ETV Bharat / bharat

ಮಗಳೆದುರು ಮಾನ ಕಳ್ಕೊಂಡ ತಂದೆ! ತಡೆದ ಮಗನಿಗೆ ಗುಂಡೇಟು, 8 KM ದೂರದ ಆಸ್ಪತ್ರೆಗೆ ರಾತ್ರಿ ನಡೆದೇ ಸಾಗಿದ ಅಣ್ಣ-ತಂಗಿ! - ಅತ್ಯಾಚಾರ ತಡೆಯಲು ಮುಂದಾದ ಮಗ ಮೇಲೆ ಗುಂಡಿನ ದಾಳಿ

UP Crime- Father rape attempt on daughter: ಒಡಹುಟ್ಟಿದ ಸಹೋದರಿಯ ಮೇಲೆ ಅತ್ಯಾಚಾರ ಯತ್ನ ತಡೆಯಲು ಬಂದ ಮಗನ ಮೇಲೆ ಪಾಪಿ ತಂದೆಯೋರ್ವ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ರವಿವಾರ ರಾತ್ರಿ ನಡೆದಿದೆ.

UP crime: Man shoots son after being prevented from raping daughter in Ayodhya, absconds
UP Crime: ಮಗಳ ಮೇಲೆ ಬಲತ್ಕಾರಕ್ಕೆ ಯತ್ನಿಸಿದ ಪಾಪಿ ತಂದೆ... ತಡೆಯಲು ಮುಂದಾದ ಮಗ ಮೇಲೆ ಗುಂಡು ಹಾರಿಸಿದ ಅಪ್ಪ!
author img

By

Published : Aug 8, 2023, 9:22 PM IST

ಅಯೋಧ್ಯೆ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ನಾಗರಿಕ ಸಾಮಾಜ ತಲೆ ತಗ್ಗಿಸುವ ಹಾಗೂ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ತಂದೆಯೋರ್ವ ಸ್ವಂತ ಮಗಳ ಮೇಲೆಯೇ ಬಲಾತ್ಕಾರಕ್ಕೆ ಯತ್ನಿಸಿದ್ದು, ಇದನ್ನು ತಡೆಯಲು ಮುಂದಾದ 17 ವರ್ಷದ ಮಗನ ಮೇಲೆ ಗುಂಡು ಹಾರಿಸಿದ್ದಾನೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಸಾಯಿಗಂಜ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಆರೋಪಿಯ ಪತ್ನಿ ತುಂಬಾ ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾರೆ. ತನ್ನ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗನೊಂದಿಗೆ ವಾಸವಾಗಿದ್ದ. ರವಿವಾರ ರಾತ್ರಿ ಹಿರಿಮಗಳ ಮೇಲೆ ಪಾಪಿ ತಂದೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಎಚ್ಚರಗೊಂಡ ಮಗ ತಂದೆಯನ್ನು ತಡೆಯಲು ಮುಂದಾಗಿದ್ದಾನೆ. ತಂದೆ ಹಾಗೂ ಮಗ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಮಗನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ದವಡೆಗೆ ತಲುಗಿದ್ದು, ತೀವ್ರ ರಕ್ತಸ್ರಾವವಾಗಿದೆ. ನಂತರ ಆರೋಪಿ ಸ್ಥಳದಿಂದ ಓಡಿ ಹೋಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾತ್ರಿ 8 ಕಿ.ಮೀ ನಡೆದುಕೊಂಡೇ ಆಸ್ಪತ್ರೆಗೆ ತಲುಪಿದ ಸೋದರ-ಸೋದರಿ: ಗುಂಡೇಟಿನ ಪರಿಣಾಮ ತೀವ್ರ ರಕ್ತಸ್ರಾವ ಆಗಿರುವುದರಿಂದ ಸಹೋದರಿ, ಬಾಲಕನ ಮುಖಕ್ಕೆ ಬಿಗಿಯಾಗಿ ಟವೆಲ್​​ ಕಟ್ಟಿದ್ದಾಳೆ. ರಾತ್ರಿಯೇ ಸರಿಸುಮಾರು 8 ಕಿಲೋ ಮೀಟರ್​ ದೂರ ನಡೆದುಕೊಂಡೇ ಸಾಗಿದ ಇಬ್ಬರು ಮಾಯಾಬಜಾರ್​ ಪ್ರಾಥಮಿಕ ಆರೋಗ್ಯ ಕೇಂದ್ರ ತಲುಪಿದ್ದಾರೆ. ಗಾಯಾಳುವಿನ ಪರಿಸ್ಥಿತಿ ಗಂಭೀರವಾಗಿದ್ದರಿಂದ ಅಲ್ಲಿಂದ ದರ್ಶನ್​ ನಗರದ ಮೆಡಿಕಲ್​ ಕಾಲೇಜಿಗೆ ರವಾನಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ರಾಜಧಾನಿ ಲಖನೌದ ಟ್ರಾಮಾ ಸೆಂಟರ್​ಗೆ ಕಳುಹಿಸಲಾಗಿದೆ. ಇದೀಗ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಅಯೋಧ್ಯೆ ಗ್ರಾಮಾಂತರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅತುಲ್​ ಸೋಂಕರ್​ ಪ್ರತಿಕ್ರಿಯಿಸಿ, ''ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿ ತಂದೆ ತಲೆಮರೆಸಿಕೊಂಡಿದ್ದು, ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಗಾಯಾಳು ಬಾಲಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ'' ಎಂದರು.

ಬಾಲಕಿ ಮೇಲೆ ಅತ್ಯಾಚಾರ - ಮೂವರು ಸ್ನೇಹಿತೆಯರು ಸೇರಿ ನಾಲ್ವರ ಮೇಲೆ ಕೇಸ್: ಮತ್ತೊಂದೆಡೆ, ಪಿಲಿಭಿತ್ ಜಿಲ್ಲೆಯಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ವರದಿಯಾಗಿದೆ. ಓರ್ವ ಬಾಲಕ ಹಾಗೂ ಮೂವರು ಬಾಲಕಿರ ಮೇಲೆ ಪ್ರಕರಣ ದಾಖಲಾಗಿದೆ.

ಜೇಹನಾಬಾದ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಜುಲೈ 27ರಂದು ಈ ಘಟನೆ ನಡೆದಿದೆ. ''ಆಗಸ್ಟ್​ 6ರಂದು ನೊಂದ ಬಾಲಕಿ ತನ್ನ ತಂದೆಗೆ ಘಟನೆಯ ಮಾಹಿತಿ ನೀಡಿದ್ದಾಳೆ. ತಂದೆ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ'' ಎಂದು ಸ್ಟೇಷನ್​ ಹೌಸ್​ ಆಫೀಸರ್​ (ಎಸ್​ಹೆಚ್ಒ​​) ಉಮೇಶ್ ಕುಮಾರ್​ ಸೋಲಂಕಿ ತಿಳಿಸಿದ್ದಾರೆ.

''ಸಂತ್ರಸ್ತೆ ಹಾಗೂ ಆರೋಪಿತ ನಾಲ್ವರು ಒಂದೇ ಗ್ರಾಮಕ್ಕೆ ಸೇರಿದ್ದಾರೆ. ಮೂವರು ಬಾಲಕಿಯರು ಸಂತ್ರಸ್ತೆಯ ಸ್ನೇಹಿತರಾಗಿದ್ದು, ಅವರೇ ಆಕೆಯನ್ನು ಅತ್ಯಾಚಾರಕ್ಕೆ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು ಎಂದು ದೂರ ನೀಡಲಾಗಿದೆ. ಇದರ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಸದ್ಯಕ್ಕೆ ಯಾರನ್ನೂ ಬಂಧಿಸಲಿಲ್ಲ'' ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಅಪರಾಧಿಗೆ 3 ವರ್ಷ ಶಿಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.