ETV Bharat / bharat

ಮುಂಬೈಗೆ ಆಗಮಿಸಲಿರುವ ಚಾಣಕ್ಯ; ಸಂಜೆ ಬಿಜೆಪಿ ಹಿರಿಯ ನಾಯಕರ ಜೊತೆ ಶಾ ಮಹತ್ವದ ಸಭೆ - ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೆಲಾರ್

ಇಂದು ಸಂಜೆ ಮುಂಬೈಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ಧಾರೆ.

amith shah
ಅಮಿತ್​ ಶಾ
author img

By

Published : Apr 15, 2023, 5:35 PM IST

ಮುಂಬೈ: ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿನಿಂದ ಎರಡು ದಿನಗಳ ಮುಂಬೈ ಪ್ರವಾಸ ಮಾಡಲಿದ್ದು ಇಂದು ಸಂಜೆ ಮುಂಬೈಗೆ ಆಗಮಿಸಿಲಿದ್ದಾರೆ. ಮುಂಬೈನಲ್ಲಿ ಅಮಿತ್ ಶಾ ಅವರನ್ನು ಸ್ವಾಗತಿಸಲು ಬಿಜೆಪಿ ಸಕಲ ಸಿದ್ದತೆಯನ್ನು ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ ಬಿಜೆಪಿಯ ಸಭೆಯ ಅಧ್ಯಕ್ಷತೆ ವಹಿಸಲಿರುವ ಅಮಿತ್ ಶಾ ಅವರು ಖಾರ್ಘರ್‌ನಲ್ಲಿ ಹಿರಿಯ ಸಮಾಜ ಸೇವಕ ನಿರುಪಂಕರ್ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಗೌರವವಾದ ಮಹಾರಾಷ್ಟ್ರ ಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಅಮಿತ್​ ಶಾ ಭೇಟಿ ಹಿನ್ನೆಲೆ ಭದ್ರತೆಯೊಂದಿಗೆ ಅವರ ಆಗಮನದಿಂದ ಹಿಡಿದು ಕಾರ್ಯಕ್ರಮದವರೆಗು ಅಚ್ಚುಕಟ್ಟಾಗಿ ಬಿಜೆಪಿ ಮುಖಂಡರು ತಯಾರು ನಡೆಸಿದ್ದಾರೆ. ಶಾ ಅವರನ್ನು ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೆಲಾರ್ ಮತ್ತು ಪಕ್ಷದ 15,000 ಕಾರ್ಯಕರ್ತರು ವಿಮಾನ ನಿಲ್ದಾಣದಿಂದ ಸಹ್ಯಾದ್ರಿ ಅತಿಥಿ ಗೃಹಕ್ಕೆ ಕರೆದೊಯ್ಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ, ಅಲ್ಲಿ ಅವರು ರಾತ್ರಿ ತಂಗಲಿದ್ದಾರೆ.

ನಾಳೆ ಖಾರ್ಘರ್‌ನಲ್ಲಿ ಹಿರಿಯ ಸಮಾಜ ಸೇವಕ ನಿರುಪಂಕರ್ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಇನ್ನು 2024ರ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಪರಿಗಣಿಸಲಾಗಿರುವ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ವಿಧಾನಸಭೆ ಚುನಾವಣೆಗೆ ಮುನ್ನ ಅಮಿತ್ ಶಾ ಮಹಾರಾಷ್ಟ್ರಕ್ಕೆ ಭೇಟಿ ನೀಡಿತ್ತಿರುವುದು 2024 ರ ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಕಂಡು ಬರುತ್ತಿದೆ.

ಬಿಜೆಪಿ ಹಿರಿಯ ನಾಯಕರ ಮಹತ್ವದ ಸಭೆ: ಮಹಾವಿಕಾಸ್ ಅಘಾಡಿ, ಕಾಂಗ್ರೆಸ್ ನಡುವಿನ ಮೈತ್ರಿ, ಶಿವಸೇನೆಯ ಉದ್ಧವ್ ಠಾಕ್ರೆ ಬಣ ಮತ್ತು ಎನ್‌ಸಿಪಿ ನಡೆಸಿದ 'ವಜ್ರಮುತ್' ಸಭೆಗಳ ನಡುವೆ ಶಾ ಅವರ ಭೇಟಿ ಮಹತ್ವ ಪಡೆದುಕೊಂಡಿದೆ. ಸಹ್ಯಾದ್ರಿ ಅತಿಥಿ ಗೃಹದಲ್ಲಿ ಇಂದು ಸಂಜೆ ರಾಜ್ಯದ ಬಿಜೆಪಿ ಹಿರಿಯ ನಾಯಕರ ಮಹತ್ವದ ಸಭೆಯ ಅಧ್ಯಕ್ಷತೆಯನ್ನು ಶಾ ವಹಿಸಲಿದ್ದಾರೆ.

ಮುಂಬರುವ ವಿಧಾನಸಭೆ, ಲೋಕಸಭೆ ಮತ್ತು ಮುನ್ಸಿಪಲ್ ಚುನಾವಣೆಗಳ ಹಿನ್ನೆಲೆಯಲ್ಲಿ ಮಹಾವಿಕಾಸ್ ಅಘಾಡಿ ಇತರ ರಾಜಕೀಯ ಪಕ್ಷಗಳೊಂದಿಗೆ ರಂಗಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದು, ಅಮಿತ್ ಶಾ ಅವರ ಮುಂಬೈ ಭೇಟಿಯು ಪಕ್ಷಕ್ಕೆ ಉತ್ತೇಜನ ನೀಡಬಹುದು ಎಂದು ಮಹಾರಾಷ್ಟ್ರ ಬಿಜೆಪಿ ನಿರೀಕ್ಷಿಸುತ್ತಿದೆ. ಮಹಾರಾಷ್ಟ್ರದಲ್ಲಿ ಈ ಬಾರಿ 45 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ.

ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳ ಪೈಕಿ 6 ಸ್ಥಾನಗಳು ಮುಂಬೈ ಒಂದರಲ್ಲೇ ಇವೆ. ಅಮಿತ್​ ಶಾ ಮುಂಬೈ ಭೇಟಿ ವಿಚಾರಕ್ಕೆ ಸಂಸದ ಸಂಜಯ್ ರಾವುತ್ ಅವರು ವ್ಯಂಗ್ಯವಾಡಿದ್ದಾರೆ. ಎಂವಿಎ ಘಟಕಗಳ ನಡುವಿನ ಒಗ್ಗಟ್ಟಿನ ಬಗ್ಗೆ ಬಿಜೆಪಿ ಹತಾಶವಾಗಿದೆ ಎಂದು ಹೇಳಿದ್ದಾರೆ. ಹಾಗೆ ಮುಖ್ಯವಾಗಿ ವಿಪಕ್ಷಗಳ ಒಗ್ಗಟ್ಟಿನ ಕುರಿತು ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮಾತೋಶ್ರೀಗೆ ಭೇಟಿ ನೀಡುತ್ತಿದ್ದಾರೆ. ಒಟ್ಟು ಕಳೆದ ಮೂರು ತಿಂಗಳಲ್ಲಿ ಶಾ ಮಹಾರಾಷ್ಟ್ರಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ಈ ಬಾರಿಯ ಭೇಟಿಯು 2 ದಿನಗಳ ಕಾಲ ಇರುವುದರಿಂದ ಅವರ ಮುಂಬೈ ಭೇಟಿಗಾಗಿ ಕಟ್ಟುನಿಟ್ಟಾದ ವಿಮಾನ ಮತ್ತು ಸಂಚಾರ ನಿರ್ಬಂಧಗಳು ಜಾರಿಯಲ್ಲಿವೆ.

ಇದನ್ನೂ ಓದಿ: ಹವಾಮಾನ ವೈಪರೀತ್ಯ: ಸಾಮೂಹಿಕ ಆಂದೋಲನಕ್ಕೆ ಪ್ರಧಾನಿ ಮೋದಿ ಕರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.