ETV Bharat / bharat

ಬಾಂಗ್ಲಾದ ನಿರಾಶ್ರಿತ ಹಿಂದೂ ಬೆಂಗಾಳಿ ಕುಟುಂಬಗಳಿಗೆ ಕೃಷಿ ಭೂಮಿ, ನಿವೇಶನ ಕೊಟ್ಟ ಯುಪಿ ಸರ್ಕಾರ

1970ರಲ್ಲಿ ಆಗಿನ ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದಿಂದ ಹಿಂದೂ ಬೆಂಗಾಳಿ ಕುಟುಂಬಗಳು ವಲಸೆ ಬಂದಿದ್ದವು. ಇದರಲ್ಲಿ 63 ಕುಟುಂಬಗಳಿಗೆ ಕಾನ್ಪುರದ ರಸೂಲ್​ಬಾದ್​ನಲ್ಲಿ ಪ್ರತಿ ಎರಡು ಎಕರೆ ಕೃಷಿ ಭೂಮಿ ಮತ್ತು 200 ಚದರ ಗಜಗಳ ನಿವೇಶನ ಭೂಮಿಯನ್ನು ಯುಪಿ ಸರ್ಕಾರ ನೀಡಿದೆ..

ಹಿಂದೂ ಬೆಂಗಾಳಿ ಕುಟುಂಬಗಳಿಗೆ  ಹಕ್ಕು ಪತ್ರ ವಿತರಣೆ

author img

By

Published : Apr 19, 2022, 6:13 PM IST

ಲಖನೌ(ಉತ್ತರಪ್ರದೇಶ) : ಬಾಂಗ್ಲಾದೇಶದಿಂದ ವಲಸೆ ಬಂದ 63 ನಿರಾಶ್ರಿತ ಹಿಂದೂ ಬೆಂಗಾಳಿ ಕುಟಂಬಗಳಿಗೆ ಉತ್ತರಪ್ರದೇಶದ ಸರ್ಕಾರ ಕೃಷಿ ಭೂಮಿ ಮತ್ತು ವಾಸಕ್ಕೆ ನಿವೇಶನವನ್ನು ನೀಡಿದೆ. ಮಂಗಳವಾರ ಖುದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ 63 ಜನರಿಗೆ ನಿವೇಶನ ಹಂಚಿಕೆಯ ಹಕ್ಕು ಪತ್ರಗಳನ್ನು ವಿತರಿಸಿದ್ದಾರೆ.

1970ರಲ್ಲಿ ಆಗಿನ ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದಿಂದ ಹಿಂದೂ ಬೆಂಗಾಳಿ ಕುಟುಂಬಗಳು ವಲಸೆ ಬಂದಿದ್ದವು. ಇದರಲ್ಲಿ 63 ಕುಟುಂಬಗಳಿಗೆ ಕಾನ್ಪುರದ ರಸೂಲ್​ಬಾದ್​ನಲ್ಲಿ ಪ್ರತಿ ಎರಡು ಎಕರೆ ಕೃಷಿ ಭೂಮಿ ಮತ್ತು 200 ಚದರ ಗಜಗಳ ನಿವೇಶನ ಭೂಮಿ ನೀಡಲಾಗಿದೆ.

ಎಲ್ಲ ಸಹೋದರ-ಸಹೋದರಿಯರನ್ನು ನಾವು ಸ್ವಾಗತಿಸುತ್ತಿದ್ದೇವೆ. ಇವರಿಗಾಗಿ 130 ಹೆಕ್ಟೇರ್​ ಪ್ರದೇಶದಲ್ಲಿ ಕೃಷಿ ಮತ್ತು ವಾಸಕ್ಕೆ ಭೂಮಿ ಒದಗಿಸಲಾಗಿದೆ. ಅಲ್ಲದೇ, ಮನೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಆವಾಸ್​ ಯೋಜನೆಯಡಿ 1.20 ಲಕ್ಷ ರೂ. ನೆರವು ನೀಡಲಾಗುವುದು ಎಂದು ಸಿಎಂ ಯೋಗಿ ತಿಳಿಸಿದ್ದಾರೆ.

  • वर्ष 1970 में तत्कालीन पूर्वी पाकिस्तान से विस्थापित 63 हिंदू बंगाली परिवारों की दशकों की प्रतीक्षा आज समाप्त हो गई।

    उनके पुनर्वासन हेतु आज उन्हें कृषि भूमि व आवासीय पट्टा तथा मुख्यमंत्री आवास योजना के स्वीकृति-पत्र वितरित किए गए हैं।

    सभी का हृदय से अभिनंदन! pic.twitter.com/ROa7M34CTj

    — Yogi Adityanath (@myogiadityanath) April 19, 2022 " class="align-text-top noRightClick twitterSection" data=" ">

ಈ ಹಿಂದೆ 65 ನಿರಾಶ್ರಿತ ಕುಟುಂಬಗಳಿಗೆ ಹಸ್ತೀನಾಪುರದಲ್ಲಿ ಪುನರ್ವಸತಿ ಕಲ್ಪಿಸಿ, ಮದನ್​​ ಮಿಲ್​ನಲ್ಲಿ ಉದ್ಯೋಗ ನೀಡಲಾಗಿತ್ತು. ಆದರೆ, 1984ರಲ್ಲಿ ಮಿಲ್​ ಮುಚ್ಚಿತ್ತು. ಇದರಿಂದ 65 ಕುಟುಂಬಗಳು ಹಸ್ತೀನಾಪುರವನ್ನು ತೊರೆದಿದ್ದವು.

ಇದರಲ್ಲಿ ಇಬ್ಬರು ಮೃತ ಪಟ್ಟಿದ್ದು, 63 ಕುಟುಂಬಗಳಿಗೆ ಸರ್ಕಾರದಿಂದ ಈ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರಿಂದ ಒಟ್ಟಾರೆ 400 ಜನರಿಗೆ ಅನುಕೂಲವಾಗಲಿದೆ. ಜತೆಗೆ ನಿತ್ಯ ಜೀವನಕ್ಕಾಗಿ ನರೇಗಾ ಯೋಜನೆಯಡಿ ಉದ್ಯೋಗ ನೀಡಲಾಗುವುದು ಎಂದೂ ಸಿಎಂ ವಿವರಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಧಾರ್ಮಿಕ ಮೆರವಣಿಗೆಗಳಿಗೆ ಸರ್ಕಾರದ ಅನುಮತಿ ಕಡ್ಡಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.