ETV Bharat / bharat

ರಾಕ್ಷಸನಾದ ಶಿಕ್ಷಕ.. ಮಗ್ಗಿ ಮರೆತ ವಿದ್ಯಾರ್ಥಿ ಕೈ ಡ್ರಿಲ್ ಮಷಿನ್​ನಿಂದ ಕೊರೆದ ಗುರುವಿನ ವಿರುದ್ಧ ತನಿಖೆ - ಮಾಹಿತಿ ಪಡೆದ ಶಿಕ್ಷ ಣಾಧಿಕಾರಿ

ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ಶಾಲೆಯೊಂದರಲ್ಲಿ 2ರ ಮಗ್ಗಿಯನ್ನು ಮರತಿದ್ದಕ್ಕೆ ವಿದ್ಯಾರ್ಥಿಯ ಎಡಗೈಗೆ ಶಿಕ್ಷಕ ಡ್ರಿಲ್​ ಮಷಿನ್ ದಿಂದ ಕೊರೆದು ಶಿಕ್ಷೆ ನೀಡಿದ್ದಾರೆ.

A casual picture
ಸಾಂದರ್ಭಿಕ ಚಿತ್ರ
author img

By

Published : Nov 27, 2022, 3:11 PM IST

ಕಾನ್ಪುರ(ಉತ್ತರಪ್ರದೇಶ) ಉತ್ತರಪ್ರದೇಶದ ಕಾನ್ಪುರ ಜಿಲ್ಲೆ ಶಾಲೆಯೊಂದರಲ್ಲಿ ವಿದ್ಯಾರ್ಥಿಗೆ 2ರ ಮಗ್ಗಿಯನ್ನು ಮರತಿದಿದ್ದಕ್ಕೆ ವಿದ್ಯಾರ್ಥಿಯ ಕೈಯನ್ನು ಶಿಕ್ಷಕ ಡ್ರಿಲ್ ಮಷಿನ್ ದಿಂದ ಕೊರೆದಿರುವ ಘಟನೆ ಜರುಗಿದೆ. 8 ವರ್ಷದ ವಿದ್ಯಾರ್ಥಿ ಈ ದೈಹಿಕ ಶಿಕ್ಷೆಗೆ ಒಳಗಾದವನು. ಈತನು ಜಿಲ್ಲೆಯ ಪ್ರೇಮ್ ನಗರ ಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದಾನೆ.

ಪೊಲೀಸರಿಗೆ ವಿದ್ಯಾರ್ಥಿ ನೀಡಿದ ದೂರಿನ ಪ್ರಕಾರ, "ಶಿಕ್ಷಕ ಪಾಂಡೆ ನನಗೆ 2ರ ಮಗ್ಗಿಯನ್ನು ಹೇಳುವಂತೆ ಒತ್ತಾಯಿಸಿದರು. ನಾನು ಹೇಳಲು ವಿಫಲವಾದ ಕಾರಣ, ಅವರು ನನ್ನ ಎಡಗೈಯನ್ನು ಕೊರೆದರು, ನನ್ನ ಪಕ್ಕದಲ್ಲಿ ನಿಂತಿದ್ದ ಸಹವಿದ್ಯಾರ್ಥಿ ಡ್ರಿಲ್ ಮಷಿನ್ ನ್ನು ಬಿಚ್ಚಿದನು. ತಕ್ಷಣ ಅದನ್ನು ಕೈಗೆತ್ತಿಕೊಂಡ ಶಿಕ್ಷಕರು ನನ್ನ ಎಡಗೈ ಮೇಲೆ ಇಟ್ಟು ಡ್ರೀಲ್ ಮಾಡಿದರು. ಈ ವೇಳೆ ನೋವು ತಡೆದುಕೊಳ್ಳಲಾಗದೇ ಬಹಳಷ್ಟು ಚೀರಿಕೊಂಡೆ ಎಡಗೈಗೆ ಗಾಯವಾಗಿದೆ ಎಂದು ತಿಳಿಸಿದ್ದಾನೆ. ಈ ಘಟನೆ ನಂತರ ವಿದ್ಯಾರ್ಥಿನಿಯನ್ನು ಶಾಲೆಯಿಂದ ಮನೆಗೆ ಕಳುಹಿಸಲಾಗಿದೆ. ಸಣ್ಣಪುಟ್ಟ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.

ಹುಡುಗನು 2 ರ ಮಗ್ಗಿ ಹೇಳಲು ವಿಫಲಗೊಂಡಿದ್ದಕ್ಕಾಗಿ ಖಾಸಗಿ ಸಂಸ್ಥೆಯಿಂದ ನೇಮಕಗೊಂಡ ಶಿಕ್ಷಕ ಪಾಂಡೆ, ಕೋಪಗೊಂಡು ಪವರ್ ಡ್ರಿಲ್ ಬಳಸಿ ವಿದ್ಯಾರ್ಥಿಯನ್ನು ಶಿಕ್ಷಿಸಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಇದರಿಂದಾಗಿ ಕ್ಯಾಂಪಸ್‌ನಲ್ಲಿ ಕೋಲಾಹಲ ಉಂಟಾಯಿತು. ಮಾಹಿತಿ ಪಡೆದ ಶಿಕ್ಷಣಾಧಿಕಾರಿ ಹಾಗೂ ಬ್ಲಾಕ್ ಶಿಕ್ಷಣಾಧಿಕಾರಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಿಎಸ್‌ಎ ಸುರ್ಜಿತ್ ಕುಮಾರ್ ಸಿಂಗ್ ಅವರು ಗಾಯಗೊಂಡ ಬಾಲಕನ ಕುಟುಂಬವನ್ನು ಭೇಟಿ ಮಾಡಿ, ಆರೋಪಿ ಬೋಧಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ನಿವೇಶನ ಜಾಗದ ವಿಚಾರವಾಗಿ ಗಲಾಟೆ.. ನಿವೃತ್ತ ಶಿಕ್ಷಕನ ಕೊಲೆಯಲ್ಲಿ ಅಂತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.