ETV Bharat / bharat

ಸಿಲ್ಕ್ಯಾರಾ ಸುರಂಗ ಕುಸಿತ: ಕ್ರಿಸ್‌ಮಸ್ ವೇಳೆ ಕಾರ್ಮಿಕರು ಮನೆ ಸೇರುವ ವಿಶ್ವಾಸವಿದೆ- ಅರ್ನಾಲ್ಡ್ ಡಿಕ್ಸ್ - Uttarkashi Silkyara tunnel

Uttarkashi tunnel collapse update: ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ಹೊರತರುವ ಕಾರ್ಯಾಚರಣೆಗೆ ಒಂದು ತಿಂಗಳ ಸಮಯ ತೆಗೆದುಕೊಳ್ಳಬಹುದು. ಕ್ರಿಸ್‌ಮಸ್ ಸಮಯದಲ್ಲಿ ಅವರು ಮನೆಗೆ ಬರುವ ವಿಶ್ವಾಸವಿದೆ- ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್.

Arnold Dix
ಅರ್ನಾಲ್ಡ್ ಡಿಕ್ಸ್
author img

By ANI

Published : Nov 26, 2023, 8:36 AM IST

ಉತ್ತರಾಖಂಡ: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದಿರುವ 41 ಮಂದಿ ಕಾರ್ಮಿಕರು ಕ್ರಿಸ್‌ಮಸ್ ಹಬ್ಬದ ವೇಳೆಗೆ ಸುರಕ್ಷಿತವಾಗಿ ಮರಳಿ ಮನೆ ಸೇರಲಿದ್ದಾರೆ ಎಂದು ಅಂತರರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಶನಿವಾರ ಭರವಸೆ ವ್ಯಕ್ತಪಡಿಸಿದ್ದಾರೆ.

  • #WATCH | Uttarkashi (Uttarakhand) tunnel rescue | Latest visuals outside the tunnel where operation is underway to rescue the 41 workers who got trapped here on 12th November.

    Preparation of protection umbrella is underway inside the tunnel where the people from the rescue team… pic.twitter.com/2eKPJGNuk4

    — ANI (@ANI) November 26, 2023 " class="align-text-top noRightClick twitterSection" data=" ">

ರಕ್ಷಣಾ ಕಾರ್ಯಾಚರಣೆ ಯಾವಾಗ ಯಶಸ್ವಿಯಾಗುತ್ತದೆ ಎಂಬ ಕುರಿತು ಮಾಧ್ಯಮ ಸಂಸ್ಥೆಯ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, "ಇನ್ನೂ ಒಂದು ತಿಂಗಳು ತೆಗೆದುಕೊಳ್ಳಬಹುದು. ಆದಾಗ್ಯೂ ನಿಖರವಾಗಿ ಹೇಳಲಾರೆ. ನನ್ನ ಪ್ರಕಾರ, ನಾವು ಆತುರಪಡಬಾರದು. ಎಲ್ಲರೂ ಸುರಕ್ಷಿತವಾಗಿ ಮನೆಗೆ ಬರುತ್ತಾರೆ ಎಂಬ ವಿಶ್ವಾಸವಿದೆ" ಎಂದರು. ಇದೇ ವೇಳೆ, ಕಾರ್ಯಾಚರಣೆ ಯಾವಾಗ ಕೊನೆಗೊಳ್ಳುತ್ತದೆ ಎಂದು ನಿಗದಿತ ಸಮಯ ಮಿತಿ ಹೇಳಲು ಡಿಕ್ಸ್ ನಿರಾಕರಿಸಿದರು.

"ರಕ್ಷಣಾ ಕಾರ್ಯಾಚರಣೆ ಸುಗಮ, ತ್ವರಿತವಾಗಿ ಕೊನೆಗೊಳ್ಳುತ್ತವೆ ಎಂದು ನಾನು ಎಂದಿಗೂ ಭರವಸೆ ನೀಡಲಿಲ್ಲ. ಇಂದು ರಾತ್ರಿ ಅಥವಾ ನಾಳೆಯೊಳಗೆ ಕಾರ್ಯಾಚರಣೆ ಮುಗಿಯುತ್ತದೆ ಎಂದು ಹೇಳಿಲ್ಲ. ಅವರೆಲ್ಲಾ ಕ್ರಿಸ್‌ಮಸ್‌ ಸಮಯದ ವೇಳೆಗೆ ಮನೆಗೆ ಬರುತ್ತಾರೆ ಎಂಬ ಭರವಸೆ ನನ್ನದು. ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ" ಎಂದು ಹೇಳಿದರು.

ಶನಿವಾರ ಮುಂಜಾನೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಸೈಯದ್ ಅತಾ ಹಸ್ನೈನ್, "ಸುರಂಗ ರಕ್ಷಣಾ ಕಾರ್ಯಾಚರಣೆಗೆ ಬಳಸಿರುವ ಡ್ರಿಲ್ಲಿಂಗ್‌ ಮಷಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಸರಿಪಡಿಸಿ ರಕ್ಷಣಾ ಕಾರ್ಯ ಮುಂದುವರಿಸಲಾಗುವುದು. ನಮ್ಮ ರಕ್ಷಕರು ಅನಿರೀಕ್ಷಿತ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುರಂಗದಲ್ಲಿ ಸಿಲುಕಿರುವ ಎಲ್ಲಾ 41 ಕಾರ್ಮಿಕರು ಸುರಕ್ಷಿತವಾಗಿದ್ದಾರೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಉತ್ತರಕಾಶಿ ಸುರಂಗ ಕುಸಿತ : ಕಾರ್ಮಿಕರ ಸುರಕ್ಷತೆಗೆ ಪ್ರಾರ್ಥಿಸಿ ಕಲಾವಿದನಿಂದ ಮರಳು ಶಿಲ್ಪ - ವಿಡಿಯೋ

"ನಾವು ಬೆಟ್ಟಗಳ ಮೇಲೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಅಷ್ಟೇ ಅಲ್ಲದೆ, ಸ್ಥಳದಲ್ಲಿ ಅನಿರೀಕ್ಷಿತ ವಾತಾವರಣವಿದೆ. ಯುದ್ಧದಂತಹ ಪರಿಸ್ಥಿತಿ ಎದುರಾಗಿದೆ. ಸುರಂಗದಿಂದ ಆಗರ್ ಯಂತ್ರದ ಹಾನಿಗೊಳಗಾದ ಭಾಗವನ್ನು ಹೊರತರಲು ಭಾರತೀಯ ವಾಯುಪಡೆಯಿಂದ ಸುಧಾರಿತ ಯಂತ್ರೋಪಕರಣಗಳನ್ನು ಏರ್‌ಲಿಫ್ಟ್ ಮಾಡಲಾಗುತ್ತಿದೆ" ಎಂದು ಅವರು ತಿಳಿಸಿದರು.

  • Uttarkashi (Uttarakhand) tunnel rescue | Indian Air Force tweets, "Responding with alacrity to the requirements of the ongoing rescue operation, late last evening the IAF flew in critical DRDO equipment to Dehradun." pic.twitter.com/bjO0fEC3f4

ಇದನ್ನೂ ಓದಿ: ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರ ಜೊತೆ ಪೈಪ್​ ಮೂಲಕ ಮಾತನಾಡಿದ ಕುಟುಂಬಸ್ಥರು - ವಿಡಿಯೋ

"ಒಳಗೆ ಸಿಕ್ಕಿಹಾಕಿಕೊಂಡಿರುವ ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಅವರಿಗೆ ಅಗತ್ಯ ಮೂಲಭೂತ ವಸ್ತುಗಳನ್ನು ಕಳುಹಿಸಲಾಗುತ್ತಿದೆ. ಸಂಬಂಧಿಕರು ಕಾರ್ಮಿಕರೊಂದಿಗೆ ಮಾತನಾಡುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಎದುರಾಗಿವೆ. ಇನ್ನೆರಡು ದಿನಗಳಲ್ಲಿ ಕೊರೆಯುವ ಪ್ರಕ್ರಿಯೆ ಆರಂಭವಾಗಲಿದೆ" ಎಂದರು.

ಇದನ್ನೂ ಓದಿ: ಉತ್ತರಾಖಂಡ ಸುರಂಗ ಕುಸಿತ : ಕೊರೆಯುವ ಅಗರ್​ ಯಂತ್ರಕ್ಕೆ ಹಾನಿ , ರಕ್ಷಣಾ ಕಾರ್ಯಾಚರಣೆಗೆ ಹೊಸ ಅಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.