ETV Bharat / bharat

ಧಾರ್ಮಿಕ ಘೋಷಣೆ ಕೂಗುವಂತೆ ಒತ್ತಾಯಿಸಿ ವ್ಯಾಪಾರಿ ಮೇಲೆ ದುಷ್ಕರ್ಮಿಗಳ ಹಲ್ಲೆ: ವಿಡಿಯೋ ವೈರಲ್​ - ಉತ್ತರ ಪ್ರದೇಶದ ಮೊರಾದಾಬಾದ್​

ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ರೈಲಿನಲ್ಲಿ ವ್ಯಾಪಾರಿ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ಮಾಡಿರುವ ವಿಡಿಯೋ ವೈರಲ್​ ಆಗಿದೆ.

up-man-assaulted-forced-to-chant-religious-slogans-on-padmawat-express
ಧಾರ್ಮಿಕ ಘೋಷಣೆ ಕೂಗುವಂತೆ ಒತ್ತಾಯಿಸಿ ವ್ಯಾಪಾರಿ ಮೇಲೆ ದುಷ್ಕರ್ಮಿಗಳ ಹಲ್ಲೆ: ವಿಡಿಯೋ ವೈರಲ್​
author img

By

Published : Jan 14, 2023, 7:59 PM IST

ಧಾರ್ಮಿಕ ಘೋಷಣೆ ಕೂಗುವಂತೆ ಒತ್ತಾಯಿಸಿ ವ್ಯಾಪಾರಿ ಮೇಲೆ ದುಷ್ಕರ್ಮಿಗಳ ಹಲ್ಲೆ: ವಿಡಿಯೋ ವೈರಲ್​

ಮೊರಾದಾಬಾದ್ (ಉತ್ತರ ಪ್ರದೇಶ): ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿ ಹಿತ್ತಾಳೆ ವ್ಯಾಪಾರಿಯೊಬ್ಬರ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ, ಈ ಬಗ್ಗೆ ಹಲ್ಲೆಗೆ ಒಳಗಾದ ವ್ಯಕ್ತಿ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

ಅಸೀಮ್ ಹುಸೇನ್​ ಎಂಬಾತನೇ ಹಲ್ಲೆಗೆ ಒಳಗಾದ ವ್ಯಾಪಾರಿಯಾಗಿದ್ದು, ಈತ ಗುರುವಾರ ದೆಹಲಿ - ಪ್ರತಾಪ್‌ಗಢ ಪದ್ಮಾವತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಮೊರಾದಾಬಾದ್ ರೈಲ್ವೆ ನಿಲ್ದಾಣದ ಬಳಿ ರೈಲು ನಿಂತಾಗ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿ, ಆತನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಳ್ಳ ಎಂದು ಬಿಂಬಿಸುವ ಯತ್ನ: ರೈಲಿನಲ್ಲಿ ನಡೆದ ಘಟನೆ ಅಸೀಮ್ ಹುಸೇನ್ ಶುಕ್ರವಾರ ಸಂಜೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ’’ಗುರುವಾರ ರಾತ್ರಿ ದೆಹಲಿಯಿಂದ ಮೊರಾದಾಬಾದ್‌ಗೆ ಪದ್ಮಾವತ್ ಎಕ್ಸ್‌ಪ್ರೆಸ್ ರೈಲಿನ ಜನರಲ್​ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಈ ವೇಳೆ ರೈಲು ಹಾಪುರ್ ರೈಲ್ವೆ ನಿಲ್ದಾಣದಿಂದ ಹೊರಡುತ್ತಿದ್ದಂತೆಯೇ ನನ್ನನ್ನು ಅಪರಿಚಿತ ವ್ಯಕ್ತಿಗಳ ಗುಂಪು ಸುತ್ತುವರಿದು ದಾಳಿ ಮಾಡಿತು’’ ಎಂದು ಹುಸೇನ್​ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೇ, ಈ ದುಷ್ಕರ್ಮಿಗಳು ಗುಂಪು ನನ್ನನ್ನು ಕಳ್ಳ ಎಂದು ಬಿಂಬಿಸಲು ಪ್ರಯತ್ನಿಸಿ ಹಲ್ಲೆ ಮಾಡಲು ಶುರು ಮಾಡಿತು. ಇಷ್ಟೇ ಅಲ್ಲ, ನನ್ನ ಹಿಡಿದು ಎಳೆದಾಡಿ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ದುಷ್ಕರ್ಮಿಗಳು ಒತ್ತಾಯಿಸಿದರು ಎಂದು ಹಲ್ಲೆಗೊಳಗಾದ ವ್ಯಕ್ತಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ರೈಲು ಮೊರಾದಾಬಾದ್ ತಲುಪಿದಾಗ ನಾನು ಕೆಳಗಡೆ ಇಳಿಯಲೆಂದು ಹೊರಭಾಗದಲ್ಲಿ ಬಂದು ನಿಂತಿದ್ದೆ. ಆಗ ಈ ಆರೋಪಿಗಳು ನನ್ನನ್ನು ಬಲವಂತವಾಗಿ ಹೊರಗಡೆ ತಳ್ಳಿದರು ಎಂದೂ ಸಂತ್ರಸ್ತ ವ್ಯಾಪಾರಿ ಆರೋಪಿಸಿದ್ದಾರೆ.

ಕೇಸ್​ ದಾಖಲು, ಹೆಚ್ಚಿನ ತನಿಖೆ ಆರಂಭ: ’’ಸದ್ಯ ವ್ಯಾಪಾರಿ ಹುಸೇನ್ ಈ ಘಟನೆ ಬಗ್ಗೆ ರೈಲ್ವೆ ಪೊಲೀಸರ ಮೊರೆ ಹೋಗಿದ್ದು, ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ರೈಲಿನಲ್ಲಿ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಸಂಬಂಧ ದೂರುದಾರ ನೀಡಿದ ಮಾಹಿತಿ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಹಲ್ಲೆ, ಬೆದರಿಕೆ ಸೇರಿದಂತೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನೂ ನಡೆಸಲಾಗುತ್ತಿದೆ’’ ಎಂದು ರೈಲ್ವೆ ಪೊಲೀಸ್​ ಅಧಿಕಾರಿ ದೇವಿ ದಯಾಳ್​ ತಿಳಿಸಿದ್ದಾರೆ.

ಇಬ್ಬರು ವಶಕ್ಕೆ ಪಡೆದು ನಂತರ ಬಿಟ್ಟ ಪೊಲೀಸರು: ದೆಹಲಿ - ಪ್ರತಾಪ್‌ಗಢ ಪದ್ಮಾವತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವ್ಯಕ್ತಿಗೆ ಥಳಿಸುತ್ತಿರುವ ವಿಡಿಯೋ ಕೆಲ ಸಹ ಪ್ರಯಾಣಿಕರು ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ರೈಲ್ವೆ ಪೊಲೀಸರಿಗೆ ಟ್ಯಾಗ್​ ಮಾಡಿದ್ದರು. ಈ ವಿಡಿಯೋ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತರಾಗಿ, ರಾಯ್​ಬರೇಲಿಯ ಸತೀಶ್ ಕುಮಾರ್ ಮತ್ತು ಪ್ರತಾಪ್‌ಗಢದ ಸೂರಜ್ ಎಂಬ ಇಬ್ಬರನ್ನು ಗುರುತಿಸಿ ತಮ್ಮ ವಶಕ್ಕೆ ಪಡೆದಿದ್ದರು.

ಈ ವೇಳೆ ಹಲ್ಲೆಗೆ ಒಳಗಾದ ವ್ಯಕ್ತಿಯಿಂದ ಯಾವುದೇ ಅಧಿಕೃತವಾದ ದೂರು ಬಾರದ ಕಾರಣಕ್ಕೆ ಶಾಂತಿ ಭಂಗದ ಆರೋಪದಡಿ ಆರೋಪಿಗಳಿಗೆ ಎಚ್ಚರಿಕೆ ನೀಡಿ ಪೊಲೀಸರು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನ ಖಾಲಿ ಕಂಪಾರ್ಟ್‌ಮೆಂಟ್​ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟ ಕಾನ್ಸ್​​ಟೇಬಲ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.