1.ಎಲ್ಲರನ್ನು ಒಳಗೊಂಡ ಸಮಗ್ರ ಬೆಳವಣಿಗೆ, ರೈತರು, ಮಹಿಳೆಯರು, ಎಸ್ಸಿ/ ಎಸ್ಟಿ, ದಿವ್ಯಾಂಗರು, ಹಿಂದುಳಿದವರು ಸೇರಿ ವಂಚಿತರಿಗೆ ಮೊದಲ ಆದ್ಯತೆ
2. ಕೃಷಿಗೆ ಡಿಜಿಟಲ್ ಮೂಲ ಸೌಕರ್ಯ ಅಭಿವೃದ್ಧಿ, ರೈತರಿಗೆ ಬೆಳೆ ಯೋಜನೆಗೆ ಸೂಕ್ತ ಮಾಹಿತಿ ನೀಡುವುದು, ಸಾಲ ಸೌಲಭ್ಯ ಡಿಜಿಟಲೀಕರಣ
3.ಕೃಷಿ ಆಧಾರಿತ ತಂತ್ರಜ್ಞಾನ ಸಂಸ್ಥೆಗಳಿಗೆ ವಿಶೇಷ ಸಹಾಯ, ಕೃಷಿ ಆಧಾರಿತ ಸಾರ್ಟ್ ಅಪ್ಗಳಿಗೆ ಪ್ರತ್ಯೇಕ ಅನುದಾನ, ರೈತರಿಗೆ ಸಮಸ್ಯೆ ಪರಿಹರಿಸಲು ಕೆಲಸ ಮಾಡುವ ಸಾರ್ಟ್ಅಪ್ಗಳಿಗೆ ನೆರವು
4. ಹಸಿರು ಅಭಿವೃದ್ಧಿಗೆ ಅತಿಹೆಚ್ಚಿನ ಆದ್ಯತೆ, ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು.
5. ಪ್ರವಾಸೋದ್ಯಮದಲ್ಲಿ ಹೆಚ್ಚಿನ ಉದ್ಯೋಗಾವಕಾಶ, ಪ್ರವಾಸೋದ್ಯಮದ ಪ್ರೋತ್ಸಾಹದ ಸರ್ಕಾರದ ಪ್ರಮುಖ ಆದ್ಯತೆ
6.400 ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯ, ಈ ರೈಲುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ನಿರ್ಮಿಸಲಾಗುವುದು.
7.ಕೃಷಿಕರಿಗೆ ಸಾಲ ಯೋಜನೆಯನ್ನು 20 ಲಕ್ಷ ಕೋಟಿಯವರೆಗೆ ವಿಸ್ತರಿಸಲಾಗುವುದು. ಹೈನುಗಾರಿಕೆ, ಪಶು ಸಂಗೋಪನೆ ಹಾಗೂ ಮೀನುಗಾರಿಕೆಗೆ ಹೆಚ್ಚಿನ ಅನುದಾನ. ಕೃಷಿಕರ ಆದಾಯ ಹೆಚ್ಚಿುವಂತ ಯೋಜನೆಗಳಿಗೆ ಮೊದಲ ಆದ್ಯತೆ. ವೈದ್ಯಕೀಯ ಕಾಲೇಜು ಹಾಗೂ ಸಂಶೋಧನೆಗೆ ಹೆಚ್ಚಿನ ಒತ್ತು. ವೈದ್ಯಕೀಯ ಸಲಕರಣೆಗಳಿಗೂ ಹೆಚ್ಚಿನ ಅನುದಾನ. 157 ಹೊಸ ನರ್ಸಿಂಗ್ ಕಾಲೇಜು. 2014 ರಿಂದ ಸ್ಥಾಪಿತಗೊಂಡ ಹೊಸ ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜು ಸ್ಥಾಪನೆ ಮಾಡುವುದಾಗಿ ಸರ್ಕಾರದ ಘೋಷಣೆ.