ಲಖನೌ : ಚೌರಿ ಚೌರಾ ಶತಾಬ್ದಿ ಉತ್ಸವ ಪ್ರಾರಂಭವಾಗಿದ್ದು ಈ ವೇಳೆ ಉತ್ತರಪ್ರದೇಶ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ದೊಡ್ಡ ದಾಖಲೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಚೌರಿ-ಚೌರಾ ಶತಾಬ್ದಿ ಉತ್ಸವಕ್ಕೆ ಚಾಲನೆ ನೀಡಿದ್ದು, ಇದರಡಿಯಲ್ಲಿ ಉತ್ತರಪ್ರದೇಶ ಸರ್ಕಾರ ವರ್ಷದುದ್ದಕ್ಕೂ ಹುತಾತ್ಮರ ಕುರಿತಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.
ಇದರ ನಡುವೆ ಯುಪಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಭಾರತದ ರಾಷ್ಟ್ರೀಯ ಹಾಡಾಗಿರುವ 'ವಂದೇ ಮಾತರಂ' ಗೀತೆಯನ್ನು ಹಾಡಿರುವ ವಿಡಿಯೋಗಳನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಪ್‌ಲೋಡ್ ಮಾಡುವ ಮೂಲಕ ಹೊಸ ದಾಖಲೆ ಮಾಡಿದೆ.
ಈ ಕುರಿತಂತೆ ಉತ್ತರಪ್ರದೇಶ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಮುಖೇಶ್ ಮೆಶ್ರಮ್ ಮಾಹಿತಿ ನೀಡಿದ್ದು, 'ವಂದೇ ಮಾತರಂ' ಹಾಡನ್ನು ಹಾಡಿರುವ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ವಿಷಯದಲ್ಲಿ ನಮ್ಮ ಸರ್ಕಾರ ದೊಡ್ಡ ದಾಖಲೆ ನಿರ್ಮಿಸಿದೆ.
ಉತ್ತರಪ್ರದೇಶದಲ್ಲಿ 1 ಲಕ್ಷ 40 ಸಾವಿರ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದೆ. ಈ ಮೂಲಕ ಚೀನಾದ ದಾಖಲೆಯನ್ನು ಯುಪಿ ಜನರು ಕೇವಲ 2 ಗಂಟೆಯಲ್ಲಿ ಮುರಿದಿದ್ದಾರೆ. ಇದೊಂದು ದೊಡ್ಡ ದಾಖಲೆಯಾಗಿದೆ. ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಲ್ಲಿಯೂ ದಾಖಲಿಸಲ್ಪಡುತ್ತದೆ ಎಂದರು.
ಓದಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1.8 ಕೋಟಿಗೆ ಏರಿಕೆ.. 1.4 ಕೋಟಿ ಮಂದಿ ಗುಣಮುಖ
ಈ ಹಿಂದೆ ಚೀನಾ 29 ದಿನಗಳಲ್ಲಿ 14 ಸಾವಿರದ 400 ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ದಾಖಲೆ ಸೃಷ್ಟಿಸಿತ್ತು. ಆದರೆ, ಯುಪಿ ಸರ್ಕಾರ ಕೇವಲ 2 ಗಂಟೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ವಂದೇ ಮಾತರಂ ಹಾಡುವ ವಿಡಿಯೋವನ್ನು ಅಪ್‌ಲೋಡ್ ಮಾಡಿ ಗಮನ ಸೆಳೆದಿದೆ.