ETV Bharat / bharat

ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಉಕ್ರೇನ್​​ನಲ್ಲಿರುವ ಭಾರತೀಯ ರಾಯಭಾರ ಕಚೇರಿ​ ಸೂಚನೆ - ಉಕ್ರೇನ್​ನಲ್ಲಿ ಸಿಲುಕಿದ್ದಾರೆ ಸಾವಿರಾರು ಭಾರತೀಯರು

ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ರೊಮೇನಿಯಾ ಮತ್ತು ಹಂಗೇರಿಯಿಂದ ಸ್ಥಳಾಂತರಿಸುವ ಮಾರ್ಗಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮತ್ತು ಉಕ್ರೇನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಕೆಲಸ ಮಾಡುತ್ತಿದೆ..

ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಉಕ್ರೇನ್​ ರಾಯಭಾರ ಕಚೇರಿಯಿಂದ ಸೂಚನೆ

author img

By

Published : Feb 25, 2022, 5:46 PM IST

ನವದೆಹಲಿ:ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ರೊಮೇನಿಯಾ ಮತ್ತು ಹಂಗೇರಿಯಿಂದ ಸ್ಥಳಾಂತರಿಸುವ ಮಾರ್ಗಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮತ್ತು ಉಕ್ರೇನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಕೆಲಸ ಮಾಡುತ್ತಿದೆ ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇಂದು ತಿಳಿಸಿದೆ.

ಭಾರತ ಸರ್ಕಾರ ಮತ್ತು ಭಾರತದ ರಾಯಭಾರ ಕಚೇರಿಯು ರೊಮೇನಿಯಾ ಮತ್ತು ಹಂಗೇರಿಯಿಂದ ಸ್ಥಳಾಂತರಿಸುವ ಮಾರ್ಗಗಳನ್ನು ಸ್ಥಾಪಿಸಲು ಕೆಲಸ ಮಾಡುತ್ತಿದೆ. ಪ್ರಸ್ತುತ, CHOP-ZAHONY ಹಂಗೇರಿಯನ್ ಬಾರ್ಡರ್ ಉಜ್ಹೋರೋಡ್ ಹಾಗೂ PORUBNE-SIRET ರೊಮೇನಿಯನ್ ಬಾರ್ಡರ್ ಬಳಿ ಚೆರ್ನಿವ್ಟ್ಸಿ ಯಲ್ಲಿ ಚೆಕ್​ಪಾಯಿಂಟ್​ಗಳನ್ನು ತೆರೆಯಲಾಗಿದೆ ಎಂದು ಹೇಳಿದರು. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಈ ಮಾಹಿತಿ ಬಿಡುಗಡೆ ಮಾಡಲಾಗಿದೆ.

ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ, ಸಂಬಂಧಿತ ಗಡಿ ಚೆಕ್‌ಪೋಸ್ಟ್‌ಗಳಿಗೆ ಹೊರಡಲು ಸೂಚಿಸಿದೆ. ಮಾರ್ಗಗಳು ಸಂಪೂರ್ಣವಾಗಿ ಕಾರ್ಯಗತಗೊಂಡ ನಂತರ ಸಾರಿಗೆಗಾಗಿ ತಮ್ಮದೇ ಆದ ವ್ಯವಸ್ಥೆಗಳ ಮೂಲಕ ಭಾರತೀಯ ಪ್ರಜೆಗಳು ಪ್ರಯಾಣ ಬೆಳೆಸಬಹುದು. ಗಡಿಯ ಮೂಲಕ ತೆರಳುವವರು ತಮ್ಮ ಅನುಕೂಲಕ್ಕಾಗಿ ಆಯಾ ಚೆಕ್‌ಪೋಸ್ಟ್‌ಗಳಲ್ಲಿ ಸ್ಥಾಪಿಸಲಾದ ಸಹಾಯವಾಣಿ ಸಂಖ್ಯೆಗಳೊಂದಿಗೆ ಸಂಪರ್ಕದಲ್ಲಿರಿ ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: ಉಕ್ರೇನ್​ ಶಸ್ತ್ರಾಸ್ತ್ರ ಕೆಳಗಿಳಿಸಿದರೆ ಮಾತುಕತೆಗೆ ಸಿದ್ಧ: ರಷ್ಯಾ ವಿದೇಶಾಂಗ ಸಚಿವ

ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆ: ರಾಯಭಾರ ಕಚೇರಿಯು ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆ ನೀಡಿದ್ದು, ವಿದ್ಯಾರ್ಥಿಗಳ ಪಾಲಕರ ಜೊತೆ ಸಂಪರ್ಕದಲ್ಲಿರಲು ಸಲಹೆ ನೀಡಿದ್ದು, ಪಾಸ್‌ಪೋರ್ಟ್‌ಗಳನ್ನು ಒಯ್ಯಬೇಕು, ತುರ್ತು ವೆಚ್ಚಗಳು ಮತ್ತು ಇತರ ಅಗತ್ಯಗಳಿಗಾಗಿ ಹಣ ಹಾಗೂ ಸಾಧ್ಯವಾದರೆ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ. ಇನ್ನು ಪ್ರಮುಖವಾಗಿ ಭಾರತೀಯ ಧ್ವಜವನ್ನು ಮುದ್ರಿಸಿ ಮತ್ತು ಪ್ರಯಾಣಿಸುವಾಗ ವಾಹನಗಳು ಮತ್ತು ಬಸ್‌ಗಳಲ್ಲಿ ಅಂಟಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.