ನವದೆಹಲಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರನ್ನು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭಾ ನಾಯಕರನ್ನಾಗಿ ಮರು ನೇಮಕ ಮಾಡಲಾಗಿದೆ. ಈ ಸಂಬಂಧ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಮಾಹಿತಿ ನೀಡಿದರು.
2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಿಯೂಷ್ ಗೋಯಲ್ ಅವರನ್ನು ರಾಜ್ಯಸಭೆಯ ನಾಯಕರನ್ನಾಗಿ ನೇಮಿಸಿದ್ದರು. ಬಳಿಕ ಗೋಯಲ್ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಇದೇ ಏಪ್ರಿಲ್ನಲ್ಲಿ ಕೊನೆಗೊಂಡಿತ್ತು. ಇದರಿಂದ ಸದನದ ನಾಯಕ ಸ್ಥಾನವೂ ಖಾಲಿಯಾಗಿತ್ತು.
ಜುಲೈ 8 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಪಿಯೂಷ್ ಗೋಯಲ್ ಅವರು ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೀಗಾಗಿ ಅವರನ್ನು ಸದನದ ನಾಯಕರನ್ನಾಗಿ ಮರು ನೇಮಕಗೊಳಿಸಲಾಗಿದೆ.
ಓದಿ: ಸಂಸತ್ ಅಧಿವೇಶನ: ಅಗ್ನಿಪಥ್ ಹಿಂಪಡೆಯುವಂತೆ ಆಗ್ರಹಿಸಲು ಕಾಂಗ್ರೆಸ್ ಸಿದ್ಧತೆ