ETV Bharat / bharat

ಹೆಣ್ಣು ಮಕ್ಕಳ ಪಾದ ತೊಳೆದು ಕನ್ಯಾ ಪೂಜೆ ನೆರವೇರಿಸಿದ ಸಿಎಂ ಯೋಗಿ

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಂಬತ್ತು ಹೆಣ್ಣು ಮಕ್ಕಳ ಪಾದಗಳನ್ನು ತೊಳೆಯುವ ಮೂಲಕ ಕನ್ಯಾ ಪೂಜೆ ನೆರವೇರಿಸಿದರು.

up-cm-yogi-adityanath-performs-kanya-pujan-ritual-in-gorakhpur
ಹೆಣ್ಣು ಮಕ್ಕಳ ಪಾದ ತೊಳೆದು ಕನ್ಯಾ ಪೂಜೆ ನೆರವೇರಿಸಿದ ಸಿಎಂ ಯೋಗಿ
author img

By

Published : Mar 30, 2023, 9:02 PM IST

ಗೋರಖ್‌ಪುರ (ಉತ್ತರ ಪ್ರದೇಶ): ಚೈತ್ರ ನವರಾತ್ರಿಯ ಒಂಬತ್ತನೇ ದಿನವಾದ ರಾಮ ನವಮಿಯಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕನ್ಯಾ ಪೂಜೆ ನೆರವೇರಿಸಿ ಮಾತೃ ಶಕ್ತಿಗೆ ಪೂಜೆ ಸಲ್ಲಿಸಿದರು. ಗೋರಖ್‌ಪುರದಲ್ಲಿ ಗುರುವಾರ ಸಿಎಂ ಯೋಗಿ ಒಂಬತ್ತು ಹೆಣ್ಣು ಮಕ್ಕಳು ಪಾದಗಳನ್ನು ತೊಳೆಯುವ ಮೂಲಕ ಇದನ್ನು ಆಚರಿಸಿದರು.

ಒಂಬತ್ತು ಹೆಣ್ಣು ಮಕ್ಕಳನ್ನು ಪೂಜಿಸುವುದು ದುರ್ಗಾ ಮಾತೆಯ ಒಂಬತ್ತು ಅಭಿವ್ಯಕ್ತಿಗಳನ್ನು ಸಂಕೇತಿಸುತ್ತದೆ. ಆಚರಣೆಯ ಭಾಗವಾಗಿ ಸಿಎಂ ಯೋಗಿ ಅವರ ಪಾದಗಳನ್ನು ತೊಳೆದು, ಅವರ ಹಣೆಗೆ ತಿಲಕವನ್ನು ಹಚ್ಚಿದರು. ಮಂತ್ರಗಳ ಪಠಣಗಳ ನಡುವೆ ತಮ್ಮ ಆರತಿ ಮಾಡಲಾಯಿತು. ಜೊತೆಗೆ ಹೆಣ್ಣು ಮಕ್ಕಳನ್ನು ಲೋಹದ ತಟ್ಟೆಯಲ್ಲಿ ನಿಲ್ಲಿಸಿ ಪೂಜಿಸಲಾಯಿತು.

ಗೋರಖನಾಥ ದೇಗುಲದ ಅನ್ನ ಕ್ಷೇತ್ರದಲ್ಲಿ (ನವೀನ್ ಭಂಡಾರ ಭವನ) ಆಯೋಜಿಸಿದ್ದ ಕನ್ಯಾ ಪೂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಬಾಲಕಿಯರಿಗೆ ಅನ್ನಸಂತರ್ಪಣೆ ಮಾಡಿ ದಕ್ಷಿಣೆ ಮತ್ತು ಉಡುಗೊರೆಗಳನ್ನು ನೀಡಿದರು. ಸಂಪ್ರದಾಯದಂತೆ ಮುಖ್ಯಮಂತ್ರಿಗಳು ಬಟುಕ್ ಪೂಜೆಯನ್ನೂ ನೆರವೇರಿಸಿದರು. ಬಟುಕ್ ಕಾಲಭೈರವನ ದ್ಯೋತಕವಾಗಿದೆ.

300 ಬಾಲಕಿಯರಿಗೆ ಆರತಿ: ಮತ್ತೊಂದೆಡೆ, ಈ ಒಂಬತ್ತು ಬಾಲಕಿಯರ ಪೂಜಿಸಿದ ನಂತರ ಸಿಎಂ, ಸುಮಾರು 300 ಬಾಲಕಿಯರಿಗೂ ಆರತಿ ಬೆಳಗಲಾಯಿತು. ದೇವಾಲಯದ ಪ್ರಧಾನ ಅರ್ಚಕ ಯೋಗಿ ಕಮಲ್​ನಾಥ್ ಅವರು ಎಲ್ಲರಿಗೂ ತಿಲಕವನ್ನು ಇಟ್ಟರು. ಚುಂರಿ, ಗಂಛ ಜೊತೆಗೆ ಎಲ್ಲರಿಗೂ ದಕ್ಷಿಣೆಯನ್ನೂ ನೀಡಲಾಯಿತು. ಇಷ್ಟೇ ಅಲ್ಲ, ಪೂಜೆಯ ನಂತರ ತಾಜಾ ಆಹಾರವನ್ನು ಬಾಲಕಿಯರಿಗೆ ಬಡಿಸಲಾಯಿತು.

ಇದಕ್ಕೂ ಮುನ್ನ ದೇವಸ್ಥಾನದ ಶಕ್ತಿಪೀಠದಲ್ಲಿ ಮಾತೆ ಸಿದ್ಧಿದಾತ್ರಿಗೆ ಸಿಎಂ ಯೋಗಿ ಪೂಜೆ ಸಲ್ಲಿಸಿದರು. ರಾಮ ನವಮಿಯಂದು ''ಕನ್ಯಾ ಪೂಜೆ'' ಮಾಡುವ ಮೊದಲು ಅವರು, ಗೋರಖನಾಥ ದೇಗುಲದ ಮಹಂತ್ ದಿಗ್ವಿಜಯನಾಥ್ ಸ್ಮೃತಿ ಆಡಿಟೋರಿಯಂ ಎದುರು ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ರಾಜ್ಯದ ಜನತೆಗೆ ಚೈತ್ರ ನವರಾತ್ರಿ, ಮಹಾನವಮಿ ಮತ್ತು ಭಗವಾನ್ ರಾಮನ ಜನ್ಮದಿನದ ಶುಭಾಶಯ ಕೋರಿದರು.

ಧರ್ಮ ಮತ್ತು ಕರ್ತವ್ಯ ಪ್ರಜ್ಞೆ: ಇದೇ ವೇಳೆ ಧರ್ಮವನ್ನು ಕೇವಲ ಪೂಜಾ ವಿಧಾನವೆಂದು ಪರಿಗಣಿಸಬಾರದು. ಧರ್ಮವು ಕರ್ತವ್ಯ ಪ್ರಜ್ಞೆಯನ್ನು ನೀಡುತ್ತದೆ. ಸದ್ಗುಣ, ಕರ್ತವ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ನಮ್ಮನ್ನು ಸಂಪರ್ಕಿಸುವ ಮೂಲಕ, ಧರ್ಮವು ಸರಿಯಾದ ಮಾರ್ಗದಲ್ಲಿ ನಡೆಸುತ್ತದೆ. ಈ ಮೂಲಕ ಸಕಾರಾತ್ಮಕ ಮತ್ತು ಸೃಜನಶೀಲ ಪ್ರವೃತ್ತಿಯತ್ತ ನಮ್ಮನ್ನು ಕರೆದೊಯ್ಯುತ್ತದೆ ಎಂದು ಸಿಎಂ ಯೋಗಿ ತಿಳಿಸಿದರು.

ಇದೇ ವೇಳೆ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿದ ಸಿಎಂ, ವಸತಿ ಸಮಸ್ಯೆ ಇರುವವರಿಗೆ ವಸತಿ ಕಲ್ಪಿಸಲಾಗುತ್ತದೆ. ಯಾವುದೇ ಗ್ರಾಮಕ್ಕೆ ಸಂಪರ್ಕ ಸಮಸ್ಯೆಗಳಿದ್ದರೆ ಅಲ್ಲಿ ಅಗತ್ಯಕ್ಕೆ ಅನುಗುಣವಾಗಿ ರಸ್ತೆಗಳನ್ನು ದುರಸ್ತಿ ಮಾಡಿ ನಿರ್ಮಿಸಲಾಗುವುದು. ಇನ್ಮುಂದೆ ಜನರಿಗೆ ವಿದ್ಯುತ್ ಬಿಲ್‌ಗಳು ಹೊರೆಯಾಗುವುದಿಲ್ಲ. ಏಕೆಂದರೆ, ದರ ಪರಿಷ್ಕರಿಸಿದ ನಂತರ ಕಂತುಗಳಲ್ಲಿ ಪಾವತಿಯ ಆಯ್ಕೆಯು ಲಭ್ಯವಿರುತ್ತದೆ. ಉತ್ತರ ಪ್ರದೇಶದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ತಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಜನತಾ ದರ್ಶನದಲ್ಲಿ ಹಾಜರಿದ್ದ ಎಲ್ಲರಿಗೂ ಭರವಸೆ ನೀಡಿದರು.

ಇದನ್ನೂ ಓದಿ: ಸೂರತ್‌ನಲ್ಲಿದೆ ವಜ್ರದಿಂದ ಅಲಂಕರಿಸಿದ 19 ಕೆಜಿ ಚಿನ್ನದ ರಾಮಾಯಣ ಪುಸ್ತಕ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.