ETV Bharat / bharat

ಕೊರೊನಾ ಲಸಿಕೆ ಪೂರೈಕೆ ಸಂಬಂಧ ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರದಿಂದ ಹೊಸ ನೀತಿ - ಖಾಸಗಿ ಆಸ್ಪತ್ರೆಗಳಿಗೆ ಕೊರೊನಾ ಲಸಿಕೆ

ಸೀಮಿತ ಲಸಿಕೆ ಪೂರೈಕೆಯನ್ನು ಸಮತೋಲನಗೊಳಿಸಲು ಮತ್ತು ವ್ಯರ್ಥವಾಗುವುದನ್ನು ತಡೆಯಲು ಖಾಸಗಿ ಆಸ್ಪತ್ರೆಗಳಿಗೆ ಒಂದು ತಿಂಗಳವರೆಗೆ ಬೇಕಾಗುವ ಡೋಸೇಜ್‌ಗಳ ಮೇಲೆ ಕೇಂದ್ರ ಸರ್ಕಾರ ಗರಿಷ್ಠ ಮಿತಿ ವಿಧಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳು ನಾಳೆಯಿಂದ ಜಾರಿಗೆ ಬರುತ್ತವೆ.

ಖಾಸಗಿ ಆಸ್ಪತ್ರೆಗಳಿಗೆ ಕೊರೊನಾ ಲಸಿಕೆ
ಖಾಸಗಿ ಆಸ್ಪತ್ರೆಗಳಿಗೆ ಕೊರೊನಾ ಲಸಿಕೆ
author img

By

Published : Jun 30, 2021, 2:04 PM IST

ನವದೆಹಲಿ: ಖಾಸಗಿ ಆಸ್ಪತ್ರೆಗಳು ಕೋವಿನ್ ಆ್ಯಪ್​ ಮೂಲಕ ಕೋವಿಡ್ ಲಸಿಕೆ ಬೇಡಿಕೆಗಳನ್ನು ದಾಖಲಿಸಬೇಕು. ಅದರಲ್ಲಿಯೇ ಲಸಿಕೆ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು. ಉತ್ಪಾದಕರಿಂದ ನೇರವಾಗಿ ಡೋಸೇಜ್‌ಗಳನ್ನು ಖರೀದಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸೀಮಿತ ಲಸಿಕೆ ಪೂರೈಕೆಯನ್ನು ಸಮತೋಲನಗೊಳಿಸಲು ಮತ್ತು ವ್ಯರ್ಥವಾಗುವುದನ್ನು ತಡೆಯಲು ಖಾಸಗಿ ಆಸ್ಪತ್ರೆಗಳಿಗೆ ಒಂದು ತಿಂಗಳವರೆಗೆ ಬೇಕಾಗುವ ಡೋಸೇಜ್‌ಗಳ ಮೇಲೆ ಸರ್ಕಾರವು ಗರಿಷ್ಠ ಮಿತಿಯನ್ನು ವಿಧಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳು ಜುಲೈ 1 ರಿಂದ (ನಾಳೆಯಿಂದ) ಜಾರಿಗೆ ಬರುತ್ತವೆ. ಹಿಂದಿನ ತಿಂಗಳ ಯಾವುದೇ ಏಳು ದಿನಗಳ ಅವಧಿಯಲ್ಲಿ (ಆಸ್ಪತ್ರೆಯು ಏಳು ದಿನಗಳ ಅವಧಿಯನ್ನು ಆಯ್ಕೆ ಮಾಡಬಹುದು) ಖಾಸಗಿ ಆಸ್ಪತ್ರೆಗಳ ಲೆಕ್ಕಾಚಾರಕ್ಕೆ 'ಗರಿಷ್ಠ ಮಾಸಿಕ ಮಿತಿ' ವಿಧಿಸಲಾಗುತ್ತದೆ.

ಉದಾಹರಣೆಗೆ, ಖಾಸಗಿ ಆಸ್ಪತ್ರೆಯು ಜುಲೈಗೆ ಲಸಿಕೆ ಬೇಡಿಕೆ ಇಟ್ಟರೆ ಅದು ಜೂನ್ 10-16 ಅನ್ನು ಏಳು ದಿನಗಳ ಅವಧಿಯಾಗಿ ಆಯ್ಕೆ ಮಾಡಬಹುದು. ಆ ಅವಧಿಯಲ್ಲಿ, 700 ಡೋಸ್‌ಗಳನ್ನು ಬಳಸಿದರೆ, ದೈನಂದಿನ ಸರಾಸರಿ 100 ಆಗಿರುತ್ತದೆ. ಆದ್ದರಿಂದ, "ಗರಿಷ್ಠ ಮಾಸಿಕ ಮಿತಿ", 100 ಡೋಸ್‌ಗಳು x 31 ದಿನಗಳು (ಜುಲೈಗೆ) x 2 (ಸರಾಸರಿಗಿಂತ ದ್ವಿಗುಣ), ಇದು 6,200 ಡೋಸ್‌ ಆಗುತ್ತದೆ.

ಮೊದಲ ಬಾರಿಗೆ ವ್ಯಾಕ್ಸಿನೇಷನ್ ಡ್ರೈವ್‌ಗೆ ಸೇರುವ ಆಸ್ಪತ್ರೆಗಳಿಗೆ ಲಭ್ಯವಿರುವ ಹಾಸಿಗೆಗಳ ಸಂಖ್ಯೆಯನ್ನು ಆಧರಿಸಿ ಲಸಿಕೆಗಳನ್ನು ಹಂಚಲಾಗುತ್ತದೆ. ಎಲ್ಲಾ ಖಾಸಗಿ ಆಸ್ಪತ್ರೆಗಳು ಕೋವಿನ್ ಡೇಟಾಬೇಸ್‌ಗೆ ಅಗತ್ಯವಾದ ವಿವರಗಳನ್ನು ನಮೂದಿಸುತ್ತವೆ. ಅದು ಮಾಹಿತಿಯನ್ನು ಉತ್ಪಾದಕರಿಗೆ ತಲುಪಿಸುವ ಮೊದಲು ಜಿಲ್ಲಾ ಮತ್ತು ರಾಜ್ಯವಾರು ಬೇಡಿಕೆಯನ್ನು ಒಟ್ಟುಗೂಡಿಸುತ್ತದೆ.

ಇದಕ್ಕಾಗಿ ಸರ್ಕಾರಿ ಅಧಿಕಾರಿಗಳಿಂದ ಯಾವುದೇ ಪೂರ್ವ ಅನುಮೋದನೆ ಅಗತ್ಯವಿಲ್ಲ. ಖಾಸಗಿ ಆಸ್ಪತ್ರೆಗಳ ಖರೀದಿ ಪ್ರಕ್ರಿಯೆಯ ಪರಿಷ್ಕರಣೆ ವಿಚಾರದಲ್ಲಿ ತಮಿಳುನಾಡು ಮತ್ತು ಒಡಿಶಾ ಸೇರಿದಂತೆ ಕೆಲವು ರಾಜ್ಯಗಳು 75:25 ಡೋಸೇಜ್ ಹಂಚಿಕೆಯಲ್ಲಿ ಬದಲಾವಣೆ ಕೇಳಿವೆ.

ಈ ತಿಂಗಳ ಆರಂಭದಲ್ಲಿ ಕೇಂದ್ರದ ಆದೇಶದ ಪ್ರಕಾರ, ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್ ಅ​ನ್ನು ಪ್ರತಿ ಡೋಸ್‌ಗೆ ₹780, ಸ್ಪುಟ್ನಿಕ್ ವಿ ಡೋಸ್‌ಗೆ ₹ 1,145 ಮತ್ತು ಕೊವಾಕ್ಸಿನ್ ಡೋಸ್‌ಗೆ ₹1,410 ವಿಧಿಸುತ್ತವೆ. ಇದು ಒಂದು ಡೋಸ್​ಗೆ ₹ 150 ತೆರಿಗೆಗಳು ಮತ್ತು ಸೇವಾ ಶುಲ್ಕವನ್ನು ಒಳಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.