ETV Bharat / bharat

ಮಗುವಿನ ಮೃತದೇಹ ಕೈಚೀಲದಲ್ಲಿ ಇಟ್ಟುಕೊಂಡು ಬಸ್​ನಲ್ಲಿ ಪ್ರಯಾಣಿಸಿದ ತಂದೆ...!

ಆಂಬ್ಯುಲೆನ್ಸ್​ಗೆ ಪಾವತಿಸಲು ಹಣವಿಲ್ಲ ಕಾರಣಕ್ಕೆ ಜಬಲ್‌ಪುರದ ವ್ಯಕ್ತಿಯೊಬ್ಬರು ತಮ್ಮ ನವಜಾತ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಇಟ್ಟುಕೊಂಡು ಬಸ್‌ನಲ್ಲಿ ಪ್ರಯಾಣಿಸಿದ ಘಟನೆ ನಡೆದಿದೆ.

man travels in bus with newborns body in bag
ಮಗುವಿನ ಮೃತದೇಹವನ್ನು ಕೈಚೀಲದಲ್ಲಿ ಇಟ್ಟುಕೊಂಡು ಬಸ್​ನಲ್ಲಿ ಪ್ರಯಾಣಿಸಿದ ತಂದೆ...!
author img

By

Published : Jun 17, 2023, 6:04 AM IST

ಜಬಲ್‌ಪುರ (ಮಧ್ಯ ಪ್ರದೇಶ): ಮಧ್ಯ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಆರೋಗ್ಯ ಮೂಲ ಸೌಕರ್ಯವಿಲ್ಲದ ಕಠೋರ ಸ್ಥಿತಿ ಬಿಂಬಿಸುವ ಘಟನೆ ಬಹಿರಂಗವಾಗಿದೆ. ಹೌದು, ಮಧ್ಯಪ್ರದೇಶದ ಜಬಲ್‌ಪುರದ ದಿಂಡೋರಿಯ ಬಡ ವ್ಯಕ್ತಿಯೊಬ್ಬರು, ಜಬಲ್‌ಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್‌ಗೆ ಪಾವತಿಸಲು ಸಾಧ್ಯವಾಗದ ಕಾರಣ, ತನ್ನ ನವಜಾತ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಇಟ್ಟುಕೊಂಡು ಬಸ್‌ನಲ್ಲಿ ಪ್ರಯಾಣಿಸಿದ್ದಾರೆ.

ದಿಂಡೋರಿಯ ಗ್ರಾಮದ ನಿವಾಸಿಯಾಗಿರುವ ವ್ಯಕ್ತಿಯ ಪತ್ನಿ ಜಮಾನಿ ಬಾಯಿ ಹೆರಿಗೆ ನೋವಿನ ಹಿನ್ನೆಲೆಯಲ್ಲಿ ದಿಂಡೋರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆಯ ನಂತರ, ಮಗುವಿನ ಆರೋಗ್ಯದ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ಮಗುವನ್ನು ಜಬಲ್‌ಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನವಜಾಶಿಶು ಮಗು ಸಾವನ್ನಪ್ಪಿದೆ.

ದಿಂಡೋರಿಯ ಗ್ರಾಮಕ್ಕೆ ತಂದೆ ತನ್ನ ಮಗುವಿನ ಶವವನ್ನು ಮನೆಗೆ ಸಾಗಿಸಲು ಆಂಬ್ಯುಲೆನ್ಸ್ ಅಥವಾ ಶವ ವಾಹನವನ್ನು ವ್ಯವಸ್ಥೆ ಮಾಡಲು ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಿದರು. ಆದರೆ, ಆಸ್ಪತ್ರೆಯ ಅಧಿಕಾರಿಗಳು ಆ ವ್ಯಕ್ತಿಗೆ ಯಾವುದೇ ಸಹಾಯ ಮಾಡಿಲ್ಲ ಎನ್ನಲಾಗಿದೆ. ಖಾಸಗಿ ಆಂಬ್ಯುಲೆನ್ಸ್ ಅಥವಾ ಶವ ವಾಹನವನ್ನು ಬಾಡಿಗೆಗೆ ಪಡೆಯಲು ಸಾಧ್ಯವಾಗದ ಕಾರಣ, ದಂಪತಿ ಶಿಶುವಿನ ಮೃತ ದೇಹವನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ನಿರ್ಧರಿಸಿದರು.

ಇದನ್ನೂ ಓದಿ: IPS officer sentenced: ಯುವ ಮಹಿಳಾ IPS ಅಧಿಕಾರಿಗೆ ಲೈಂಗಿಕ ಕಿರುಕುಳ: ತಮಿಳುನಾಡಿನ ಮಾಜಿ DGPಗೆ ಮೂರು ವರ್ಷ ಜೈಲು ಶಿಕ್ಷೆ

ಮಗುವಿನ ಶವದ ಸಮೇತ ಬಸ್ಸಿನಲ್ಲೇ 150 ಕಿ.ಮೀ. ಕ್ರಮಿಸಿದ ದಂಪತಿ: ಆಟೋರಿಕ್ಷಾ ಹಿಡಿದು ಜಬಲ್‌ಪುರ ಬಸ್‌ ನಿಲ್ದಾಣ ತಲುಪಿದರು. ನಂತರ ಮಗುವಿನ ಶವವನ್ನು ಚೀಲದಲ್ಲಿ ಬಚ್ಚಿಟ್ಟುಕೊಂಡು ಬಸ್ ಹತ್ತಿದ್ದಾರೆ. ಬಸ್ಸಿನಲ್ಲಿ 150 ಕಿ.ಮೀ. ಕ್ರಮಿಸಿದ ಕುಟುಂಬ ತಡರಾತ್ರಿ ದಿಂಡೋರಿ ಬಸ್ ನಿಲ್ದಾಣ ತಲುಪಿತು. ಬಸ್ ನಿಲ್ದಾಣದಲ್ಲಿ ಕುಟುಂಬಸ್ಥರು ತಮ್ಮ ಸಂಬಂಧಿಕರಿಗಾಗಿ ಕಾಯುತ್ತಿದ್ದರು. ಆದರೆ, ಯಾರೂ ಅವರಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ.

ಮಗುವಿನ ಸಂಬಂಧಿ ಸೂರಜ್ತಿಯಾ ಬಾಯಿ ಅವರನ್ನು, ಮಗುವಿನ ಶವವನ್ನು ಚೀಲದಲ್ಲಿ ಏಕೆ ಇಟ್ಟುಕೊಂಡಿದ್ದೀರಿ ಎಂದು ವರದಿಗಾರರು ಕೇಳಿದರು. ಅದಕ್ಕೆ ಅವರು, ತಮ್ಮ ಗ್ರಾಮಕ್ಕೆ ಹೋಗಲು ಬೇರೆ ದಾರಿಯಿಲ್ಲ. ವಿಧಿಯಿಲ್ಲದೇ ಬಸ್​ನಲ್ಲಿ ಪ್ರಯಾಣ ಬೆಳೆಸಬೇಕಾಯಿತು ಎಂದು ಉತ್ತರಿಸಿದರು.

ಒಂದು ತಿಂಗಳ ಹಿಂದೆ, ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ನವಜಾತ ಶಿಶುವಿನ ತಂದೆ ಮಗುವಿನ ಮೃತದೇಹದೊಂದಿಗೆ ಬಸ್‌ನಲ್ಲಿ 200 ಕಿಲೋ ಮೀಟರ್ ಪ್ರಯಾಣಿಸಿದ ಘಟನೆ ನಡೆದಿತ್ತು. ಈ ಘಟನೆ ಬೆಳಕಿಗೆ ಬಂದ ನಂತರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಉಪ ಮುಖ್ಯ ವೈದ್ಯಕೀಯ ಅಧಿಕಾರಿಯಿಂದ ವರದಿ ಕೇಳಿದ್ದರು.

ಇದನ್ನೂ ಓದಿ: ಸಿಂಗಾಪುರದಲ್ಲಿ ಕಟ್ಟಡ ಅವಶೇಷಗಳಡಿ ಭಾರತೀಯ ಕಾರ್ಮಿಕನ ಶವ ಪತ್ತೆ

ಇದನ್ನೂ ಓದಿ: ಹೆದ್ದಾರಿಯಲ್ಲಿ ವಾಹನ ತಡೆದು ಚಾಲಕನ ಹತ್ಯೆ; ಲಕ್ಷಾಂತರ ಮೌಲ್ಯದ ಸ್ಟೀಲ್‌ನೊಂದಿಗೆ ದುಷ್ಕರ್ಮಿಗಳು ಪರಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.