ETV Bharat / bharat

ಪವಾಡದ ಶಸ್ತ್ರಚಿಕಿತ್ಸೆ: ಸೈನಿಕನ ಎದೆಯಿಂದ ಜೀವಂತ ಗ್ರೆನೇಡ್ ತೆಗದ ಉಕ್ರೇನಿಯನ್ ಡಾಕ್ಟರ್​

ಯಾವುದೇ ಕ್ಷಣದಲ್ಲಾದರೂ ಗ್ರೆನೇಡ್ ಸ್ಫೋಟಿಸಬಹುದು ಎಂದು ತಿಳಿದ ನಂತರವೂ ಎದೆಗುಂದದೇ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ - ವೈದ್ಯರನ್ನು ಕೊಂಡಾಡಿದ ನೆಟಿಜೆನ್ಸ್​​.

ukrainian-surgeon-removes-live-grenade-from-soldier-chest
ಪವಾಡ ಶಸ್ತ್ರಚಿಕಿತ್ಸೆ: ಸೈನಿಕನ ಎದೆಯಿಂದ ಜೀವಂತ ಗ್ರೆನೇಡ್ ತೆಗದ ಉಕ್ರೇನಿಯನ್ ಡಾಕ್ಟರ್​
author img

By

Published : Jan 11, 2023, 10:29 PM IST

ಹೈದರಾಬಾದ್: ಉಕ್ರೇನ್​ ದೇಶದ ಬಖ್ಮುತ್ ಎಂಬ ಪ್ರದೇಶದಲ್ಲಿ ನಡೆದ ಕದನಲ್ಲಿ ಸೈನಿಕನ ಎದೆಯಲ್ಲಿ ಸಿಲುಕಿದ್ದ ಜೀವಂತ ಗ್ರೆನೇಡ್ ಅನ್ನು ಹೊರ ತೆಗೆಯುವ ಮೂಲಕ ಉಕ್ರೇನ್ ವೈದ್ಯರೊಬ್ಬರು ಪವಾಡ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಗ್ರೆನೇಡ್ ಸ್ಫೋಟಿಸಬಹುದು ಎಂದು ತಿಳಿದ ನಂತರವೂ ಎದೆ ಗುಂದದೆ ಶಸ್ತ್ರಚಿಕಿತ್ಸೆಯನ್ನು ಆಂಡ್ರಿ ವೆರ್ಬಾ ಎಂಬ ವೈದ್ಯನು ದೈರ್ಯಗೆಡದೇ ಪೂರ್ಣಗೊಳಿಸಿದ್ದಾರೆ.

"ಹೃದಯಕ್ಕೆ ಆಗುವ ಪ್ರತಿಯೊಂದು ಗಾಯವೂ ಮಾರಣಾಂತಿಕವಲ್ಲ, ಯೋಧನ ದೇಹದಲ್ಲಿ ಸಿಲುಕಿದ್ದ ಸ್ಫೋಟಗೊಳ್ಳದ ವೋಗ್​ ಗ್ರೆನೇಡ್ ಅನ್ನು ಹೊರ ತೆಗೆದುಹಾಕಲು ಮಿಲಿಟರಿ ವೈದ್ಯರು ದೀರ್ಘಾವಧಿ ಕಾಲ ಕಾರ್ಯಾಚರಣೆ ನಡೆಸಿದರು. ಇಬ್ಬರು ಸಪ್ಪರ್‌ಗಳ ಸಮ್ಮುಖದಲ್ಲಿ ಬಾಂಬ್​ ಅನ್ನು ವೈದ್ಯರ ಮೂಲಕ ತೆಗೆಯಲಾಗಿದೆ ಎಂದು" ಉಕ್ರೇನ್‌ನ ರಕ್ಷಣಾ ಉಪ ಸಚಿವರು ಹನ್ನಾ ಮಾಲಿಯಾರ್ ಮಂಗಳವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಉಕ್ರೇನ್‌ನ ಸಶಸ್ತ್ರ ಪಡೆಗಳ ಅತ್ಯಂತ ಅನುಭವಿ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರಾದ ಆಂಡ್ರಿ ವೆರ್ಬಾ ಅವರು, ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ, ಯಾವುದೇ ಕ್ಷಣದಲ್ಲಿ ಗ್ರೆನೇಡ್ ಸ್ಫೋಟಗೊಳ್ಳಬಹುದಾಗಿರುವುದರಿಂದ ಎಲೆಕ್ಟ್ರೋಕೋಗ್ಯುಲೇಷನ್ ಇಲ್ಲದೇ ಶಸ್ತ್ರ ಚಿಕಿತ್ಸೆ ನಡೆಸಲಾಯಿತು ಎಂದು ಉಕ್ರೇನಿಯನ್​​ ಸಚಿವರು ಹೇಳಿದರು. "ಆಪರೇಟಿವ್ ಇಂಟರ್​ವೆನ್​ಷನ್​ ಯಶಸ್ವಿಯಾಗಿದೆ, ಮತ್ತು ಗಾಯಗೊಂಡ ಸೈನಿಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮತ್ತು ಚೇತರಿಸಿಕೊಳ್ಳುವುದಕ್ಕಾಗಿ ಬೇರೆಡೆ ಕಳುಹಿಸಲಾಗಿದೆ" ಎಂದು ಸಚಿವರು ಹೇಳಿದರು.

ವರದಿಗಳ ಪ್ರಕಾರ, ರೈಫಲ್‌ಗೆ ಜೋಡನೆಯಾಗಿದ್ದ ಗ್ರೆನೇಡ್ ಲಾಂಚರ್‌ನಿಂದ ಪೈರಿಂಗ್​ ಮಾಡಲಾಗಿದ್ದು, ಅದು ನೇರವಾಗಿ ಸೈನಿಕನ ಎದೆಗೆ ತಗುಲಿದೆ. ಆಪರೇಷನ್​ ಮಾಡುವ ಸಂದರ್ಭದಲ್ಲಿ ಸ್ಫೋಟದ ಭೀತಿಯಿಂದಾಗಿ ಸಹಾಯಕ್ಕಾಗಿ ಇನ್ನಿಬ್ಬರು ಸೈನಿಕರ ಜತೆಗೂಡಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಅವರು ಫೇಸ್​​ಬುಕ್​ನಲ್ಲಿ ಮಾಹಿತಿ ನೀಡಿದ್ದಾರೆ.

ಎಲೆಕ್ಟ್ರೋಕೋಗ್ಯುಲೇಷನ್ ಬಳಸಿ ಶಸ್ತ್ರ ಚಿಕಿತ್ಸೆ: ಎಲೆಕ್ಟ್ರೋಕೋಗ್ಯುಲೇಷನ್ ಎನ್ನುವುದು ಶಸ್ತ್ರಚಿಕಿತ್ಸೆಯಲ್ಲಿನ ಪ್ರಕ್ರಿಯೆಯಾಗಿದ್ದು, ಅದು ರಕ್ತಸ್ರಾವವನ್ನು ನಿಯಂತ್ರಿಸಲು ಮತ್ತು ಅಸಹಜ ಅಂಗಾಂಶವನ್ನು ನಾಶಮಾಡಲು ಬಿಸಿಯಾದ ಶಾಖವನ್ನು ಒದಗಿಸುತ್ತದೆ. ಉಕ್ರೇನ್​​ನಲ್ಲಿ ರಷ್ಯಾದ ಆಕ್ರಮಣ ಹೆಚ್ಚಾಗುತ್ತಲೇ ಇದ್ದು, ಯುದ್ಧವು ಸದ್ಯಕ್ಕೆ ಮುಗಿಯುವ ಹಾಗೇ ಕಾಣುತ್ತಿಲ್ಲ, ರಷ್ಯಾ ಇನ್ನು 500,000 ಸೈನಿಕರನ್ನು ಕರೆಸಿಕೊಳ್ಳಲು ತಿರ್ಮಾನಿಸಿದೆ ಎಂದು ಮೂಲಗಳಿಂದ ಮಾಹಿತಿ ಬಂದಿದೆ. ಬಖ್ಮುತ್‌ ನಗರದಿಂದ ಐದು ಮೈಲಿಗಳ ಈಶಾನ್ಯದಲ್ಲಿರುವ ಸಣ್ಣ ಉಪ್ಪು ಗಣಿಗಾರಿಕೆ ಪಟ್ಟಣವಾದ ಸೋಲೆಡಾರ್‌ನಲ್ಲಿ ರಷ್ಯಾದ ಪಡೆಗಳು ಬೀಡು ಬಿಟ್ಟಿದ್ದು ದಿನೇ ದಿನೇ ತಮ್ಮ ಆಕ್ರಮಣವನ್ನು ಹೆಚ್ಚಿಸುತ್ತಿವೆ.

ವೈದ್ಯರ ಈ ಶಸ್ತ್ರಚಿಕಿತ್ಸೆಗೆ ನೆಟಿಜನ್ಸ್​​ ಗುಣಗಾನ: ಪವಾಡದ ಶಸ್ತ್ರಚಿಕಿತ್ಸೆಯನ್ನು ಕೊಂಡಾಡಿದ ನೆಟಿಜನ್ಸ್​ "ಶಸ್ತ್ರ ಚಿಕಿತ್ಸೆಯನ್ನು ಕೈಗೊಂಡ ವೈದ್ಯರ ಕೆಲಸ ನಿಜವಾಗಿಯೂ ಅದ್ಭುತ, ಅವರು ದೇವರ ಸಮಾನ. ಆತ್ಮೀಯ ದೇವರಿಗೆ ಧನ್ಯವಾದಗಳು" ಎಂದು ಒಬ್ಬ ಸಾಮಾಜಿಕ ಜಾಲತಾಣದ ಮೂಲಕ ತನ್ನ ಅನಿಸಿಕೆ ಪೋಸ್ಟ್​ ಮಾಡಿದ್ದಾನೆ.ಇನ್ನೋಬ್ಬ ವ್ಯಕ್ತಿಯು ತನ್ನ ಟ್ವಿಟರ್​​ ಖಾತೆಯಲ್ಲಿ "ದೇವರು ಈ ವೈದ್ಯರನ್ನು ರಕ್ಷಿಸಲಿ ಮತ್ತು ಅವರಂತೇ ಹೆಚ್ಚಿನ ವೈದ್ಯರನ್ನು ಈ ಭೂಮಿಗೆ ಕಳುಹಿಸಲಿ.. ದೇವರು ಉಕ್ರೇನ್ ಜನರನ್ನು ಕಾಪಾಡಲಿ" ಎಂದು ಬರೆದುಕೊಂಡಿದ್ದಾರೆ.

''ಅಂತಹ ಕಠಿಣ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರೂ ಧೈರ್ಯದಿಂದ ಶಸ್ತ್ರಚಿಕಿತ್ಸೆ ಕ್ರಿಯೆಯನ್ನು ನಡೆಸಿದ್ದಾರೆ. ನನ್ನ ಪ್ರಾರ್ಥನೆ ಯಾವಾಗಲೂ ನಿಮ್ಮೊಂದಿಗೆ ಇರುತ್ತವೆ." ಎಂದು ಮತ್ತೊಮ್ಮ ವೈದ್ಯರ ಈ ಕೆಲಸಕ್ಕೆ ಬೇಷ್​ ಎಂದಿದ್ದಾನೆ.

ಇದನ್ನೂ ಓದಿ: ಮೊಟ್ಟಮೊದಲ ಬಾರಿಗೆ ಚೆನ್ನೈನಲ್ಲಿ ಜಲ್ಲಿಕಟ್ಟು.. ಚೆನ್ನೈಗೆ ಆಗಮಿಸುತ್ತಿರುವ ದಕ್ಷಿಣ ತಮಿಳುನಾಡು ಕ್ರೀಡೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.