ETV Bharat / bharat

8 ವರ್ಷದಲ್ಲಿ 22 ಕೋಟಿ ಯುವಕರಿಂದ ಅರ್ಜಿ.. ದೇಶದಲ್ಲಿನ ನಿರುದ್ಯೋಗ ತೆರೆದಿಟ್ಟ ವರುಣ್​ ಗಾಂಧಿ! - ನಿರುದ್ಯೋಗ ಸಮಸ್ಯೆ ಬಗ್ಗೆ ಸ್ವಪಕ್ಷದ ವಿರುದ್ಧವೇ ಕಿಡಿಕಾರಿದ ವರಣ್​ ಗಾಂಧಿ

ಕಳೆದ 8 ವರ್ಷಗಳಲ್ಲಿ 22 ಕೋಟಿ ಯುವಕರಿಂದ ಕೇಂದ್ರ ಇಲಾಖೆಗಳಲ್ಲಿ ಉದ್ಯೋಗಕ್ಕಾಗಿ ಅರ್ಜಿ- 7 ಲಕ್ಷ ಜನರಿಗೆ ಮಾತ್ರ ಉದ್ಯೋಗ- ನಿರುದ್ಯೋಗದ ಸಮಸ್ಯೆ ತೆರೆದಿಟ್ಟ ಬಿಜೆಪಿ ಸಂಸದ ವರುಣ್​ ಗಾಂಧಿ- ಕೇಂದ್ರದ ವಿರುದ್ಧ ಕಿಡಿ

ನಿರುದ್ಯೋಗ ಸಮಸ್ಯೆ ಬಗ್ಗೆ ಸ್ವಪಕ್ಷದ ವಿರುದ್ಧವೇ ಕಿಡಿಕಾರಿದ ವರಣ್​ ಗಾಂಧಿ!

author img

By

Published : Jul 28, 2022, 5:08 PM IST

ಪಿಲಿಭಿತ್(ಉತ್ತರಪ್ರದೇಶ) : ದೇಶದಲ್ಲಿ ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದ ವರುಣ್ ಗಾಂಧಿ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟ್ವಿಟರ್ ಪೋಸ್ಟ್‌ನಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದು, ಕಳೆದ 8 ವರ್ಷಗಳಲ್ಲಿ 22 ಕೋಟಿ ಯುವಕರು ಕೇಂದ್ರ ಇಲಾಖೆಗಳಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 7 ಲಕ್ಷ ಜನರು ಮಾತ್ರ ಉದ್ಯೋಗ ಪಡೆದಿದ್ದಾರೆ ಎಂದು ಮೋದಿ ಸರ್ಕಾರವನ್ನು ಗುರಿಯಾಗಿಸಿ ಟ್ವೀಟ್​ ಮಾಡಿದ್ದಾರೆ.

ದೇಶದಲ್ಲಿ ಸುಮಾರು 1 ಕೋಟಿ ಮಂಜೂರಾದ ಹುದ್ದೆಗಳು ಖಾಲಿ ಇವೆ ಎಂದರೆ ಈ ಪರಿಸ್ಥಿತಿಗೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ. ಇವರು ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಸರ್ಕಾರದ ವಿರುದ್ಧ ಕಠಿಣ ಹೇಳಿಕೆಗಳನ್ನು ಮಾಡುತ್ತಲೇ ಇದ್ದಾರೆ. ಗಂಗಾ ನದಿ ಸ್ವಚ್ಛತೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದರು ಎಂದು ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದು ಪಕ್ಷದ ಹೈಕಮಾಂಡ್ ಕಣ್ಣನ್ನು ಕೆಂಪಗೆ ಮಾಡಿದ್ದಾರೆ.

ಗಂಗಾ ನಮಗೆ ಕೇವಲ ನದಿಯಲ್ಲ, 'ತಾಯಿ'. ಗಂಗಾಮಾತೆ ಕೋಟ್ಯಂತರ ದೇಶವಾಸಿಗಳ ಜೀವನ, ಧರ್ಮ ಮತ್ತು ಅಸ್ತಿತ್ವಕ್ಕೆ ಆಧಾರ. ನಮಾಮಿ ಗಂಗೆಗೆ 20,000 ಕೋಟಿ ಬಜೆಟ್ ಘೋಷಣೆ ಮಾಡಿದ್ದು, 11,000 ಕೋಟಿ ಖರ್ಚು ಮಾಡಲಾಗಿದೆ. ಆದರೂ ಅಲ್ಲಿ ಮಾಲಿನ್ಯ ಯಾಕೆ? ಗಂಗೆಯೇ ಜೀವದಾನಿ, ಹಾಗಂದಮೇಲೆ ಆ ಕೊಳಕು ನೀರಿನಿಂದ ಮೀನುಗಳು ಏಕೆ ಸಾಯುತ್ತಿವೆ? ಇದಕ್ಕೆ ಯಾರು ಹೊಣೆ? ಎಂದು ವರುಣ್ ಟ್ವೀಟ್​ ಮೂಲಕ ಪ್ರಶ್ನಿಸಿದ್ದಾರೆ.

ಕಸದಿಂದ ತುಂಬಿರುವ ನದಿಯ ದಡದಲ್ಲಿ ಮೀನುಗಳು ಸತ್ತಿರುವುದನ್ನು ತೋರಿಸುವ ವಿಡಿಯೋವನ್ನು ಅವರು ಈ ವೇಳೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಸ್ಸೋಂನಲ್ಲಿ 10 ಜಿಹಾದಿ ಗುಂಪುಗಳ ಸದಸ್ಯರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.