಜ್ಯಗಳಿಗೆ ವೆಂಟಿಲೇಟರ್‌ಗಳನ್ನು ನೀಡಲಾಗಿದೆ. ಆದರೆ ಅನೇಕ ರಾಜ್ಯಗಳಲ್ಲಿ ಈ ವ್ಯವಸ್ಥೆ ಇನ್ನೂ ಉಪಯೋಗಕ್ಕೆ ಬಂದಿಲ್ಲ. ಆಸ್ಪತ್ರೆಗಳಲ್ಲಿನ ವ್ಯವಸ್ಥೆಗಳ ಸ್ಥಿತಿ ತುಂಬಾ ಅಸಹನೀಯ ವಾಗಿದ್ದು, ನಿಧಿಯಿಂದ ನೀಡಲಾದ ವೆಂಟಿಲೇಟರ್‌ಗಳನ್ನು ನಿರ್ವಹಿಸಲು ಯಾವುದೇ ತಂತ್ರಜ್ಞರಿಲ್ಲದ ಪರಿಸ್ಥಿತಿ ಕಂಡುಬರುತ್ತಿದೆ.

PM CARES
ವೆಂಟಿಲೇಟರ್​ ಪೂರೈಕೆ
author img

By

Published : May 13, 2021, 9:46 AM IST

ಹೈದರಾಬಾದ್ (ತೆಲಂಗಾಣ): ಕೋವಿಡ್ ರೋಗದ ಎರಡನೇ ತರಂಗವು ದೇಶದೆಲ್ಲೆಡೆ ಸಂಚಲನ ಮೂಡಿಸಿದೆ. ಆಮ್ಲಜನಕ ಮತ್ತು ಔಷಧಿಗಳ ಕೊರತೆ ಎದುರಾಗಿ ಜನರು ಸಾವು- ಬದುಕಿನ ನಡುವೆ ನರಳಾಡುತ್ತಿದ್ದಾರೆ. ಸದ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ವೆಂಟಿಲೇಟರ್​ನಲ್ಲಿದೆ ಎಂಬಂತೆ ಭಾಸವಾಗುತ್ತಿದೆ. ದೇಶಕ್ಕೆ ಬೇಕಾದ ವೈದ್ಯಕೀಯ ಅಗತ್ಯತೆಯನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿರುವುದು ಇದಕ್ಕೆ ಕಾರಣ. ಇಂಥ ಪರಿಸ್ಥಿತಿಯಲ್ಲೂ ದೇಶ ಮಾರಕ ರೋಗದ ವಿರುದ್ಧ ತನ್ನ ಹೋರಾಟವನ್ನು ಮುಂದುವರೆಸಿದೆೆ.

ಪಿಎಂ ಕೇರ್ಸ್ ಫಂಡ್‌ನಿಂದ ಕೇಂದ್ರ ರಾಜ್ಯಗಳಿಗೆ ವೆಂಟಿಲೇಟರ್‌ಗಳನ್ನು ನೀಡಿದೆ. ಆದರೆ ಅನೇಕ ರಾಜ್ಯಗಳಲ್ಲಿ ಈ ವ್ಯವಸ್ಥೆ ಇನ್ನು ಲಭ್ಯವಾಗಿಲ್ಲ. ಆಸ್ಪತ್ರೆಗಳಲ್ಲಿನ ವ್ಯವಸ್ಥೆಗಳ ಸ್ಥಿತಿ ತುಂಬಾ ಅಸಹ್ಯಕರವಾಗಿದ್ದು, ನಿಧಿಯಿಂದ ನೀಡಲಾದ ವೆಂಟಿಲೇಟರ್‌ಗಳನ್ನು ನಿರ್ವಹಿಸಲು ಯಾವುದೇ ತಂತ್ರಜ್ಞರಿಲ್ಲದ ಪರಿಸ್ಥಿತಿ ಇದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಕೋವಿಡ್ ಕಾರಣದಿಂದಾಗಿ ದೇಶಾದ್ಯಂತ ಪ್ರತಿದಿನ ಸರಾಸರಿ 3800 ರಿಂದ 4000 ಜನರು ಸಾಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಕುಟುಂಬ ಸದಸ್ಯರು ತಮ್ಮ ಸಂಬಂಧಿಕರಿಗೆ ವೆಂಟಿಲೇಟರ್‌ಗಳನ್ನು ಲಭ್ಯವಾಗುವಂತೆ ಮಾಡಿ ಎಂದು ಆಡಳಿತವನ್ನು ಪರಿಪರಿಯಾಗಿ ಕೋರುತ್ತಿದ್ದಾರೆ. ವೆಂಟಿಲೇಟರ್‌ಗಳು ಲಭ್ಯವಿಲ್ಲದ ಕಾರಣ ಅನೇಕ ಜೀವಗಳು ಬಲಿಯಾಗುತ್ತಿವೆ.

ಬಿಹಾರ: ಕಳೆದ ವರ್ಷ ಪಿಎಂ ಕೇರ್ಸ್ ನಿಧಿಯಿಂದ ರಾಜ್ಯವು 30 ವೆಂಟಿಲೇಟರ್‌ಗಳನ್ನು ಪಡೆದುಕೊಂಡಿತ್ತು. ಆದರೆ ಒಂದೇ ಒಂದನ್ನೂ ಸಹ ಬಳಕೆ ಮಾಡಿಲ್ಲ. ಕಾರಣ ರಾಜ್ಯದಲ್ಲಿರುವ ತಂತ್ರಜ್ಞರ ಕೊರತೆ. ಪ್ರಸ್ತುತ ತಂತ್ರಜ್ಞರ ಕೊರತೆಯಿಂದಾಗಿ ಇಡೀ ರಾಜ್ಯದಲ್ಲಿ 207 ವೆಂಟಿಲೇಟರ್‌ಗಳು ಉಪಯೋಗವಾಗದೆ ಉಳಿದಿದೆ ಎಂಬ ಅಂಶದಿಂದ ಬಿಹಾರದ ಕರುಣಾಜನಕ ಪರಿಸ್ಥಿತಿಯನ್ನು ಅಳೆಯಬಹುದು.

ಪಂಜಾಬ್: ಪಿಎಂ ಕೇರ್ಸ್ ನಿಧಿಯಿಂದ ಪಂಜಾಬ್ 809 ವೆಂಟಿಲೇಟರ್‌ಗಳನ್ನು ಪಡೆದುಕೊಂಡಿದ್ದು, ಅದರಲ್ಲಿ 558 ವೆಂಟಿಲೇಟರ್‌ಗಳು ಮಾತ್ರ ಬಳಕೆಯಲ್ಲಿವೆ. 251 ಇನ್ನೂ ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಹಾಗೆಯೇ ಬಿದ್ದಿವೆ. ಸರ್ಕಾರದ ಪ್ರಕಾರ, ವೆಂಟಿಲೇಟರ್‌ಗಳನ್ನು ಅಳವಡಿಸಲು ಪಂಜಾಬ್‌ನಲ್ಲಿ ಒಬ್ಬ ಎಂಜಿನಿಯರ್‌ ಮಾತ್ರ ನಿಯೋಜನೆಯಾಗಿದ್ದಾರೆ.

ಕರ್ನಾಟಕ: ಕರ್ನಾಟಕವು 3025 ವೆಂಟಿಲೇಟರ್‌ಗಳನ್ನು ಪಡೆದುಕೊಂಡಿದ್ದು, ಅದರಲ್ಲಿ 1,859 ವೆಂಟಿಲೇಟರ್‌ಗಳನ್ನು ಮಾತ್ರ ಬಳಸಲಾಗುತ್ತಿದೆ. ಉಳಿದ 1,166 ವೆಂಟಿಲೇಟರ್‌ಗಳು ನಿಷ್ಫಲವಾಗಿದೆ. ಪ್ರಸ್ತುತ ನೀಡಲಾದ ಸುಮಾರು 40 ಪ್ರತಿಶತದಷ್ಟು ವೆಂಟಿಲೇಟರ್‌ಗಳು ಧೂಳು ಹಿಡಿಯುತ್ತಿದೆ. ಇದಕ್ಕೂ ಸಹ ತಾಂತ್ರಿಕ ಸಮಸ್ಯೆಗಳೇ ಕಾರಣ ಎಂದು ಹೇಳಲಾಗುತ್ತಿದೆ.

ರಾಜಸ್ಥಾನ: ರಾಜಸ್ಥಾನವು 1900 ವೆಂಟಿಲೇಟರ್‌ಗಳನ್ನು ಪಡೆದಿದೆ. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ಎಲ್ಲಾ ವೆಂಟಿಲೇಟರ್ ತಪಾಸಣೆ ಮಾಡಲಾಗಿದೆ. ಈ ಶೇಕಡಾ 90 ರಷ್ಟು ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿದ್ದರೆ, 10 ಪ್ರತಿಶತದಷ್ಟರಲ್ಲಿ ಸಾಫ್ಟ್‌ವೇರ್, ಸೇವೆ ಅಥವಾ ಸ್ಥಾಪನೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿವೆ.

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶವು ಪಿಎಂ ಕೇರ್ಸ್ ನಿಧಿಯಿಂದ 500 ವೆಂಟಿಲೇಟರ್‌ಗಳನ್ನು ಪಡೆದಿದೆ. ಆರೋಗ್ಯ ಇಲಾಖೆಯ ಪ್ರಕಾರ, ಮೇ 12 ರವರೆಗೆ ಈ ಪೈಕಿ ಕೇವಲ 48 ವೆಂಟಿಲೇಟರ್‌ಗಳನ್ನು ಬಳಸಲಾಗುತ್ತಿದ್ದು, 452 ವೆಂಟಿಲೇಟರ್‌ಗಳ ಬಳಕೆಯಾಗಿಲ್ಲ.

ಕೇರಳ: ರಾಜ್ಯವು 480 ವೆಂಟಿಲೇಟರ್‌ಗಳನ್ನು ಪಡೆದಿದೆ. 36 ವೆಂಟಿಲೇಟರ್‌ಗಳನ್ನು ಮಾತ್ರ ತಾಂತ್ರಿಕ ತೊಂದರೆಗಳಿಂದ ಬಳಸಿಲ್ಲ. ಆರೋಗ್ಯ ಇಲಾಖೆಯ ಪ್ರಕಾರ, ಈ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುತ್ತದೆಯಂತೆ.

ಉತ್ತರಾಖಂಡ್: ಉತ್ತರಾಖಂಡವು ಪಿಎಂ ಕೇರ್ಸ್ ನಿಧಿಯಿಂದ 700 ವೆಂಟಿಲೇಟರ್‌ಗಳನ್ನು ಪಡೆದಿದ್ದು, ಅದರಲ್ಲಿ 670 ವೆಂಟಿಲೇಟರ್‌ಗಳನ್ನು ಬಳಸಲಾಗುತ್ತಿದೆ. ಎಂಜಿನಿಯರ್‌ಗಳ ಕೊರತೆಯಿಂದಾಗಿ ಉಳಿದ 30 ವೆಂಟಿಲೇಟರ್‌ಗಳನ್ನು ಸ್ಥಾಪಿಸಲಾಗಿಲ್ಲ. ಅವುಗಳನ್ನು ಸ್ಥಾಪಿಸಲು ರಾಜ್ಯದಲ್ಲಿ ಒಬ್ಬ ಎಂಜಿನಿಯರ್ ಕೂಡ ಇಲ್ಲ.

ಛತ್ತೀಸ್​ಗಢ: ಛತ್ತೀಸ್​ಗಢದಲ್ಲಿ ಪಿಎಂ ಕೇರ್ಸ್ ನಿಧಿಯಿಂದ 230 ವೆಂಟಿಲೇಟರ್‌ಗಳು ಬಂದಿವೆ. ಸರ್ಕಾರದ ಪ್ರಕಾರ, 70 ವೆಂಟಿಲೇಟರ್‌ಗಳು ತಾಂತ್ರಿಕ ದೋಷಗಳನ್ನು ಹೊಂದಿದ್ದು, ಅವುಗಳಲ್ಲಿ 60ರ ಸಮಸ್ಯೆಗಳನ್ನು ಪರಿಹರಿಸಿದ ನಂತರ ಬಳಸಲಾಗಿದೆ.

ದೆಹಲಿ: ದೆಹಲಿಯು ಪಿಎಂ ಕೇರ್ಸ್ ನಿಧಿಯಿಂದ 990 ವೆಂಟಿಲೇಟರ್‌ಗಳನ್ನು ಸ್ವೀಕರಿಸಿದೆ. ಇವೆಲ್ಲವನ್ನೂ ದೆಹಲಿ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿದೆ. ಆಸ್ಪತ್ರೆಗಳ ಪ್ರಕಾರ, ವೆಂಟಿಲೇಟರ್‌ಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲ. ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಸ್ತುತ ಸುಮಾರು 1200 ವೆಂಟಿಲೇಟರ್‌ಗಳಿವೆ.

ಹೀಗೆ ಸಮಸ್ಯೆೆ ಬಹುತೇಕ ಎಲ್ಲ ರಾಜ್ಯಗಳಲ್ಲಿದೆ. ವೆಂಟಿಲೇಟರ್ ದೋಷಯುಕ್ತವಾಗಿದ್ದರೆ, ಅದನ್ನು ಸರಿಪಡಿಸಲು ಏಕೆ ಯಾರು ಮುಂದೆ ಬರುವುದಿಲ್ಲ ಎಂಬ ಪ್ರಶ್ನೆ ಕಾಡುವಂತಹದ್ದು. ಒಂದು ಯಂತ್ರವು ಉತ್ತಮವಾಗಿದ್ದರೆ, ಅನೇಕ ರೋಗಿಗಳನ್ನು ಉಳಿಸಬಹುದಿತ್ತು. ಒಂದು ರಾಜ್ಯದಲ್ಲಿ ವೆಂಟಿಲೇಟರ್‌ನ ಅವಶ್ಯಕತೆ ಕಡಿಮೆ ಇದ್ದರೆ, ಇತರ ರಾಜ್ಯಗಳಲ್ಲಿ ನಿರ್ಣಾಯಕವಾಗಿರುವ ರೋಗಿಗಳಿಗೆ ಈ ಯಂತ್ರಗಳನ್ನು ಏಕೆ ತಲುಪಿಸಲಾಗುವುದಿಲ್ಲ? ವಾಸ್ತವವಾಗಿ, ದೇಶದಲ್ಲಿ ಯಾವುದೇ ವ್ಯವಸ್ಥೆ ಸರಿಯಾಗಿಲ್ಲ. ಹೆಚ್ಚಿನ ರಾಜ್ಯಗಳು ಕೆಟ್ಟ ಪರಿಸ್ಥಿತಿಯಲ್ಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.